ಜಲಂಧರ್​ನಲ್ಲಿ ಬುಕ್ ಆಯ್ತು ಮೊದಲ ಸುಗ್ರೀವಾಜ್ಞೆ ಕೇಸ್, ಆತ ಮಾಡಿದ ಅಪರಾಧ ಏನು ಗೊತ್ತಾ?

|

Updated on: May 03, 2020 | 4:29 PM

ಚಂಡೀಗಢ: ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ದೇಶದೆಲ್ಲೆಡೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಕಾರನ್ನು ತಡೆಯಲು ಪೊಲೀಸ್ ಅಧಿಕಾರಿ ಯತ್ನಿಸಿದ್ದಾರೆ. ಈ ವೇಳೆ ಕಾರಿನ ಬಾನೆಟ್ ಮೇಲೆ ಎಎಸ್​ಐ ಅವರನ್ನು ಕಾರು ಚಾಲಕ ಎಳೆದೊಯ್ದಿರುವ ಘಟನೆ ಪಂಜಾಬ್​ನ ಜಲಂಧರ್​ನಲ್ಲಿ ನಡೆದಿದೆ. ಲಾಕ್​ಡೌನ್​ ನಿಯಮಗಳನ್ನು ಮೀರಿ ರಭಸವಾಗಿ ಕಾರನ್ನು ಚಲಾಯಿಸುತ್ತಿದ್ದ. ಕಾರಿನ ಬಾನೆಟ್ ಮೇಲೆ ಎಎಸ್​ಐ ಮುಲ್ಕ ರಾಜ್​ನನ್ನು ಚಾಲಕ ಸ್ಪಲ್ಪ ದೂರದವರೆಗೂ ಎಳೆದೊಯ್ದಿದ್ದಾನೆ. ಈ ವೇಳೆ ಸಹಾಯಕ್ಕಾಗಿ ಪೊಲೀಸ್ ಅಧಿಕಾರಿ ಕಿರುಚಿದ್ದಾರೆ. #WATCH Punjab: […]

ಜಲಂಧರ್​ನಲ್ಲಿ ಬುಕ್ ಆಯ್ತು ಮೊದಲ ಸುಗ್ರೀವಾಜ್ಞೆ ಕೇಸ್, ಆತ ಮಾಡಿದ ಅಪರಾಧ ಏನು ಗೊತ್ತಾ?
Follow us on

ಚಂಡೀಗಢ: ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ದೇಶದೆಲ್ಲೆಡೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಕಾರನ್ನು ತಡೆಯಲು ಪೊಲೀಸ್ ಅಧಿಕಾರಿ ಯತ್ನಿಸಿದ್ದಾರೆ. ಈ ವೇಳೆ ಕಾರಿನ ಬಾನೆಟ್ ಮೇಲೆ ಎಎಸ್​ಐ ಅವರನ್ನು ಕಾರು ಚಾಲಕ ಎಳೆದೊಯ್ದಿರುವ ಘಟನೆ ಪಂಜಾಬ್​ನ ಜಲಂಧರ್​ನಲ್ಲಿ ನಡೆದಿದೆ.

ಲಾಕ್​ಡೌನ್​ ನಿಯಮಗಳನ್ನು ಮೀರಿ ರಭಸವಾಗಿ ಕಾರನ್ನು ಚಲಾಯಿಸುತ್ತಿದ್ದ. ಕಾರಿನ ಬಾನೆಟ್ ಮೇಲೆ ಎಎಸ್​ಐ ಮುಲ್ಕ ರಾಜ್​ನನ್ನು ಚಾಲಕ ಸ್ಪಲ್ಪ ದೂರದವರೆಗೂ ಎಳೆದೊಯ್ದಿದ್ದಾನೆ. ಈ ವೇಳೆ ಸಹಾಯಕ್ಕಾಗಿ ಪೊಲೀಸ್ ಅಧಿಕಾರಿ ಕಿರುಚಿದ್ದಾರೆ.

ಘಟನೆ ಸಂಬಂಧ 20 ವರ್ಷದ ಚಾಲಕ ಅಮೋಲ್ ಮೆಹ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ ಪರ್ಮಿಂದರ್ ಕುಮಾರ್ ಕಾರನ್ನು ಮಗ ಅಮೋಲ್ ಚಲಾಯಿಸುತ್ತಿದ್ದ. ಅಮೋಲ್ ಮತ್ತು ತಂದೆ ಪರ್ಮಿಂದರ್ ಕುಮಾರ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ತಂದೆ ಮತ್ತು ಮಗನ ಮೇಲೆ ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸಿಲಾಗಿದೆ. ಕರ್ಫ್ಯೂ ಉಲ್ಲಂಘಿಸಿ ಜನರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಪಂಜಾಬ್​ನ ಡಿಜಿಪಿ ದಿನಕರ್ ಗುಪ್ತ ಟ್ವೀಟ್ ಮಾಡಿದ್ದಾರೆ.

Published On - 3:11 pm, Sun, 3 May 20