2 ಬಾರಿ ಕೊರೊನಾ -ve‌ ಬಂದ್ರೂ.. ಅದಕ್ಕೇ ಬಲಿಯಾದ ಪೊಲೀಸ್‌ ಇನ್‌ಸ್ಪೆಕ್ಟರ್‌

| Updated By: ಸಾಧು ಶ್ರೀನಾಥ್​

Updated on: Aug 08, 2020 | 2:32 PM

ಕೊರೊನಾ ಹೆಮ್ಮಾರಿಗೆ ಉತ್ತರ ಪ್ರದೇಶದ ಇನ್‌ಸ್ಪೆಕ್ಟರ್‌ ಒಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಇದಕ್ಕಿಂತಲೂ ಆಘಾತಕಾರಿಯಂದ್ರೆ ಎರಡು ಸಾರಿ ಕೋವಿಡ್‌ ಟೆಸ್ಟ್‌ ಮಾಡಿಸಿದ್ದ ಅವರಿಗೆ ಎರಡು ಬಾರಿಯೂ ವರದಿ ನೆಗಟಿವ್‌ ಬಂದಿತ್ತು. ಹೌದು ಉತ್ತರ ಪ್ರದೇಶದ ಶಹಾಜಹಾಪುರ್‌ ಜಿಲ್ಲೆಯ 47 ವರ್ಷದ ಪೊಲೀಸ್‌ ಇನ್‌ಸ್ಪೆಕ್ಟರ್‌ ಇಂದ್ರಜೀತ್‌ ಸಿಂಗ್‌ ಬದೌರಿಯಾ ಕೋವಿಡ್‌ನಿಂದ ನಿಧನರಾಗಿದ್ದಾರೆ. ಎರೆಡೆರಡು ಬಾರಿ ಕೋವಿಡ್‌ ಟೆಸ್ಟ್‌ ಮಾಡಿಸಿದ್ದರೂ ಅವರ ವರದಿ ನೆಗಟಿವ್‌ ಬಂದಿತ್ತು. ಆದರೂ ಕೆಮ್ಮು, ನೆಗಡಿ ಹಾಗೂ ಉಸಿರಾಟದ ಸಮಸ್ಯೆ ಉಲ್ಫಣಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ […]

2 ಬಾರಿ ಕೊರೊನಾ -ve‌ ಬಂದ್ರೂ.. ಅದಕ್ಕೇ ಬಲಿಯಾದ ಪೊಲೀಸ್‌ ಇನ್‌ಸ್ಪೆಕ್ಟರ್‌
Follow us on

ಕೊರೊನಾ ಹೆಮ್ಮಾರಿಗೆ ಉತ್ತರ ಪ್ರದೇಶದ ಇನ್‌ಸ್ಪೆಕ್ಟರ್‌ ಒಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಇದಕ್ಕಿಂತಲೂ ಆಘಾತಕಾರಿಯಂದ್ರೆ ಎರಡು ಸಾರಿ ಕೋವಿಡ್‌ ಟೆಸ್ಟ್‌ ಮಾಡಿಸಿದ್ದ ಅವರಿಗೆ ಎರಡು ಬಾರಿಯೂ ವರದಿ ನೆಗಟಿವ್‌ ಬಂದಿತ್ತು.

ಹೌದು ಉತ್ತರ ಪ್ರದೇಶದ ಶಹಾಜಹಾಪುರ್‌ ಜಿಲ್ಲೆಯ 47 ವರ್ಷದ ಪೊಲೀಸ್‌ ಇನ್‌ಸ್ಪೆಕ್ಟರ್‌ ಇಂದ್ರಜೀತ್‌ ಸಿಂಗ್‌ ಬದೌರಿಯಾ ಕೋವಿಡ್‌ನಿಂದ ನಿಧನರಾಗಿದ್ದಾರೆ. ಎರೆಡೆರಡು ಬಾರಿ ಕೋವಿಡ್‌ ಟೆಸ್ಟ್‌ ಮಾಡಿಸಿದ್ದರೂ ಅವರ ವರದಿ ನೆಗಟಿವ್‌ ಬಂದಿತ್ತು. ಆದರೂ ಕೆಮ್ಮು, ನೆಗಡಿ ಹಾಗೂ ಉಸಿರಾಟದ ಸಮಸ್ಯೆ ಉಲ್ಫಣಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಆದ್ರೆ ದಾಖಲಾದ ಒಂದು ವಾರದ ನಂತರ ಮತ್ತೊಮ್ಮೆ ನಡೆಸಿದ ಪರೀಕ್ಷೆಯಲ್ಲಿ ಅಂದ್ರೆ ಮೂರನೆ ಬಾರಿ ಅವರ ವರದಿ ಪಾಸಿಟಿವ್‌ ಬಂದಿದೆ. ಆದ್ರೆ ಅಷ್ಟೊತ್ತಿಗಾಗಲೇ ಪರಿಸ್ಥಿತಿ ಬಿಗಾಡಿಯಿಸಿದೆ. ಹೀಗಾಗಿ ಅವರನ್ನು ಲಖನೌದ ಕೋವಿಡ್‌ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೂ ಚಿಕಿತ್ಸೆ ಫಲಕಾರಿಯಾಗದೆ ಇನ್‌ಸ್ಪೆಕ್ಟರ್‌ ಕೋವಿಡ್‌ಗೆ ಬಲಿಯಾಗಿದ್ದಾರೆ.

ಉನ್ನಾಂವ್‌ನಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿ ಪೊಲೀಸ್‌ ವೃತ್ತಿ ಆರಂಭಿಸಿದ್ದ ಇಂದ್ರಜಿತ್‌ ಸಿಂಗ್‌, ನಂತರ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸಿದ್ದರು. ಕಳೆದ ತಿಂಗಳಷ್ಟೆ ಇನ್ಸ್​ಪೆಕ್ಟರ್​ ಆಗಿ ಪದೋನ್ನತಿ ಪಡೆದಿದ್ದ ಅವರು, ತಮ್ಮ ಜಿಲ್ಲೆಗೇ ವರ್ಗಾವಣೆಯಾಗಿ ಬಂದಿದ್ದರು. ಅವರು ಪತ್ನಿ ಮತ್ತು ಪುತ್ರ-ಪುತ್ರಿಯನ್ನು ಅಗಲಿದ್ದಾರೆ. ಉತ್ತರ ಪ್ರದೇಶದಲ್ಲಿ ಇದುವರೆಗೂ 1,900 ಮಂದಿ ಬಲಿಯಾಗಿದ್ದಾರೆ.