ದೆಹಲಿ ಡಿಸೆಂಬರ್ 08: ಅಮೆರಿಕ ಮೂಲದ ‘ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್’ ಮಾರ್ನಿಂಗ್ ಕನ್ಸಲ್ಟ್ (Morning Consult) ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಶೇಕಡಾ 76 ರೇಟಿಂಗ್‌ನೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಅಗ್ರ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿ ಅವರ ಆನಂತರದ ಸ್ಥಾನದಲ್ಲಿ ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (66%), ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ (58%) ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (49%) ಇದ್ದಾರೆ. ಅದೇ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು 40% ರೇಟಿಂಗ್‌ನೊಂದಿಗೆ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ, ಇದು ಮಾರ್ಚ್‌ನಿಂದ ಅವರ ಅತ್ಯಧಿಕ ರೇಟಿಂಗ್ ಆಗಿದೆ. ನವೆಂಬರ್ 29ರಿಂದ ಡಿಸೆಂಬರ್ 5ರ ಅವಧಿಯಲ್ಲಿನ ಸಮೀಕ್ಷೆಯಾಗಿದೆ ಇದು. ಈ ಬಾರಿಯ ಸಮೀಕ್ಷೆಯಲ್ಲಿ ಶೇ 18 ಜನರು ಮೋದಿಯವರನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ರಾಜಕೀಯ ಗುಪ್ತಚರ ಸಂಶೋಧನಾ ಸಂಸ್ಥೆಯು ಸಂಗ್ರಹಿಸಿದ ದತ್ತಾಂಶವು 22 ಜಾಗತಿಕ ನಾಯಕರ ಸಮೀಕ್ಷೆಯನ್ನು ಆಧರಿಸಿದೆ. ಸೆಪ್ಟೆಂಬರ್ 6-12, 2023 ರಿಂದ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ಪಿಎಂ ಮೋದಿ ಅವರು ಪಟ್ಟಿಯಲ್ಲಿ ಅತ್ಯಂತ ಕಡಿಮೆ ಅಂದರೆ ಶೇ 18ಜನರು ಒಪ್ಪುವುದಿಲ್ಲ ಎಂಬ ರೇಟಿಂಗ್ ಅನ್ನು ಹೊಂದಿದ್ದಾರೆ.
ನಾಯಕರನ್ನು ಒಪ್ಪುವುದಿಲ್ಲ ಎಂಬ ಪಟ್ಟಿಯಲ್ಲಿರುವ ಅಗ್ರ 10 ನಾಯಕರಲ್ಲಿ, ಕೆನಡಾದ ಜಸ್ಟಿನ್ ಟ್ರುಡೊ ಅಗ್ರ ಸ್ಥಾನದಲ್ಲಿದ್ದಾರೆ. ಅವರು ಶೇಕಡಾ 58 ಮಂದಿ ಟ್ರುಡೊ ಅವರನ್ನು ಒಪ್ಪುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ನಾಯಕ
ಈ ಹಿಂದಿನ ರೇಟಿಂಗ್‌ಗಳಲ್ಲಿಯೂ ಮೋದಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದರು. ಆಗ ಅವರು ಜಾಗತಿಕ ನಾಯಕರ ಪಟ್ಟಿಯಲ್ಲಿ ಶೇ 76 ರಷ್ಟು ರೇಟಿಂಗ್‌ನೊಂದಿಗೆ ಅಗ್ರಸ್ಥಾನ ಪಡೆದಿದ್ದರು. ಹಿಂದಿನ ರೇಟಿಂಗ್ನಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಶೇಕಡಾ 40, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಶೇಕಡಾ 37, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶೇಕಡಾ 27 ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಶೇಕಡಾ 24 ರ ಅನುಮೋದನೆಯನ್ನು ಪಡೆದಿದ್ದಾರೆ. ಈ ರೇಟಿಂಗ್‌ಗಳು ಸೆಪ್ಟೆಂಬರ್ 6 ರಿಂದ 12 ರವರೆಗೆ ಸಂಗ್ರಹಿಸಿದ ಡೇಟಾವನ್ನು ಆಧರಿಸಿವೆ ಎಂದು ಮಾರ್ನಿಂಗ್ ಕನ್ಸಲ್ಟ್ ಹೇಳಿದೆ. ಅಮೆರಿಕದಿಂದ, ಸರಾಸರಿ 45,000 ಮಂದಿ ಸಮೀಕ್ಷೆಯಲ್ಲಿ ಭಾಗಿಯಾದರೆ, ಇತರ ದೇಶಗಳಿಂದ, ಸರಿಸುಮಾರು 500 ರಿಂದ 5,000 ವರೆಗೆ ಜನ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಮಾರ್ನಿಂಗ್ ಕನ್ಸಲ್ಟ್ ಪ್ರಕಾರ ಇದು ರಾಜಕೀಯ ಚುನಾವಣೆಗಳು, ಚುನಾಯಿತ ಅಧಿಕಾರಿಗಳು ಮತ್ತು ಮತದಾನದ ಸಮಸ್ಯೆಗಳ ಕುರಿತು ರಿಯಲ್ ಟೈಂ ಮತದಾನದ ಡೇಟಾವನ್ನು ಒದಗಿಸುತ್ತದೆ. ಮಾರ್ನಿಂಗ್ ಕನ್ಸಲ್ಟ್ ಪ್ರತಿದಿನ 20,000 ಕ್ಕೂ ಹೆಚ್ಚು ಜಾಗತಿಕ ಸಂದರ್ಶನಗಳನ್ನು ನಡೆಸುತ್ತದೆ. ಎಲ್ಲಾ ಸಂದರ್ಶನಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:45 pm, Fri, 8 December 23