ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದಕ್ಕೆ ಯುವಕನ ಕೊಲೆ: ನಾಲ್ವರನ್ನು ಬಂಧಿಸಿದ ದೆಹಲಿ ಪೊಲೀಸ್

ದಕ್ಷಿಣ ದೆಹಲಿಯ ಮಾಳವೀಯಾ ನಗರ ಪ್ರದೇಶದ ಡಿಡಿಎ ಮಾರುಕಟ್ಟೆಯ ಬಳಿ ಹಂತಕರ ಗುಂಪು ಮಾಯಾಂಕ್‌ನನ್ನು ಹಿಡಿದು ಸಾರ್ವಜನಿಕರ ಕಣ್ಣ ಮುಂದೆಯೇ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದಕ್ಕೆ ಯುವಕನ ಕೊಲೆ: ನಾಲ್ವರನ್ನು ಬಂಧಿಸಿದ ದೆಹಲಿ ಪೊಲೀಸ್
Updated By: ಆಯೇಷಾ ಬಾನು

Updated on: Aug 13, 2022 | 7:22 PM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಾರುಕಟ್ಟೆಯಲ್ಲಿ ಆಗಸ್ಟ್ 11ರ ಗುರುವಾರ 25 ವರ್ಷದ ಹೋಟೆಲ್ ಮ್ಯಾನೇಜ್‌ಮೆಂಟ್ ಮಾಡಿದ್ದ ಯುವಕನನ್ನು ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಕೊಲೆಯ ನಿಜವಾದ ಕಾರಣ ತಿಳಿದಿದೆ. ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಚಾರವಾಗಿ ನಡೆದ ಜಗಳ ಹಲ್ಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಮಯಾಂಕ್ ಕೊಲೆಯಾದ ಯುವಕ. ಈತ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ಕಂಡ ಬಂಧಿತ ಆರೋಪಿಗಳಲ್ಲಿ ಒಬ್ಬನ ತಾಯಿ ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದನ್ನು ವಿರೋಧಿಸಿ ಜಗಳವಾಡಿದ್ದಾರೆ. ಅಲ್ಲದೇ ವಾಗ್ವಾದದ ವೇಳೆ ಮಯಾಂಕ್, ಆರೋಪಿಯನ್ನು ನಿಂದಿಸಿ ಕಪಾಳಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ. ನಂತರ ಆರೋಪಿ ಮನೀಶ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಮಯಾಂಕ್ ಹಾಗೂ ಆತನ ಸ್ನೇಹಿತ ವಿಕಾಸ್ ನನ್ನು ಬೆನ್ನಟ್ಟಿದ್ದಾರೆ.

ಈ ವೇಳೆ ದಕ್ಷಿಣ ದೆಹಲಿಯ ಮಾಳವೀಯಾ ನಗರ ಪ್ರದೇಶದ ಡಿಡಿಎ ಮಾರುಕಟ್ಟೆಯ ಬಳಿ ಹಂತಕರ ಗುಂಪು ಮಾಯಾಂಕ್‌ನನ್ನು ಹಿಡಿದು ಸಾರ್ವಜನಿಕರ ಕಣ್ಣ ಮುಂದೆಯೇ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇನ್ನು ಹಲ್ಲೆಗೆ ಒಳೆಗಾದ ಮಯಾಂಕ್ನನ್ನು ಏಮ್ಸ್‌ಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳಾದ ಮನೀಶ್, ರಾಹುಲ್, ಆಶಿಶ್ ಮತ್ತು ಸೂರಜ್ನನ್ನು ಗುರುತಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Published On - 7:18 pm, Sat, 13 August 22