ಗಗನಕ್ಕೇರುತ್ತಲೇ ಇದೆ ಚಿನ್ನದ ಬೆಲೆ, ಬೆಳ್ಳಿ ಎಷ್ಟು?
ನವದೆಹಲಿ: ಎಲ್ಲೆಡೆ ಕೊರೊನಾ ಹಾವಳಿಯಿಂದಾಗಿ ಮಾರುಕಟ್ಟೆ ಕುಸಿತ ಕಾಣುತ್ತಿದ್ರೆ, ಬಂಗಾರದ ಬೆಲೆ ಮಾತ್ರ ನಾಗಾಲೋಟದಲ್ಲಿ ಏರುತ್ತಲೆ ಇದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದು ಬಂಗಾರದ ಬೆಲೆ ಗಗನಕ್ಕೇರಿದೆ. ಹೌದು, ಬಂಗಾರದ ಬೆಲೆ ಈಗ ಗಗನಕ್ಕೇರಿದೆ. ಶುಕ್ರವಾರ ರಾತ್ರಿ ಸರಕು ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ ಬಂಗಾರದ ಬೆಲೆ ಭಾರತದಲ್ಲಿ 10 ಗ್ರಾಮ್‌ಗೆ 57,008 ರೂಪಾಯಿಗೆ ಏರಿದೆ. ಇದು ಇದುವರೆಗಿನ ದಾಖಲೆಯ ಬೆಲೆ. ಕಳೆದ 16 ವಾರಗಳಿಂದ ಬಂಗಾರದ ಬೆಲೆ ಇದೇ ರೀತಿ ಏರುತ್ತಲೇ ಇದೆ. ಒಮ್ಮೆಯೂ ಬೆಲೆಯಲ್ಲಿ ಇಳಿಕೆ […]
ನವದೆಹಲಿ: ಎಲ್ಲೆಡೆ ಕೊರೊನಾ ಹಾವಳಿಯಿಂದಾಗಿ ಮಾರುಕಟ್ಟೆ ಕುಸಿತ ಕಾಣುತ್ತಿದ್ರೆ, ಬಂಗಾರದ ಬೆಲೆ ಮಾತ್ರ ನಾಗಾಲೋಟದಲ್ಲಿ ಏರುತ್ತಲೆ ಇದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದು ಬಂಗಾರದ ಬೆಲೆ ಗಗನಕ್ಕೇರಿದೆ.
ಹೌದು, ಬಂಗಾರದ ಬೆಲೆ ಈಗ ಗಗನಕ್ಕೇರಿದೆ. ಶುಕ್ರವಾರ ರಾತ್ರಿ ಸರಕು ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ ಬಂಗಾರದ ಬೆಲೆ ಭಾರತದಲ್ಲಿ 10 ಗ್ರಾಮ್‌ಗೆ 57,008 ರೂಪಾಯಿಗೆ ಏರಿದೆ. ಇದು ಇದುವರೆಗಿನ ದಾಖಲೆಯ ಬೆಲೆ. ಕಳೆದ 16 ವಾರಗಳಿಂದ ಬಂಗಾರದ ಬೆಲೆ ಇದೇ ರೀತಿ ಏರುತ್ತಲೇ ಇದೆ. ಒಮ್ಮೆಯೂ ಬೆಲೆಯಲ್ಲಿ ಇಳಿಕೆ ಕಂಡಿಲ್ಲ.
ಬಂಗಾರದ ಜೊತೆಗೆ ಬೆಳ್ಳಿಯ ಬೆಲೆಯೂ ಗಗನಕ್ಕೇರುತ್ತಿದೆ. ಗುರುವಾರ ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ ಬೆಳ್ಳಿಯ ಬೆಲೆ ಪ್ರತಿ ಕಿ. ಗ್ರಾಂ.ಗೆ 576 ರೂ.ಗಳಷ್ಟು ಹೆಚ್ಚಾಗಿದೆ. ಅಂದ್ರೆ ಪ್ರತಿ ಕಿ.ಗ್ರಾ ಬೆಳ್ಳಿಯ ಬೆಲೆ ಈಗ 77,840 ರೂಪಾಯಿಯಷ್ಟಿದೆ. ಬೆಳ್ಳಿಯ ಬೆಲೆ ಕೂಡಾ ಕಳೆದ ಕೆಲ ದಿನಗಳಿಂದ ಏರುತ್ತಲೇ ಇದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಈ ರೀತಿ ನಾಗಾಲೋಟದಲ್ಲಿ ಏರುತ್ತಿದ್ರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾತ್ರ ಚಿನ್ನದ ಬೆಲೆ ಅಷ್ಟಕ್ಕಷ್ಟೆ ಇದೆ. ಅಂದ್ರೆ ಸಾಮಾನ್ಯ ಸಮಯದಲ್ಲಿರುವುದಕ್ಕಿಂತ ಕಡಿಮೆ ಇದೆ. ಚಿನ್ನ ಅಮೆರಿಕದ ಡಾಲರ್ ಮೌಲ್ಯದಲ್ಲಿ ಪ್ರತಿ ಔನ್ಸ್‌ಗೆ 2,061 ಯುಎಸ್ ಡಾಲರ್ ಇದ್ರೆ, ಬೆಳ್ಳಿ ಪ್ರತಿ ಔನ್ಸ್‌ಗೆ 28.36 ಯುಎಸ್ ಡಾಲರ್‌ನಷ್ಟಿದೆ.