ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರು ಚಾರ್ ಧಾಮ್ ಯಾತ್ರೆಯಲ್ಲಿ ಬಿಡುವಿಲ್ಲದ ಸಮಯವನ್ನು ಕಳೆದರು. ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಭೇಟಿ ನೀಡಿದರು. ಕೇದಾರನಾಥದಲ್ಲಿ ಮೋದಿ ರುದ್ರಾಭಿಷೇಕ ಮಾಡಿದರು. ಭಾರತ-ಚೀನಾ ಗಡಿಯಲ್ಲಿರುವ ಕೊನೆಯ ಗ್ರಾಮವಾದ ಮಾನಾಗೆ ಪ್ರಧಾನಿ ಮೋದಿ ಭೇಟಿ ನೀಡಿದರು. ಬಳಿಕ ಸ್ಥಳೀಯರೊಂದಿಗೆ ಸಂವಾದ ನಡೆಸಿದರು. ಅಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇದಾರನಾಥ ಮತ್ತು ಬದರಿನಾಥನ ದರ್ಶನದಿಂದ ಅವರ ಜೀವನ ಧನ್ಯವಾಗಿದೆ ಎಂದು ಹೇಳಿದರು.
ಮಾನಾ ಗ್ರಾಮವನ್ನು ಭಾರತದ ಕೊನೆಯ ಗ್ರಾಮ ಎಂದು ಕರೆಯಲಾಗುತ್ತದೆ. ಆದರೆ ನನಗೆ ಗಡಿಭಾಗದ ಪ್ರತಿಯೊಂದು ಹಳ್ಳಿಯೂ ದೇಶದ ಮೊದಲ ಗ್ರಾಮ. ಅಷ್ಟೇ ಅಲ್ಲ ಈ ಗ್ರಾಮ ದೇಶದ ಕಾವಲುಗಾರ ಎಂದು ಹೊಗಳಿದರು. ಬದರಿನಾಥ ಮತ್ತು ಕೇದಾರನಾಥ ಕ್ಷೇತ್ರಗಳನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ದಶಕ ಉತ್ತರಾಖಂಡದ ದಶಕ ಎಂದು ಪ್ರಧಾನಿ ಮೋದಿ ಹೇಳಿದರು. ದೇಶದಿಂದ ಗುಲಾಮ ಮನೋಭಾವನೆ ಹೋಗಲಾಡಬೇಕಿದೆ ಎಂದರು. ಯುವಕರು ತಪ್ಪದೇ ದೇಗುಲಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದರು (PM Modi Uttarakhand visit).
ಪಿಎಂ ಮೋದಿ ಅವರು ತಮ್ಮ ಸ್ಥಳೀಯ ರಾಜ್ಯಗಳ ಪ್ರಯೋಜನಗಳು ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಕಾರ್ಮಿಕರಿಂದ ಮಾಹಿತಿ ಪಡೆದರು. ಕಾರ್ಮಿಕರ ಕೋವಿಡ್ ಲಸಿಕೆ ಸ್ಥಿತಿಯ ಬಗ್ಗೆಯೂ ಕೇಳಿತಿಳಿದುಕೊಂಡರು. ಸ್ವಾತಂತ್ರ್ಯದ ನಂತರವೂ ದೇಶವು ಗುಲಾಮಗಿರಿಯಿಂದ ಬಳಲುತ್ತಿದೆ ಮತ್ತು ಅದರ ಅಭಿವೃದ್ಧಿಯ ಬಗ್ಗೆ ದೀರ್ಘಕಾಲದಿಂದ ದ್ವೇಷಪೂರಿತ ಭಾವವಿದೆ ಎಂದು ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ನಮ್ಮ ಸಂಸ್ಕೃತಿಯ ಮೇಲಿನ ಕೀಳರಿಮೆಯೇ ಇದಕ್ಕೆ ಕಾರಣ. ಆದರೆ ಇವು ನಮ್ಮ ಪರಮ ನಂಬಿಕೆಯ ಸ್ಥಳಗಳು ಎಂದರು.
21ನೇ ಶತಮಾನದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಎರಡು ಪ್ರಮುಖ ಆಧಾರ ಸ್ತಂಭಗಳಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಮೊದಲನೆಯದು – ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ. ಎರಡನೆಯದು – ಅಭಿವೃದ್ಧಿಗಾಗಿ ಪ್ರತಿ ಪ್ರಯತ್ನವನ್ನೂ ತಪ್ಪದೆ ಮಾಡುವುದು. ಇಲ್ಲಿನ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಉತ್ತರಾಖಂಡ ರಾಜ್ಯ, ದೇಶ ಮತ್ತು ವಿದೇಶದಲ್ಲಿರುವ ಪ್ರತಿಯೊಬ್ಬ ಭಕ್ತನನ್ನೂ ನಾನು ಪ್ರಶಂಸಿಸುತ್ತೇನೆ. ಗುರುಗಳ ಆಶೀರ್ವಾದ ಮುಂದುವರಿಯಲಿ, ಬಾಬಾ ಕೇದಾರರ ಆಶೀರ್ವಾದ ಮುಂದುವರಿಯಲಿ, ಬದರಿ ವಿಶಾಲಾಕ್ಷನ ಆಶೀರ್ವಾದ ಮುಂದುವರಿಯಲಿ ಎಂದು ಪ್ರಧಾನಿ ಮೋದಿ ಆಶಿಸಿದರು.
ರೋಪ್ ವೇ ನಿರ್ಮಾಣದಿಂದ ಹೇಮಾಖಂಡ ಸಾಹೇಬ್ ಗೆ ಸುಲಭವಾಗಿ ಭೇಟಿ ನೀಡಬಹುದು ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ ಅವರು ಬದರಿನಾಥ್ ಮಾಸ್ಟರ್ ಪ್ಲಾನ್ ಪರಿಶೀಲಿಸಿದರು. ಆದಿ ಗುರು ಶಂಕರಾಚಾರ್ಯರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. 9.7 ಕಿಮೀ ಉದ್ದದ ಗೌರಿಕುಂಡ್-ಕೇದಾರನಾಥ ರೋಪ್ ವೇ ಯೋಜನೆಗೆ ಶಂಕುಸ್ಥಾಪನೆ ಮಾಡಲಾಯಿತು. ಅಲ್ಲಿ ಅವರನ್ನು ಕೆಲಸಗಾರರು ಸುತ್ತುವರೆದಿದ್ದರು. ರೂ.1267 ಕೋಟಿ ವೆಚ್ಚದಲ್ಲಿ ರೋಪ್ ವೇ ನಿರ್ಮಿಸಲಾಗುತ್ತಿದೆ.
ಚಾರ್ ಧಾಮ್ ಸರ್ವಕಾಲ ಹವಾಮಾನ ಹೆದ್ದಾರಿ ನಿರ್ಮಾಣದಿಂದ ಉತ್ತರಾಖಂಡದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮೋದಿ ಹೇಳಿದರು. ಪ್ರವಾಸಿಗರು ಯಾವುದೇ ತೊಂದರೆಯಿಲ್ಲದೆ ತ್ವರಿತವಾಗಿ ಚಾರ್ ಧಾಮ್ ಗೆ ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
देशवासियों से मेरी एक प्रार्थना… pic.twitter.com/gV2t3f6Bvw
— Narendra Modi (@narendramodi) October 21, 2022
Earlier today, I went to the Sri Adi Shankaracharya Samadhi. I also had the opportunity to interact with the Shramjeevis working on the restoration work in Kedarnath. pic.twitter.com/82pMFfM1Jb
— Narendra Modi (@narendramodi) October 21, 2022