
ಛತ್ತೀಸ್ಗಢ: ಸಿಆರ್ಪಿಎಫ್ ಯೋಧರು ಹಾಗೂ ನಕ್ಸಲರ ನಡುವೆ ಭಾರೀ ಗುಂಡಿನ ಚಕಮುಕಿ ನಡೆದಿದ್ದು, ಗುಂಡಿನ ದಾಳಿಯಲ್ಲಿ ನಾಲ್ವರು ನಕ್ಸಲರನ್ನು ಯೋಧರು ಹೊಡೆದುರುಳಿಸಿದ್ದಾರೆ. ಮಾನ್ಸೂರ್ ಜಿಲ್ಲೆಯ ಪಾರದೌನಿ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ವೇಳೆ ನಕ್ಸಲರ ಹತ್ಯೆಯಾಗಿದೆ.
ಘಟನೆಯಲ್ಲಿ ಮದನಪಾಡು ಪಿಎಸ್ಐ ಶ್ಯಾಮ ಕಿಶೋರ್ ಹುತಾತ್ಮರಾಗಿದ್ದಾರೆ. ನಕ್ಸಲರ ಬಳಿಯಿದ್ದ ಭಾರೀ ಪ್ರಮಾಣದ ಬಂದೂಕು, ಮದ್ದು ಗುಂಡು ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ಸಿಆರ್ಪಿಎಫ್ ಯೋಧರು ವಶಪಡಿಸಿಕೊಂಡಿದ್ದಾರೆ.
Published On - 10:21 am, Sat, 9 May 20