ಚರಂಡಿಯಲ್ಲಿ ಬಿದ್ದಿದ್ದ ನವಜಾತು ಶಿಶುವನ್ನು ಪತ್ತೆ ಹಚ್ಚಿದ್ದು ಬೀದಿ ಬೆಕ್ಕುಗಳು; ಪೊಲೀಸರಿಂದ ರಕ್ಷಣೆ

| Updated By: Lakshmi Hegde

Updated on: Nov 17, 2021 | 11:03 AM

Mumbai: ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ನವಜಾತ ಶಿಶುವನ್ನು ನೋಡುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್ ನಿರ್ಭಯಾ ಸ್ಕ್ವಾಡ್​​ನ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ.

ಚರಂಡಿಯಲ್ಲಿ ಬಿದ್ದಿದ್ದ ನವಜಾತು ಶಿಶುವನ್ನು ಪತ್ತೆ ಹಚ್ಚಿದ್ದು ಬೀದಿ ಬೆಕ್ಕುಗಳು; ಪೊಲೀಸರಿಂದ ರಕ್ಷಣೆ
ಮುಂಬೈ ಪೊಲೀಸರು ಟ್ವೀಟ್​ ಮಾಡಿದ ಫೋಟೋ
Follow us on

ಮುಂಬೈನ ಪಂತ್​ನಗರದ ಬಳಿ ಚರಂಡಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದ್ದು, ಅದನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಂದಹಾಗೆ ಈ ಮಗುವಿನ ಪತ್ತೆಗೆ ಸಹಾಯ ಮಾಡಿದ್ದು ಬೀದಿ ಬೆಕ್ಕುಗಳು. ಬಟ್ಟೆಯಲ್ಲಿ ಸುತ್ತಿದ್ದ ಮಗು ಚರಂಡಿಯಲ್ಲಿ ಇತ್ತು. ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಅಲ್ಲೇ ರಸ್ತೆ ಮೇಲೆ ತಿರುಗುವ ಬೀದಿ ಬೆಕ್ಕುಗಳು ಆ ಚರಂಡಿಯ ಬಳಿ ಹೋಗಿ ಜೋರಾಗಿ ಕೂಗಿ, ಭಿನ್ನವಾಗಿ ತಮ್ಮ ವರ್ತನೆಯನ್ನು ತೋರಸಲು ಪ್ರಾರಂಭಿಸಿವೆ. ಅದನ್ನು ನೋಡಿದ ಸ್ಥಳೀಯರು ಕುತೂಹಲದಿಂದ ಅಲ್ಲಿಗೆ ಹೋದಾಗ ಪುಟ್ಟ ಮಗು ಪತ್ತೆಯಾಗಿದೆ ಎಂದು ಮುಂಬೈ ಪೊಲೀಸರು ಟ್ವೀಟ್​ ಮಾಡಿದ್ದಾರೆ.

ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ನವಜಾತ ಶಿಶುವನ್ನು ನೋಡುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್ ನಿರ್ಭಯಾ ಸ್ಕ್ವಾಡ್​​ನ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ನಂತರ ಅದನ್ನು ರಾಜಾವಾಡಿಗೆ ಕರೆದೊಯ್ಯದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಮುಂಬೈ ಪೊಲೀಸರು ತಿಳಿಸಿದ್ದಾರೆ. ಹಾಗೇ ಪೊಲೀಸ್​ ಸಿಬ್ಬಂದಿ ಆ ಮುದ್ದಾದ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನೂ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಸದ್ಯ ಮಗುವಿನ ಪಾಲಕರ ಪತ್ತೆ ಕಾರ್ಯವೂ ಶುರುವಾಗಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಪಾದಚಾರಿಗಳ ಮೇಲೆ ನುಗ್ಗಿದ ಕಾರು! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

 

Published On - 11:02 am, Wed, 17 November 21