Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ವಾರದಲ್ಲಿ 61 ಸಾವಿರ ಕೋಟಿ ಬಾಚಿದ Jio, ಆ ಹಣದಿಂದ ಏನ್ಮಾಡುತ್ತೆ ಗೊತ್ತಾ?

ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿದೆ. ಈ ನಡುವೆ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ರಿಲಯನ್ಸ್ ಸಂಸ್ಥೆ ಕಳೆದ 3 ವಾರಗಳಲ್ಲಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಬಾಚಿಕೊಂಡಿದೆ. ಆದ್ರೆ ಈ ಹಣದಿಂದ ಜಿಯೋ ಏನು ಮಾಡುತ್ತೆ ಎಂಬ ಕುತೂಹಲ ಎಲ್ಲರನ್ನೂ ಕೆರಳಿಸಿದೆ. ಇದೀಗ ಮುಂದಿನ ಹಂತದಲ್ಲಿ ಭಾರತದಲ್ಲಿ 5ಜಿ ಅಭಿವೃದ್ಧಿಪಡಿಸಲು ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಸಂಸ್ಥೆ ಮುಂದಾಗಿದೆ. Broadband Connectivity, Smart Devices, Big Data Analytics, Artificial Intelligence, […]

3 ವಾರದಲ್ಲಿ 61 ಸಾವಿರ ಕೋಟಿ ಬಾಚಿದ Jio, ಆ ಹಣದಿಂದ ಏನ್ಮಾಡುತ್ತೆ ಗೊತ್ತಾ?
Follow us
ಸಾಧು ಶ್ರೀನಾಥ್​
|

Updated on:May 09, 2020 | 10:53 AM

ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿದೆ. ಈ ನಡುವೆ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ರಿಲಯನ್ಸ್ ಸಂಸ್ಥೆ ಕಳೆದ 3 ವಾರಗಳಲ್ಲಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಬಾಚಿಕೊಂಡಿದೆ. ಆದ್ರೆ ಈ ಹಣದಿಂದ ಜಿಯೋ ಏನು ಮಾಡುತ್ತೆ ಎಂಬ ಕುತೂಹಲ ಎಲ್ಲರನ್ನೂ ಕೆರಳಿಸಿದೆ.

ಇದೀಗ ಮುಂದಿನ ಹಂತದಲ್ಲಿ ಭಾರತದಲ್ಲಿ 5ಜಿ ಅಭಿವೃದ್ಧಿಪಡಿಸಲು ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಸಂಸ್ಥೆ ಮುಂದಾಗಿದೆ. Broadband Connectivity, Smart Devices, Big Data Analytics, Artificial Intelligence, IoT, Cloud Computing, AR, Mixed Reality, Blockchain ಈ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಭಾರೀ ಮೊತ್ತದ ಹಣಕಾಸು ಅಗತ್ಯವಿರುತ್ತದೆ. ಹಾಗಾಗಿ ಜಿಯೋ ಈ ಸಾಹಸಕ್ಕೆ ಕೈಹಾಕಿದೆ.

ಜಿಯೋ ವಿಶ್ವದ ಏಕೈಕ ದೊಡ್ಡ ಜಾಲವಾಗಿದ್ದು, ಚೀನಾದ ಯಾವುದೇ ಕಂಪನಿಯ ಸಹಭಾಗಿತ್ವ ಇಲ್ಲದೆ 5 ಜಿ ಸ್ಥಾಪಿಸಲು ಸನ್ನದ್ಧವಾಗಿದೆ. ಅದೇ, ಪ್ರತಿಸ್ಪರ್ಧಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ 5 ಜಿ ಉಪಕರಣಗಳಿಗಾಗಿ ಹುವಾವೇ ಮತ್ತು ZTE ಜೊತೆ ಒಪ್ಪಂದ ಮಾಡಿಕೊಂಡಿವೆ.

ಇನ್ಮುಂದೆ ಜಿಯೋ ಕಂಪನಿಯಿಂದ 5G ಆಟ! ಭಾರತದಲ್ಲಿ ಟ್ರಾಯ್ ಸಂಸ್ಥೆಯು 1 MHz ಗೆ 492 ಕೋಟಿ ರೂ. ಮೂಲ ಬೆಲೆಯನ್ನು ನಿಗದಿಪಡಿಸಿದೆ. ಭಾರತದಲ್ಲಿ 5ಜಿ ನಿರ್ವಹಿಸಬೇಕಾದರೆ ಒಬ್ಬರಿಗೆ ಕನಿಷ್ಠ 100 MHz ಅವಶ್ಯಕತೆ ಇದೆ. ಹೀಗಾಗಿ ಒಬ್ಬ ಆಪರೇಟರ್​ಗೆ ಕನಿಷ್ಠ ಅಂದ್ರೂ 49,200 ಕೋಟಿ ಅಗತ್ಯವಿದೆ. ಕಳೆದ ಮೂರು ವಾರಗಳಲ್ಲಿ ಜಿಯೋ ರಿಲಯನ್ಸ್ 61 ಸಾವಿರ ಕೋಟಿ ರೂ ಬಾಚಿರುವುದನ್ನು ಗಮನಿಸಿದಾಗ ಫ್ರೀಕ್ವೆನ್ಸಿ ಖರೀದಿಗೆ ಅಗತ್ಯವಿರುವ 50 ಸಾವಿರ ಕೋಟಿ ರೂಪಾಯಿಗೂ ಮತ್ತು ಈ ಮೊತ್ತಕ್ಕೂ ತಾಳೆಯಾಗುತ್ತಿರುವುದು ಸ್ಪಷ್ಟವಾಗಿದೆ.

ಭಾರತದಲ್ಲಿ 5G ತಂತ್ರಜ್ಞಾನದಲ್ಲಿ ತನ್ನದೇ ಪ್ರಭುತ್ವ ಸ್ಥಾಪಿಸಲು ಅಗತ್ಯವಿರುವ ಮೊತ್ತ ಕ್ರೋಢೀಕರಿಸುವುದಕ್ಕಾಗಿ ಜಿಯೋ ಮಾಲೀಕ ಮುಕೇಶ್ ಅಂಬಾನಿ ತಮ್ಮ ಕಂಪನಿಯ ಕೆಲವಷ್ಟು ಪಾಲನ್ನು ಮಾರಾಟ ಮಾಡಿದ್ದಾರೆ ಅಷ್ಟೆ. ಹೀಗಾಗಿಯೇ ಭಾರತದಲ್ಲಿ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಜಿಯೋ ವಿವಿಧ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

Published On - 6:24 pm, Fri, 8 May 20

ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ
ನಿನ್ನೆ ಮಧ್ಯಾಹ್ನದಿಂದ ಪಲ್ಲವಿ ಅನುಭವಿಸಿರುವ ಯಾತನೆ ಪದಗಳಲ್ಲಿ ಹೇಳಲಾಗದು
ನಿನ್ನೆ ಮಧ್ಯಾಹ್ನದಿಂದ ಪಲ್ಲವಿ ಅನುಭವಿಸಿರುವ ಯಾತನೆ ಪದಗಳಲ್ಲಿ ಹೇಳಲಾಗದು
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
VIDEO: ಮೈದಾನದಲ್ಲೇ ಸಹ ಆಟಗಾರನಿಗೆ ಏಟು: ಕುಸಿದು ಬಿದ್ದ ವಿಕೆಟ್ ಕೀಪರ್..!
VIDEO: ಮೈದಾನದಲ್ಲೇ ಸಹ ಆಟಗಾರನಿಗೆ ಏಟು: ಕುಸಿದು ಬಿದ್ದ ವಿಕೆಟ್ ಕೀಪರ್..!
ಬರೋಬ್ಬರಿ 27 ಕೋಟಿ ರೂ... LSG ತಂಡದಲ್ಲಿ ಮೂಲೆಗುಂಪಾದ ರಿಷಭ್ ಪಂತ್
ಬರೋಬ್ಬರಿ 27 ಕೋಟಿ ರೂ... LSG ತಂಡದಲ್ಲಿ ಮೂಲೆಗುಂಪಾದ ರಿಷಭ್ ಪಂತ್