
ಅಹ್ಮದಾಬಾದ್, ಮಾರ್ಚ್ 2: ಅಂಬಾನಿ ಕುಟುಂಬದವರು ಸ್ಥಾಪಿಸಿ ನಿರ್ವಹಿಸುತ್ತಿರುವ ವನತಾರ ಪ್ರಾಣಿ ಸಂರಕ್ಷಣಾಲಯ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ (ಮಾ. 2) ಭೇಟಿ ನೀಡಿದ್ದಾರೆ. ಗುಜರಾತ್ನ ಜಾಮನಗರ್ ಜಿಲ್ಲೆಯಲ್ಲಿರುವ ಈ ವನತಾರ ರಿಲಾಯನ್ಸ್ ಜಾಮನಗರ್ ರಿಫೈನರಿ ಕಾಂಪ್ಲೆಕ್ಸ್ನ ವಿಶಾಲ ಪ್ರದೇಶದಲ್ಲಿ 3,000 ಎಕರೆ ಜಾಗದಲ್ಲಿ ನಿರ್ಮಿತವಾಗಿದೆ. ಮುಕೇಶ್ ಅಂಬಾನಿ ಅವರ ಕಿರಿಯ ಮಗ, ಕಳೆದ ವರ್ಷ ವಿವಾಹಿತರಾದ ಅನಂತ್ ಅಂಬಾನಿ ಅವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಭೇಟಿಯಲ್ಲಿ ಇರುವ ಕಾರ್ಯಕ್ರಮಗಳಲ್ಲಿ ವನತಾರ ಕೂಡ ಒಂದು. ಶನಿವಾರ ಗುಜರಾತ್ಗೆ ಬಂದ ನರೇಂದ್ರ ಮೋದಿ ಅವರು ಸೋಮನಾಥ ಜಿಲ್ಲೆಯ ಸೋಮನಾಥ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲಿದ್ದಾರೆ. ಅದೇ ಜಿಲ್ಲೆಯಲ್ಲಿರುವ ಗಿರ್ ವನ್ಯಜೀವಿಧಾಮದ ಬಳಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ನಾಳೆಯ ಕಾರ್ಯಕ್ರಮವಾಗಿದ್ದು, ಪ್ರಧಾನಿಳು ಜಂಗಲ್ ಸಫಾರಿಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಭಾರತದ ಈ ಡ್ರೋನ್ ಯೋಜನೆ ಮೆಚ್ಚಿದ ಎಂಐಟಿ ಪ್ರೊಫೆಸರ್; ಡ್ರೋನ್ ದೀದಿಯರೊಂದಿಗೆ ಜೆ ಫ್ಲೆಮಿಂಗ್ ಸಂವಾದ
ಅನಂತ್ ಅಂಬಾನಿ ಸ್ಥಾಪಿಸಿದ ವನತಾರ ಪ್ರಾಣಿ ಸಂರಕ್ಷಣಾಲಯದ ಕಾರ್ಯಗಳನ್ನು ಗುರುತಿಸಿ ‘ಪ್ರಾಣಿಮಿತ್ರ’ ಎನ್ನುವ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ. ವನತಾರದ ಭಾಗವಾದ ರಾಧೇಕೃಷ್ಣ ಟೆಂಪಲ್ ಎಲಿಫ್ಯಾಂಟ್ ವೆಲ್ಫೇರ್ ಟ್ರಸ್ಟ್ಗೆ ಈ ಪ್ರಶಸ್ತಿ ಕೊಡಲಾಗಿದೆ.
ವನತಾರದಲ್ಲಿ ಆನೆ ಪಾಲನೆಗೆ ಪ್ರತ್ಯೇಕ ಕೇಂದ್ರ ಇದ್ದು, ಅದರಲ್ಲಿ ವಿವಿಧೆಡೆಯಿಂದ ಪ್ರಾಣಾಪಾಯದಿಂದ ಪಾರು ಮಾಡಲಾದ 240 ಆನೆಗಳಿಗೆ ಆಶ್ರಮ ಕೊಡಲಾಗಿದೆ. ಸರ್ಕಸ್, ಕಟ್ಟಿಗೆ ಉದ್ದಿಮೆ, ಪ್ರವಾಸಿಗರ ಸೇವೆ ಇತ್ಯಾದಿ ಕಾರ್ಯಗಳಿಗೆ ಬಂಧಿಯಾಗಿದ್ದ ಆನೆಗಳನ್ನು ಸಂರಕ್ಷಿಸಿ, ವನತಾರದ ಈ ಪ್ರದೇಶದಲ್ಲಿ ಸ್ವಾಭಾವಿಕ ಪರಿಸರದಲ್ಲಿ ವಾಸಿಸಲು ಅನುಕೂಲ ಮಾಡಿಕೊಡಲಾಗಿದೆ. ಅರಣ್ಯ ಪ್ರದೇಶದೊಳಗೆಯೇ, 998 ಎಕರೆ ಜಾಗದಲ್ಲಿ ಆನೆಗಳ ಸ್ವಚ್ಛಂದ ವಾಸಕ್ಕೆ ಏರ್ಪಾಡು ಮಾಡಲಾಗಿದೆ.
ಇದನ್ನೂ ಓದಿ: ಆ್ಯಪಲ್ ಉತ್ಪನ್ನಗಳಿಗಾಗಿ, ಚೀನಾ, ವಿಯೆಟ್ನಾಂಗೆ ಭಾರತದಿಂದ ಎಲೆಕ್ಟ್ರಾನಿಕ್ ಬಿಡಿಭಾಗಗಳ ಪೂರೈಕೆ
ಈ ಆನೆ ಪಾಲನಾ ಕೇಂದ್ರದ 998 ಎಕರೆಯೂ ಸೇರಿ ವನತಾರದ ವಿಸ್ತಾರ 3,000 ಎಕರೆಯಷ್ಟಿದೆ. ಆನೆಗಳು ಮಾತ್ರವಲ್ಲ, ಅಕ್ರಮವಾಗಿ ಬಂಧಿಯಾದ ಯಾವುದೇ ವನ್ಯಜೀವಿಗಳಿಗೂ ಇಲ್ಲಿ ಸಂರಕ್ಷಣೆಯ ವ್ಯವಸ್ಥೆ ಇದೆ. ಔಷಧೋಪಚಾರ, ಪುನರ್ನೆಲೆ ಇವೆಲ್ಲವನ್ನೂ ವನತಾರದಲ್ಲಿ ಮಾಡಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Sun, 2 March 25