ಕಾಂಗ್ರೆಸ್ಗೆ ರಾಜಕೀಯವೆಂಬುದು ಒಂದು ವ್ಯಾಪಾರವಿದ್ದಂತೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಈ ವಾರದ ಆರಂಭದಲ್ಲಿ, ಅಮೆರಿಕ ಪ್ರವಾಸಕ್ಕೆ ತೆರಳಿದ್ದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ನೀಡಿದ ತಮ್ಮ ಘೋಷಣೆಯನ್ನು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ಸಮಾಜದಲ್ಲಿ ಬಿಜೆಪಿ ಹರಡುತ್ತಿರುವ ರೀತಿಯ ದ್ವೇಷದಿಂದ ಮುನ್ನಡೆಯಲು ಸಾಧ್ಯವಿಲ್ಲ ಎಂಬುದನ್ನು ಭಾರತ ಅರ್ಥ ಮಾಡಿಕೊಂಡಿದೆ’ ಎಂದೂ ಹೇಳಿದ್ದರು.
ಕರ್ನಾಟಕದ ಚುನಾವಣೆ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ, ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ತಂತ್ರಗಳನ್ನು ಹೆಣೆದಿತ್ತು, ಅವರ ಬಳಿ ನಮಗಿಂತ ಹತ್ತು ಪಟ್ಟು ಹಣವಿತ್ತು, ಅವರ ಬಳಿ ಸರ್ಕಾರವಿತ್ತು ಆದರೂ ಕೂಡ ನಾವು ಅವರನ್ನು ಸೋಲಿಸಿದ್ದೇವೆ ಎಂದಿದ್ದರು.
ಮತ್ತಷ್ಟು ಓದಿ: ರಾಹುಲ್ ಗಾಂಧಿ ಒಸಾಮಾ ಬಿನ್ ಲಾಡೆನ್‌ನಂತೆ ಗಡ್ಡ ಮಾತ್ರ ಬೆಳಸಲು ಸಾಧ್ಯ, ಪ್ರಧಾನಿಯಾಗಲು ಸಾಧ್ಯವಿಲ್ಲ: ಸಾಮ್ರಾಟ್ ಚೌಧರಿ
ನಿಮ್ಮ ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ) ಸಿಖ್ಖರ ಹತ್ಯೆಯನ್ನು ಒಳಗೊಂಡಿರುತ್ತದೆಯೇ? ಅದರಲ್ಲಿ ರಾಜಸ್ಥಾನದ ಮಹಿಳೆಯರ ಅಪಹರಣ ಸೇರಿದೆಯೇ? ದೇಶವನ್ನು ಹಾಳು ಮಾಡಲು ಬಯಸುವವರ ಜೊತೆ ಪಾಲುದಾರಿಕೆ ಇದೆಯೇ? ನಿಮ್ಮ ಪ್ರೀತಿಯ ಅಂಗಡಿ ಸ್ವಂತ ಪ್ರಜಾಪ್ರಭುತ್ವದ (Democracy) ವಿರುದ್ಧ ಹೊರಗಿನ ಹಸ್ತಕ್ಷೇಪವನ್ನು ಹುಡುಕಲು ನಿಮಗೆ ಒತ್ತಾಯಿಸುತ್ತದೆಯೇ? ಎಂಬ ಪ್ರಶ್ನೆಗಳನ್ನು ಸಚಿವೆ ಇಟ್ಟಿದ್ದಾರೆ.
ರಾಹುಲ್ ಗಾಂಧಿಯವರು ಒಂದೆಡೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ. ಹಿಂದೂ-ಮುಸ್ಲಿಂರನ್ನು ವಿಭಜಿಸುವ ಮಾತುಗಳನ್ನಾಡುತ್ತಾರೆ. ಇದರೊಂದಿಗೆ ಸಮಾಜವನ್ನು ವಿಭಜಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಪ್ರೀತಿಯ ಅಂಗಡಿ ತೆರೆಯುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ದ್ವೇಷದ ಮಾಲ್‍ನ್ನು ತೆರೆದಿದ್ದೀರಿ. ದೇಶದಲ್ಲಿ ನಿಮ್ಮದು ಪ್ರೀತಿಯ ಅಂಗಡಿಯನ್ನು ತೆರೆಯುವ ಚಿಂತನೆಯಲ್ಲ, ಅದು ನಿಮ್ಮ ರಾಜಕೀಯದ ಅಂಗಡಿ ತರೆಯುವ ಹುನ್ನಾರ ಎಂದು ಕುಟುಕಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರು, ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದರು. ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದ ವೇಳೆ ಕರ್ನಾಟಕದಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆ’ ಎಂದು ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ