ಸಂಸತ್​​​ನಲ್ಲಿ ಪ್ರಧಾನಿ ಮೋದಿ ತೆಲಂಗಾಣವನ್ನು ಅವಮಾನಿಸಿದ್ದಾರೆ: ರಾಹುಲ್ ಗಾಂಧಿ

|

Updated on: Sep 19, 2023 | 8:05 PM

ವಾಜಪೇಯಿ ಅವರ ಕಾಲದಲ್ಲಿ ಈ ಸದನದಲ್ಲಿ ಮೂರು ರಾಜ್ಯಗಳು ಅತ್ಯಂತ ಸಂತೋಷದಿಂದ ವಿಭಜಿಸಲ್ಪಟ್ಟವು. ಛತ್ತೀಸ್‌ಗಢ ರಚನೆಯಾದಾಗ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಗಳೆರಡೂ ಸಂಭ್ರಮಿಸಿದವು. ಉತ್ತರಾಂಚಲ ರಚನೆಯಾದಾಗ ಉತ್ತರಾಂಚಲ ಮತ್ತು ಉತ್ತರ ಪ್ರದೇಶಗಳೆರಡೂ ಸಂಭ್ರಮಿಸಿದವು. ಜಾರ್ಖಂಡ್ ರಚನೆಯಾದಾಗ ಇದನ್ನು ಜಾರ್ಖಂಡ್ ಮತ್ತು ಬಿಹಾರ ಎರಡೂ ಸಂಭ್ರಮಿಸಿದವು. ಎಲ್ಲ ಜನರು ಅದನ್ನು ಸಂಭ್ರಮಿಸಿದರು. ಆ

ಸಂಸತ್​​​ನಲ್ಲಿ ಪ್ರಧಾನಿ ಮೋದಿ ತೆಲಂಗಾಣವನ್ನು ಅವಮಾನಿಸಿದ್ದಾರೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ದೆಹಲಿ ಸೆಪ್ಟೆಂಬರ್ 19: ತೆಲಂಗಾಣದ (Telangana) ಹುತಾತ್ಮರು ಮತ್ತು ಅವರ ತ್ಯಾಗದ ಬಗ್ಗೆ ಸಂಸತ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಗೌರವದ ಹೇಳಿಕೆಗಳು ರಾಜ್ಯದ ಅಸ್ತಿತ್ವ ಮತ್ತು ಸ್ವಾಭಿಮಾನಕ್ಕೆ ಮಾಡಿದ “ಅವಮಾನ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ತೆಲುಗು ಭಾಷೆಯಲ್ಲೇ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ತೆಲಂಗಾಣದ ಹುತಾತ್ಮರು ಮತ್ತು ಅವರ ತ್ಯಾಗದ ಬಗ್ಗೆ ಪ್ರಧಾನಿ ಮೋದಿಯವರ ಅಗೌರವದ ಭಾಷಣವು ತೆಲಂಗಾಣದ ಅಸ್ತಿತ್ವ ಮತ್ತು ಸ್ವಾಭಿಮಾನಕ್ಕೆ ಅವಮಾನವಾಗಿದೆ ಎಂದು ಹೇಳಿದರು.

ಸೋಮವಾರ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ, ಆಂಧ್ರಪ್ರದೇಶದಿಂದ ತೆಲಂಗಾಣವನ್ನು ವಿಭಜಿಸಿರುವುದು ಎರಡೂ ರಾಜ್ಯಗಳಲ್ಲಿ ಕಹಿಘಟನೆ ಮತ್ತು ರಕ್ತಪಾತಕ್ಕೆ ಕಾರಣವಾಯಿತು ಎಂದು ಮೋದಿ ವಿಷಾದಿಸಿದರು. ಪ್ರಧಾನ ಮಂತ್ರಿಯವರ ಹೇಳಿಕೆಗಳನ್ನು ಖಂಡಿಸಿದ ತೆಲಂಗಾಣ ಸಚಿವ ಮತ್ತು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ಇದನ್ನು “ಅವಹೇಳನಕಾರಿ” ಎಂದು ಬಣ್ಣಿಸಿದ್ದಾರೆ. ಐತಿಹಾಸಿಕ ಸಂಗತಿಗಳಿಗೆ ಪ್ರಧಾನಿಯವರ ಸಂಪೂರ್ಣ “ಅಲಕ್ಷ್ಯ”ವನ್ನು ಇದು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?

ಸೋಮವಾರ ಸಂಸತ್ತಿನ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪ್ರಯಾಣ – ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು’ ಕುರಿತು ಚರ್ಚೆಯನ್ನು ಪ್ರಾರಂಭಿಸಿದರು. ರಾಜ್ಯಗಳ ವಿಭಜನೆ ಬಗ್ಗೆ ಮಾತನಾಡುವ ಮೊದಲು ಅವರು ಜವಾಹರಲಾಲ್ ನೆಹರೂ ಸೇರಿದಂತೆ ದಿಗ್ಗಜರ ಕೊಡುಗೆಗಳು ಮತ್ತು ಭಾಷಣಗಳನ್ನು ಅವರು ಸ್ಮರಿಸಿದರು.

ವಾಜಪೇಯಿ ಅವರ ಕಾಲದಲ್ಲಿ ಈ ಸದನದಲ್ಲಿ ಮೂರು ರಾಜ್ಯಗಳು ಅತ್ಯಂತ ಸಂತೋಷದಿಂದ ವಿಭಜಿಸಲ್ಪಟ್ಟವು. ಛತ್ತೀಸ್‌ಗಢ ರಚನೆಯಾದಾಗ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಗಳೆರಡೂ ಸಂಭ್ರಮಿಸಿದವು. ಉತ್ತರಾಂಚಲ ರಚನೆಯಾದಾಗ ಉತ್ತರಾಂಚಲ ಮತ್ತು ಉತ್ತರ ಪ್ರದೇಶಗಳೆರಡೂ ಸಂಭ್ರಮಿಸಿದವು. ಜಾರ್ಖಂಡ್ ರಚನೆಯಾದಾಗ ಇದನ್ನು ಜಾರ್ಖಂಡ್ ಮತ್ತು ಬಿಹಾರ ಎರಡೂ ಸಂಭ್ರಮಿಸಿದವು. ಎಲ್ಲ ಜನರು ಅದನ್ನು ಸಂಭ್ರಮಿಸಿದರು.

ಇದನ್ನೂ ಓದಿ: ವಾಟ್ಸಾಪ್ ಚಾನಲ್ಸ್ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ; ಇಲ್ಲಿದೆ ಅವರ ಚಾನಲ್ ಲಿಂಕ್; ಏನಿದು ಹೊಸ ವಾಟ್ಸಾಪ್ ಫೀಚರ್?

ಕೆಲವು ಕಹಿ ನೆನಪುಗಳೂ ಇವೆ. ತೆಲಂಗಾಣ ರಚನೆಯ ನಂತರ ತೆಲಂಗಾಣ ಅಥವಾ ಆಂಧ್ರಪ್ರದೇಶ ಈ ವಿಭಜನೆಯನ್ನು ಸಂಭ್ರಮಿಸಲು ಸಾಧ್ಯವಾಗಲಿಲ್ಲ. ಇದು ಉದ್ವಿಗ್ನತೆಯ ನಡುವೆ ಮಾಡಲ್ಪಟ್ಟಿದೆ. ಅದೇ ಶಕ್ತಿ ಮತ್ತು ಉತ್ಸಾಹದಿಂದ ರೂಪುಗೊಂಡಿದ್ದರೆ, ನಾವು ಈಗ ಉತ್ತಮ ತೆಲಂಗಾಣವನ್ನು ಸಂಭ್ರಮಿಸಬಹುದಾಗಿತ್ತು. ಅಲ್ಲಿ ದ್ವೇಷದ ಬೀಜಗಳನ್ನು ಬಿತ್ತಲಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ