- Kannada News Photo gallery Morning Consult survey PM Narendra Modi tops approval ratings with Percent 78 popularity among all world leaders
ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ನಾಯಕ
'ಮಾರ್ನಿಂಗ್ ಕನ್ಸಲ್ಟ್' ಸಮೀಕ್ಷೆಯು ರೇಟಿಂಗ್‌ಗಳಿಗಾಗಿ 22 ಜಾಗತಿಕ ನಾಯಕರನ್ನು ಸಮೀಕ್ಷೆ ಮಾಡಿದೆ. ಇದರಲ್ಲಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ. ಜಾಗತಿಕವಾಗಿ 22 ಜನಪ್ರಿಯ ನಾಯಕರಲ್ಲಿ ವ್ಲಾಡಿಮಿರ್ ಪುಟಿನ್ ಅಥವಾ ಷಿ ಜಿನ್‌ಪಿಂಗ್ ಕಾಣಿಸಿಕೊಂಡಿಲ್ಲ.
Updated on: May 25, 2023 | 1:07 PM

ಅಮೆರಿಕ ಮೂಲದ ಸಲಹಾ ಸಂಸ್ಥೆ 'ಮಾರ್ನಿಂಗ್ ಕನ್ಸಲ್ಟ್' ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ 78 ರ ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಗುರುತಿಸಲ್ಪಟ್ಟಿದ್ದಾರೆ.

ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು 68 ಶೇಕಡಾ ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರು

ಸ್ವಿಸ್ ಅಧ್ಯಕ್ಷ ಅಲೈನ್ ಬರ್ಸೆಟ್ 62 ಶೇಕಡಾ ಅನುಮೋದನೆ ರೇಟಿಂಗ್‌ನೊಂದಿಗೆ ಮೂರನೇ ಸ್ಥಾನವನ್ನು ಪಡೆದರು.

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು 58 ಶೇಕಡಾ ಅನುಮೋದನೆಯೊಂದಿಗೆ 4 ನೇ ಸ್ಥಾನದಲ್ಲಿದ್ದಾರೆ.

ಹೊಸದಾಗಿ ಆಯ್ಕೆಯಾದ ಇಟಲಿಯ ಜಾರ್ಜಿಯಾ ಮೆಲೋನಿ, ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ 49 ಶೇಕಡಾ ರೇಟಿಂಗ್‌ಗಳೊಂದಿಗೆ 6 ನೇ ಸ್ಥಾನದಲ್ಲಿದ್ದಾರೆ.

ಶೇಕಡಾ 42 ರೇಟಿಂಗ್ ಗಳೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ 7ನೇ ಸ್ಥಾನದಲ್ಲಿದ್ದಾರೆ

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಶೇ 39 ರೇಟಿಂಗ್ ಲಭಿಸಿದೆ

ಬ್ರೆಜಿಲ್‌ನ ಹೊಸದಾಗಿ ಚುನಾಯಿತ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು 50 ಶೇಕಡಾ ರೇಟಿಂಗ್‌ಗಳೊಂದಿಗೆ 5 ನೇ ಸ್ಥಾನದಲ್ಲಿದ್ದಾರೆ.

ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಶೇಕಡಾ 34 ರಷ್ಟು ರೇಟಿಂಗ್ ಗಳಿಸಿದ್ದಾರೆ

ಬ್ರಿಟನ್‌ನ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಕೇವಲ 33 ಶೇಕಡಾ ರೇಟಿಂಗ್ ಹೊಂದಿದ್ದಾರೆ.

ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿದಾ ಅವರು ಕೇವಲ 31 ಶೇಕಡಾ ರೇಟಿಂಗ್ ಹೊಂದಿದ್ದಾರೆ



















