ಸಿದ್ದಗಂಗಾ ಶ್ರೀಗಳ ಸ್ಮರಿಸಿದ ಪ್ರಧಾನಿ ಮೋದಿ.. ಉದಾತ್ತ ಆಲೋಚನೆಗಳ ಸ್ವಾಮೀಜಿಗೆ ಶಿರಬಾಗಿ ನಮಿಸುವೆ ಎಂದ್ರು

|

Updated on: Apr 01, 2021 | 12:06 PM

ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಅವರ ಜಯಂತಿಯಂದು ಶಿರಬಾಗಿ ನಮಿಸುವೆ. ಸಮಾಜಕ್ಕೆ ಸ್ವಾಮಿಗಳು ಸಲ್ಲಿಸಿದ ಸೇವೆ, ಬಡವರ ಬಗೆಗಿನ ಅವರ ಕಾಳಜಿ ಸ್ಮರಣಾರ್ಹ. ಶಿವಕುಮಾರ ಸ್ವಾಮೀಜಿಯವರ ಉದಾತ್ತ ಆಲೋಚನೆ, ಆದರ್ಶಗಳಿಂದ ನಾವು ಸ್ಪೂರ್ತಿ ಪಡೆದಿದ್ದೇವೆ: ನರೇಂದ್ರ ಮೋದಿ

ಸಿದ್ದಗಂಗಾ ಶ್ರೀಗಳ ಸ್ಮರಿಸಿದ ಪ್ರಧಾನಿ ಮೋದಿ.. ಉದಾತ್ತ ಆಲೋಚನೆಗಳ ಸ್ವಾಮೀಜಿಗೆ ಶಿರಬಾಗಿ ನಮಿಸುವೆ ಎಂದ್ರು
ಸಿದ್ದಗಂಗಾ ಸ್ವಾಮೀಜಿಗಳನ್ನು ನರೇಂದ್ರ ಮೋದಿ ಭೇಟಿಯಾಗಿದ್ದ ಸಂದರ್ಭದಲ್ಲಿ ತೆಗೆದಿದ್ದ ಫೋಟೋ
Follow us on

ತುಮಕೂರು: ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಜಯಂತಿ ಪ್ರಯುಕ್ತ ಅವರನ್ನು ಸ್ಮರಿಸಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ಟ್ವಿಟರ್​ ಖಾತೆಯ ಮುಖೇನ ಸ್ವಾಮೀಜಿಗಳಿಗೆ ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ನರೇಂದ್ರ ಮೋದಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಅವರ ಜಯಂತಿಯಂದು ಶಿರಬಾಗಿ ನಮಿಸುವೆ. ಸಮಾಜಕ್ಕೆ ಸ್ವಾಮಿಗಳು ಸಲ್ಲಿಸಿದ ಸೇವೆ, ಬಡವರ ಬಗೆಗಿನ ಅವರ ಕಾಳಜಿ ಸ್ಮರಣಾರ್ಹ. ಶಿವಕುಮಾರ ಸ್ವಾಮೀಜಿಯವರ ಉದಾತ್ತ ಆಲೋಚನೆ, ಆದರ್ಶಗಳಿಂದ ನಾವು ಸ್ಪೂರ್ತಿ ಪಡೆದಿದ್ದೇವೆ ಎಂದು ಹಂಚಿಕೊಂಡಿದ್ದಾರೆ. ಶಿವಕುಮಾರ ಸ್ವಾಮಿಗಳೊಂದಿಗಿನ ಭೇಟಿಯ ವೇಳೆ ತೆಗೆಸಿಕೊಂಡಿದ್ದ ಹಳೆಯ ಚಿತ್ರಗಳನ್ನು ಹಂಚಿಕೊಂಡಿರುವ ನರೇಂದ್ರ ಮೋದಿ, ತಾವು ಸ್ವಾಮಿಗಳಿಗೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವನ್ನು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:
ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 114ನೇ ಜನ್ಮಜಯಂತಿ: ಮಠದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ

111 ವರ್ಷ ಕಾಲ ಬದುಕಿದ್ದ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ವೀರಾಪುರದಲ್ಲಿ ತಲೆ ಎತ್ತಲಿದೆ!

Published On - 12:05 pm, Thu, 1 April 21