PM Modi: ಇಂದಿನಿಂದ ಪೋಲೆಂಡ್‌, ಯುದ್ಧಪೀಡಿತ ಉಕ್ರೇನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಏನು ಅಜೆಂಡಾ?

|

Updated on: Aug 21, 2024 | 7:19 AM

30 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು (ಆಗಸ್ಟ್ 21) ಮತ್ತು ನಾಳೆ ಪೋಲೆಂಡ್‌ಗೆ ಭೇಟಿ ನೀಡಲಿದ್ದಾರೆ. ಅದಾದ ನಂತರ ಆಗಸ್ಟ್ 23ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ.

PM Modi: ಇಂದಿನಿಂದ ಪೋಲೆಂಡ್‌, ಯುದ್ಧಪೀಡಿತ ಉಕ್ರೇನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಏನು ಅಜೆಂಡಾ?
ಪ್ರಧಾನಿ ಮೋದಿ
Follow us on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿನಿಂದ (ಬುಧವಾರ) ಪೋಲೆಂಡ್ ಮತ್ತು ಉಕ್ರೇನ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಇತ್ತೀಚೆಗೆ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ, ಮೊರಾರ್ಜಿ ದೇಸಾಯಿ ಅವರ ನಂತರ 45 ವರ್ಷಗಳಲ್ಲಿ ಯುರೋಪಿಯನ್ ದೇಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ಈ ವರ್ಷ (2024) ಭಾರತ ಮತ್ತು ಪೋಲೆಂಡ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆಗಸ್ಟ್ 21) ಮತ್ತು ಆಗಸ್ಟ್ 22ರಂದು ಪೋಲೆಂಡ್‌ಗೆ ಭೇಟಿ ನೀಡಲಿದ್ದಾರೆ. 45 ವರ್ಷಗಳ ನಂತರ ಭಾರತದ ಪ್ರಧಾನಿ ಪೋಲೆಂಡ್‌ಗೆ ಭೇಟಿ ನೀಡುತ್ತಿರುವ ಕಾರಣ ಇದು ಮಹತ್ವದ ಭೇಟಿಯಾಗಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23ರಂದು ಉಕ್ರೇನ್‌ಗೆ ಅಧಿಕೃತ ಭೇಟಿಯನ್ನು ಕೈಗೊಳ್ಳಲಿದ್ದಾರೆ. ಇದು ಒಂದು ಹೆಗ್ಗುರುತಾಗಿದೆ ಮತ್ತು ಐತಿಹಾಸಿಕ ಭೇಟಿಯಾಗಿದೆ. ನಾವು ನಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ 30 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿರುವುದರಿಂದ ಈ ಭೇಟಿ ಭಾರೀ ಮಹತ್ವ ಪಡೆದಿದೆ.

ಇದನ್ನೂ ಓದಿ: ರಾಖಿಯಲ್ಲಿ ದಾಖಲಾಯ್ತು ತಾಯಿ-ಮಗನ ಆಪ್ತ ಕ್ಷಣ; ಮೋದಿಗೆ ವಿಶೇಷ ರಾಖಿ ಕಟ್ಟಿದ ಬಾಲಕಿ

ಅಜೆಂಡಾದಲ್ಲಿ ಏನಿದೆ?:

ತಮ್ಮ ಭೇಟಿಯ ಸಮಯದಲ್ಲಿ ಪಿಎಂ ನರೇಂದ್ರ ಮೋದಿ ಅವರು ತಮ್ಮ ಪೋಲಿಷ್ ಕೌಂಟರ್ ಡೊನಾಲ್ಡ್ ಟಸ್ಕ್ ಅವರನ್ನು ಭೇಟಿಯಾಗಲಿದ್ದಾರೆ. ಅವರು ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ ಮತ್ತು ಭಾರತೀಯ ಸಮುದಾಯವನ್ನು ಭೇಟಿಯಾಗಲಿದ್ದಾರೆ. ಪೋಲಿಷ್ ರಾಜಧಾನಿ ವಾರ್ಸಾದಲ್ಲಿ ಮೋದಿಯವರಿಗೆ ಇಂದು ಅದ್ದೂರಿ ಸ್ವಾಗತ ನೀಡಲಾಗುವುದು. ಭೇಟಿಯ ಸಮಯದಲ್ಲಿ ಅವರು ವ್ಯಾಪಾರ ಮುಖಂಡರು ಮತ್ತು ಪ್ರಮುಖ ಪರಿಸರಶಾಸ್ತ್ರಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ.

ಪೋಲೆಂಡ್‌ನಲ್ಲಿ 25,000 ಭಾರತೀಯ ಸಮುದಾಯದ ಜನರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸುಮಾರು 5,000 ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ‘ಆಪರೇಷನ್ ಗಂಗಾ’ ಸಮಯದಲ್ಲಿ ಪೋಲೆಂಡ್ ಸರ್ಕಾರ ಮತ್ತು ಜನರು ಅಮೂಲ್ಯವಾದ ಸಹಾಯವನ್ನು ನೀಡಿದ್ದರು. 2022ರಲ್ಲಿ ಪೋಲೆಂಡ್ ಮೂಲಕ 4,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: ಆಗಸ್ಟ್ 21-22ರಂದು ಪೋಲೆಂಡ್​ಗೆ, ಆಗಸ್ಟ್ 23ರಂದು ಉಕ್ರೇನ್​ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಪೋಲೆಂಡ್‌ನಿಂದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ರೈಲ್ ಫೋರ್ಸ್ ಒನ್ ಎಂಬ ರೈಲಿನಲ್ಲಿ ಉಕ್ರೇನ್ ರಾಜಧಾನಿ ಕೈವ್‌ಗೆ ಪ್ರಯಾಣಿಸಲಿದ್ದಾರೆ. ಇದು ಸುಮಾರು 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ರಿಟರ್ನ್ ಟ್ರಿಪ್ ಅದೇ ಅವಧಿಯದ್ದಾಗಿರುತ್ತದೆ. 2022ರಲ್ಲಿ ಉಕ್ರೇನ್​ನ ಕೈವ್ ರಷ್ಯಾದ ಪಡೆಗಳಿಂದ ದಾಳಿಗೊಳಗಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಇದೇ ಮೊದಲ ಬಾರಿಗೆ ಉಕ್ರೇನ್​ಗೆ ಭೇಟಿ ನೀಡುತ್ತಿದ್ದಾರೆ. ಹಾಗೇ, 30 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಇದು ಮೊದಲ ಭೇಟಿಯಾಗಿದೆ. ಕೈವ್ ಮೇಲೆ ರಷ್ಯಾ ಹೊಸ ಮಿಲಿಟರಿ ಆಕ್ರಮಣವನ್ನು ನಡೆಸಿದ ಸಮಯದಲ್ಲಿ ಮೋದಿಯವರ ಭೇಟಿ ಮಹತ್ವ ಪಡೆದಿದೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಪ್ರಧಾನಿ ಮೋದಿಯವರ ಮಾತುಕತೆಯು ಕೃಷಿ, ಮೂಲಸೌಕರ್ಯ, ಔಷಧೀಯ ಕ್ಷೇತ್ರಗಳು, ಆರೋಗ್ಯ ಮತ್ತು ಶಿಕ್ಷಣ, ರಕ್ಷಣೆ ಮತ್ತು ಜನರಿಗೆ ಸೇರಿದಂತೆ ಭಾರತ-ಉಕ್ರೇನ್ ಬಾಂಧವ್ಯದ ಸಂಪೂರ್ಣ ಶ್ರೇಣಿಯ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ