ಬಿಜೆಪಿ ಪ್ರಧಾನ ಕಚೇರಿಯಿರುವ ದೀನ್ ದಯಾಳ್ ಉಪಾಧ್ಯಾಯ ಮಾರ್ಗ ಸೇರಿದಂತೆ ದೆಹಲಿಯಾದ್ಯಂತ (Delhi) ‘ಮೋದಿ ಹಠಾವೋ, ದೇಶ್ ಬಚಾವೋ’ (ಮೋದಿಯನ್ನು ತೊಲಗಿಸಿ, ದೇಶವನ್ನು ಉಳಿಸಿ) ಪೋಸ್ಟರ್‌ಗಳು ಕಂಡುಬಂದ ನಂತರ ಮಂಗಳವಾರ ಆಮ್ ಆದ್ಮಿ ಪಕ್ಷ (AAP) ಮತ್ತು ಬಿಜೆಪಿ (BJP) ನಡುವೆ ಹೊಸ ರಾಜಕೀಯ ಜಟಾಪಟಿ ಶುರುವಾಗಿದೆ. ಪೊಲೀಸರು ಈ ಪ್ರಕರಣದಲ್ಲಿ 100 ಎಫ್‌ಐಆರ್‌ಗಳನ್ನು ದಾಖಲಿಸಿದ್ದು 6 ಜನರನ್ನು ಬಂಧಿಸಿದ್ದಾರೆ. ಇದು ಸರ್ವಾಧಿಕಾರದ ಪರಮಾವಧಿ ಎಂದು ಎಎಪಿ ಹೇಳಿದೆ. ರಾತ್ರೋರಾತ್ರಿ ಪೋಸ್ಟರ್ ಹಾಕಿರುವುದು ಕಂಡು ಬಂದಿದೆ. ಪ್ರಿಂಟಿಂಗ್ ಪ್ರೆಸ್ ಆಕ್ಟ್ ಮತ್ತು ಆಸ್ತಿ ವಿರೂಪ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಿಶೇಷ ಸಿಪಿ ದೀಪೇಂದ್ರ ಪಾಠಕ್ ಹೇಳಿದ್ದಾರೆ.
ಪೋಸ್ಟರ್‌ಗಳಲ್ಲಿ ಅವು ಮುದ್ರಿಸಲಾದ ಮುದ್ರಣಾಲಯದ ವಿವರಗಳಿಲ್ಲದಿದ್ದರೂ, ಸೆಂಟ್ರಲ್ ದೆಹಲಿಯ ಎಎಪಿ ಕಚೇರಿಯಿಂದ ಹೊರಟ ತಕ್ಷಣವೇ ವ್ಯಾನ್ ಅನ್ನು ಅಡ್ಡಗಟ್ಟಿ ಅದರಿಂದ ಪೋಸ್ಟರ್ ವಶಪಡಿಸಲಾಗಿದೆ. ಆರಂಭದಲ್ಲಿ ದೆಹಲಿಯಲ್ಲಿ ಪೋಸ್ಟರ್‌ಗಳನ್ನು ಯಾರು ಹಾಕಿದರು ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇರಲಿಲ್ಲ ಆದರೆ ಆಮ್ ಆದ್ಮಿ ಪಕ್ಷದ ಪ್ರತಿಕ್ರಿಯೆಯು ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸುವ ಅವರ ಮತ್ತೊಂದು ನಡೆ ಎಂದು ಸುಳಿವು ನೀಡಿತು.
ಪೊಲೀಸರು ಮುಂಜಾನೆ ಸುಮಾರು 2,000 ಪೋಸ್ಟರ್‌ಗಳನ್ನು ಸಾಗಿಸುತ್ತಿದ್ದ ವ್ಯಾನ್ ಅನ್ನು ಅಡ್ಡಗಟ್ಟಿ ವಶಪಡಿಸಿಕೊಂಡಿದ್ದು ಪೋಸ್ಟರ್ ಅಂಟಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಆರು ಜನರನ್ನು ಬಂಧಿಸಿದ್ದಾರೆ ಎಂದು ಟಿವಿ9 ಭಾರತ್ ವರ್ಷ್ ವರದಿಯಲ್ಲಿ ತಿಳಿಸಿದೆ. ಆಮ್ ಆದ್ಮಿ ಪಕ್ಷವು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು ಪೋಲೀಸರ ಕ್ರಮವನ್ನು “ಸರ್ವಾಧಿಕಾರದ ಪರಮಾವಧಿ” ಎಂದು ಕರೆದಿದೆ.
ಎಎಪಿ ವಾಗ್ದಾಳಿಗೆ ದೆಹಲಿ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು “ಕೇಜ್ರಿವಾಲ್ ಹಠಾವೋ, ದಿಲ್ಲಿ ಬಚಾವೋ” (ಕೇಜ್ರಿವಾಲ್ ತೆಗೆದುಹಾಕಿ, ದೆಹಲಿಯನ್ನು ಉಳಿಸಿ) ಘೋಷಣೆಗಳನ್ನು ಕೂಗಿದ್ದಾರೆ. ದೆಹಲಿಯ ಬಿಜೆಪಿ ನಾಯಕ ಹರೀಶ್ ಖುರಾನಾ ಅವರು ಪ್ರಧಾನಿ ಮೋದಿ ವಿರುದ್ಧದ ಪೋಸ್ಟರ್‌ಗಳ ಬಗ್ಗೆ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಕೇಜ್ರಿವಾಲ್ “ಬಲಿಪಶು ರಾಜಕಾರಣ” ಮಾಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
ಇದನ್ನೂ ಓದಿ:Delhi Earthquake: ದೆಹಲಿಯಲ್ಲಿ ಮತ್ತೆ ಭೂಕಂಪ; 2.7ರಷ್ಟು ತೀವ್ರತೆ ದಾಖಲು
ಪೋಸ್ಟರ್‌ಗಳನ್ನು ಹಾಕಲು ರಾಜಕೀಯ ಪಕ್ಷವೊಂದು ತಮ್ಮನ್ನು ಕೇಳಿದೆ ಎಂದು ಆರೋಪಿಗಳು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ಅವರು ಈಗಾಗಲೇ ಸುಮಾರು 2,000 ಪೋಸ್ಟರ್‌ಗಳನ್ನು ಹಾಕಿದ್ದು ಹೆಚ್ಚಿನ ಪೋಸ್ಟರ್ ಅವರಿಂದದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆದೇಶವನ್ನು ನೀಡಿದವರು ಯಾರು ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು ಇನ್ನೂ ಹೆಚ್ಚಿನ ಜನರನ್ನು ಬಂಧಿಸಬಹುದು ಎಂದು ಸುಳಿವು ನೀಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ