ಪ್ರಧಾನಿ ನರೇಂದ್ರ ಮೋದಿಯವರು ಇಂದು ಸ್ವಲೋಕಸಭಾಕ್ಷೇತ್ರ ವಾರಾಣಸಿಗೆ ಭೇಟಿ ನೀಡಿ ಸುಮಾರು 1,500 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ಮೆಡಿಕಲ್ ಸೈನ್ಸ್ ಇನ್ಸ್ಟಿಟ್ಯೂಟ್ನಲ್ಲಿ 100 ಬೆಡ್ಗಳ ತಾಯಿ-ಮಕ್ಕಳ ಆರೋಗ್ಯ ಕೇಂದ್ರ (MCH), ಬಹು-ಹಂತದ ಪಾರ್ಕಿಂಗ್ ವ್ಯವಸ್ಥೆಗಳು, ಹೆದ್ದಾರಿ ಅಭಿವೃದ್ಧಿ ಮತ್ತ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಪಟ್ಟ ಕಾಮಗಾರಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆಂದು ಎಎನ್ಐ ವರದಿ ಮಾಡಿದೆ.
ಇಂದು ವಾರಾಣಸಿಗೆ ಭೇಟಿ ನೀಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದರು. ಜು.15ರಂದು ನಾನು ಕಾಶಿಗೆ ಹೋಗುತ್ತಿದ್ದೇನೆ. ಅಲ್ಲಿ ಸುಮಾರು 1500 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇನೆ. ಈ ಕೆಲಸಗಳಿಂದ ಕಾಶಿ ಮತ್ತು ಪೂರ್ವಾಂಚಲ್ ಜನರಿಗೆ ತುಂಬ ಅನುಕೂಲ ಆಗಲಿದೆ ಎಂದು ಹೇಳಿದ್ದರು. ಇಂದು ಸುಮಾರು 11 ಗಂಟೆ ಹೊತ್ತಿಗೆ ಪ್ರಧಾನಿ ಮೋದಿ ವಾರಾಣಸಿ ತಲುಪಲಿದ್ದಾರೆ. ಜಪಾನಿನ ನೆರವಿನೊಂದಿಗೆ ನಿರ್ಮಾಣ ಮಾಡಲಾಗುತ್ತಿರುವ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ ರುದ್ರಾಕ್ಷ್ನ್ನು ಮಧ್ಯಾಹ್ನ 12.15ಕ್ಕೆ ಉದ್ಘಾಟಿಸಲಿದ್ದಾರೆ ಎಂದು ಹೇಳಲಾಗಿದೆ. ಹಾಗೇ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜನಿಯರಿಂಗ್ ಮತ್ತು ತಂತ್ರಜ್ಞಾನದ ಕೌಶಲ್ಯ ಮತ್ತು ತಾಂತ್ರಿಕ ಸಹಕಾರ ಕೇಂದ್ರ, ಜಲಜೀವನ ಮಿಶನ್ನಡಿ 143 ಗ್ರಾಮೀಣ ಯೋಜನೆಗಳು, ಕಾರ್ಖಿಯಾನ್ವ್ನಲ್ಲಿ ಒಂದು ಮಾವು ಮತ್ತು ತರಕಾರಿ ಪ್ಯಾಕ್ಹೌಸ್ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪಿಸಲಿದ್ದಾರೆ.
ಬಿಗಿ ಭದ್ರತೆ
ಇನ್ನು ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ವಾರಾಣಸಿಯ ಬಾಬಟ್ಪುರ ಏರ್ಪೋರ್ಟ್ ಸೇರಿ ಎಲ್ಲ ಕಡೆ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಸಿದ್ಧತೆಗಳನ್ನೆಲ್ಲ ನಿನ್ನೆ (ಬುಧವಾರ) ಸಂಜೆಯೇ ಪೂರ್ಣಗೊಳಿಸಲಾಗಿದ್ದು, 11 ಗಂಟೆಗೆ ನರೇಂದ್ರ ಮೋದಿ ವಾರಾಣಸಿ ತಲುಪಲಿದ್ದಾರೆ. ಇನ್ನು ಭದ್ರತಾ ಸಿಬ್ಬಂದಿಗೆ ಈಗಾಗಲೇ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಲಾಗಿದೆ. ನೆಗೆಟಿವ್ ರಿಪೋರ್ಟ್ ಕೂಡ ಸಿಕ್ಕಿದೆ.
Tomorrow, 15th July, I will be in Kashi to inaugurate a wide range of development works worth over Rs. 1500 crore. These works will further ‘Ease of Living’ for the people of Kashi and Poorvanchal. https://t.co/jssVnz5bVa
— Narendra Modi (@narendramodi) July 14, 2021
In the past few years, the Centre and UP Government have done extensive work in the health sector. As a part of these efforts, the 100 bed MCH wing in BHU will be inaugurated. The project will make quality healthcare easily accessible to the people of Kashi and surrounding areas. pic.twitter.com/CnUEpRAVMx
— Narendra Modi (@narendramodi) July 14, 2021
ಇದನ್ನೂ ಓದಿ: India vs England: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಇಬ್ಬರು ಕ್ರಿಕೆಟಿಗರಿಗೆ ಕೊರೋನಾ ಪಾಸಿಟಿವ್
PM Narendra Modi to visit Varanasi today and will inaugurate Development project
Published On - 10:01 am, Thu, 15 July 21