ಕಟ್ಟಿದ ಕೆಲವೇ ದಿನಗಳಲ್ಲಿ ಪ್ರವಾಹದ ರಭಸಕ್ಕೆ ಕುಸಿದು ಬಿದ್ದ ಸೇತುವೆ!

|

Updated on: Aug 30, 2020 | 8:03 PM

ನಾಗಪುರ್‌‌: ಮಹಾರಾಷ್ಟ್ರದ ನಾಗಪುರ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮಹಾಪೂರವೇ ಬಂದಿದೆ. ಪರಿಣಾಮ ನದಿ ನೀರಿನ ರಭಸಕ್ಕೆ ಅರ್ಧ ಬ್ರಿಡ್ಜ್‌ ಕುಸಿದು ಬಿದ್ದಿದೆ. ಹೌದು ದೇಶಾದ್ಯಂತ ಹಲವೆಡೆ ಸತತವಾಗಿ ಮಳೆ ಸುರಿಯುತ್ತಿದೆ. ಹಾಗೇ ಮಳೆಯ ಪ್ರಕೋಪಕ್ಕೆ ತುತ್ತಾಗಿರುವ ಮಹಾರಾಷ್ಟ್ರದ ನಾಗಪುರ್ ಜಿಲ್ಲೆಯೂ ಒಂದು. ಜಿಲ್ಲೆಯ ರಾಮತೆಕ್‌ ಗ್ರಾಮದ ಬಳಿ ಕೆಲ ದಿನಗಳ ಹಿಂದೆ ಕಟ್ಟಲಾಗಿದ್ದ ಸೇತುವೆಯ ಅರ್ಧಭಾಗ ಈಗ ನೀರಿನ ರಭಸಕ್ಕೆ ಕುಸಿದು ಬಿದ್ದಿದೆ. ಪರಿಣಾಮ ಈ ಭಾಗದ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ […]

ಕಟ್ಟಿದ ಕೆಲವೇ ದಿನಗಳಲ್ಲಿ ಪ್ರವಾಹದ ರಭಸಕ್ಕೆ ಕುಸಿದು ಬಿದ್ದ ಸೇತುವೆ!
Follow us on

ನಾಗಪುರ್‌‌: ಮಹಾರಾಷ್ಟ್ರದ ನಾಗಪುರ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮಹಾಪೂರವೇ ಬಂದಿದೆ. ಪರಿಣಾಮ ನದಿ ನೀರಿನ ರಭಸಕ್ಕೆ ಅರ್ಧ ಬ್ರಿಡ್ಜ್‌ ಕುಸಿದು ಬಿದ್ದಿದೆ.

ಹೌದು ದೇಶಾದ್ಯಂತ ಹಲವೆಡೆ ಸತತವಾಗಿ ಮಳೆ ಸುರಿಯುತ್ತಿದೆ. ಹಾಗೇ ಮಳೆಯ ಪ್ರಕೋಪಕ್ಕೆ ತುತ್ತಾಗಿರುವ ಮಹಾರಾಷ್ಟ್ರದ ನಾಗಪುರ್ ಜಿಲ್ಲೆಯೂ ಒಂದು. ಜಿಲ್ಲೆಯ ರಾಮತೆಕ್‌ ಗ್ರಾಮದ ಬಳಿ ಕೆಲ ದಿನಗಳ ಹಿಂದೆ ಕಟ್ಟಲಾಗಿದ್ದ ಸೇತುವೆಯ ಅರ್ಧಭಾಗ ಈಗ ನೀರಿನ ರಭಸಕ್ಕೆ ಕುಸಿದು ಬಿದ್ದಿದೆ. ಪರಿಣಾಮ ಈ ಭಾಗದ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.

ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ನದಿ, ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹೀಗಿ ಪ್ರವಾಹ ಬಂದಿರೋದ್ರಿಂದ ರಾಜ್ಯದ ಹಲವೆಡೆ ಆಸ್ತಿ ಪಾಸ್ತಿಗೆ ಹಾನಿಯುಂಟಾಗಿದೆ.

ಅಂದ ಹಾಗೆ ಕೆಲ ದಿನಗಳ ಹಿಂದೆಯೂ ಜಮ್ಮು ಮತ್ತು ಕಾಶ್ಮಿರದಲ್ಲಿ ಹಾಗೂ ಬಿಹಾರದಲ್ಲಿ ಕೂಡಾ ಪ್ರವಾಹಕ್ಕೆ ಸಿಲುಕಿ ಬ್ರಿಡ್ಜ್‌ಗಳು ಕುಸಿದು ಬಿದ್ದಿದ್ದವು.

Also Read:ಪ್ರವಾಹದ ರಭಸಕ್ಕೆ ಕುಸಿದು ಬಿದ್ದೇ ಬಿಡ್ತು ಬ್ರಿಡ್ಜ್‌!