ಅನ್ಸಾರಿ ವಿರುದ್ಧ ಪೋಟಾ ದಾಖಲಿಸಿದ್ದಕ್ಕೆ ರಾಜೀನಾಮೆ ನೀಡುವಂತೆ ಮಾಡಿತ್ತು ಸರ್ಕಾರ: ಮಾಜಿ ಡಿಎಸ್‌ಪಿ

|

Updated on: Mar 29, 2024 | 1:25 PM

“20 ವರ್ಷಗಳ ಹಿಂದೆ, 2004 ರಲ್ಲಿ, ಮುಖ್ತಾರ್ ಅನ್ಸಾರಿ ಅವರ ಸಾಮ್ರಾಜ್ಯವು ಉತ್ತುಂಗದಲ್ಲಿತ್ತು. ಅವರು (ಮುಖ್ತಾರ್ ಅನ್ಸಾರಿ) ಕರ್ಫ್ಯೂ ವಿಧಿಸಲಾದ ಪ್ರದೇಶಗಳಲ್ಲಿ ತೆರೆದ ಜೀಪ್‌ಗಳಲ್ಲಿ ಸಂಚರಿಸುತ್ತಿದ್ದರು. ಆ ಸಮಯದಲ್ಲಿ, ನಾನು ಅವರಿಂದ ಲಘು ಮೆಷಿನ್ ಗನ್ ವಶ ಪಡಿಸಿಕೊಂಡೆ. ಅದರ ಮೊದಲು ಅಥವಾ ನಂತರ ಯಾವುದೇ ಗನ್ ಕಂಡುಬಂದಿಲ್ಲ. ನಾನು ಅವರ ವಿರುದ್ಧ ಪೋಟಾ ಕೂಡಾ ವಿಧಿಸಿದೆ. ಆದರೆ ಮುಲಾಯಂ ಸರ್ಕಾರ ಅವರನ್ನು ರಕ್ಷಿಸಲು ಬಯಸಿತ್ತು ಎಂದು ಮಾಜಿ ಡಿಎಸ್ಪಿ ಹೇಳಿದ್ದಾರೆ.

ಅನ್ಸಾರಿ ವಿರುದ್ಧ ಪೋಟಾ ದಾಖಲಿಸಿದ್ದಕ್ಕೆ ರಾಜೀನಾಮೆ ನೀಡುವಂತೆ ಮಾಡಿತ್ತು ಸರ್ಕಾರ: ಮಾಜಿ ಡಿಎಸ್‌ಪಿ
ಮುಖ್ತಾರ್ ಅನ್ಸಾರಿ
Follow us on

ದೆಹಲಿ ಮಾರ್ಚ್ 29: 2004 ರ ಜನವರಿಯಲ್ಲಿ ಗ್ಯಾಂಗ್​​ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ (Mukhtar Ansari) ವಿರುದ್ಧ ಭಯೋತ್ಪಾದನೆ ತಡೆ ಕಾಯಿದೆ (Prevention of Terrorism Act POTA) )ವನ್ನು ದಾಖಲಿಸಿದ್ದಕ್ಕೆ ಅಂದಿನ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಸರ್ಕಾರ ಅವರು 15 ದಿನಗಳಲ್ಲಿ ರಾಜೀನಾಮೆ ನೀಡುವಂತೆ ಮಾಡಿದ್ದನ್ನು ಮಾಜಿ ಉಪ ಪೊಲೀಸ್ ಅಧೀಕ್ಷಕ ಶೈಲೇಂದ್ರ ಸಿಂಗ್ ಶುಕ್ರವಾರ ನೆನಪಿಸಿಕೊಂಡಿದ್ದಾರೆ. ಐದು ಬಾರಿ ಶಾಸಕರಾಗಿದ್ದ ಮುಖ್ತಾರ್ ಅನ್ಸಾರಿ ಅವರ ಸಾವಿನ ಒಂದು ದಿನದ ನಂತರ ಎಎನ್ಐ ಜತೆ ಮಾತನಾಡಿದ ಶೈಲೇಂದ್ರ ಸಿಂಗ್ ತಾನು, ಗ್ಯಾಂಗ್ ಸ್ಟರ್ ರಾಜಕಾರಣಿ ಮುಖ್ತಾರ್ ವಶದಿಂದ ಲಘು ಮೆಷಿನ್ ಗನ್​​ನ್ನು  ಮೊದಲು ವಶಪಡಿಸಿಕೊಂಡಿದ್ದೆ ಎಂದಿದ್ದಾರೆ.

“20 ವರ್ಷಗಳ ಹಿಂದೆ, 2004 ರಲ್ಲಿ, ಮುಖ್ತಾರ್ ಅನ್ಸಾರಿ ಅವರ ಸಾಮ್ರಾಜ್ಯವು ಉತ್ತುಂಗದಲ್ಲಿತ್ತು. ಅವರು (ಮುಖ್ತಾರ್ ಅನ್ಸಾರಿ) ಕರ್ಫ್ಯೂ ವಿಧಿಸಲಾದ ಪ್ರದೇಶಗಳಲ್ಲಿ ತೆರೆದ ಜೀಪ್‌ಗಳಲ್ಲಿ ಸಂಚರಿಸುತ್ತಿದ್ದರು. ಆ ಸಮಯದಲ್ಲಿ, ನಾನು ಅವರಿಂದ ಲಘು ಮೆಷಿನ್ ಗನ್ ವಶ ಪಡಿಸಿಕೊಂಡೆ. ಅದರ ಮೊದಲು ಅಥವಾ ನಂತರ ಯಾವುದೇ ಗನ್ ಕಂಡುಬಂದಿಲ್ಲ. ನಾನು ಅವರ ವಿರುದ್ಧ ಪೋಟಾ ಕೂಡಾ ವಿಧಿಸಿದೆ. ಆದರೆ ಮುಲಾಯಂ ಸರ್ಕಾರ ಅವರನ್ನು ರಕ್ಷಿಸಲು ಬಯಸಿತ್ತು . ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿದರು. ಐಜಿ-ಶ್ರೇಣಿ, ಡಿಐಜಿ ಮತ್ತು ಎಸ್ಪಿ-ಎಸ್ಟಿಎಫ್ ಅನ್ನು ವರ್ಗಾಯಿಸಲಾಯಿತು. ನಾನು ಕೂಡ 15 ದಿನಗಳಲ್ಲಿ ರಾಜೀನಾಮೆ ನೀಡುವಂತೆ ಮಾಡಲಾಗಿತ್ತು. ಆದರೆ ನನ್ನ ರಾಜೀನಾಮೆಯಲ್ಲಿ, ಇದು ನೀವು ಆರಿಸಿದ ಸರ್ಕಾರ, ಇದು ಮಾಫಿಯಾಗಳ ಆದೇಶದಂತೆ ರಕ್ಷಿಸುತ್ತದೆ ಮತ್ತು ಕೆಲಸ ಮಾಡುತ್ತಿದೆ. ನಾನು ಯಾರಿಗೂ ಉಪಕಾರ ಮಾಡಲಿಲ್ಲ. ಇದು ನನ್ನ ಕರ್ತವ್ಯವಾಗಿತ್ತು ಎಂದು ನನ್ನ ಕಾರಣಗಳನ್ನು ಬರೆದು ಜನರ ಮುಂದೆ ಇಟ್ಟಿದ್ದೇನೆ ಎಂದು ಶೈಲೇಂದ್ರ ಸಿಂಗ್ ಹೇಳಿದ್ದಾರೆ.

ಫೆಬ್ರವರಿ 2004 ರಲ್ಲಿ, ಶೈಲೇಂದ್ರ ಸಿಂಗ್ ಅವರು ರಾಜಕೀಯ ಒತ್ತಡದಿಂದ ಸೇವೆಗೆ ರಾಜೀನಾಮೆ ನೀಡಬೇಕಾಯಿತು ಕೆಲವು ತಿಂಗಳ ನಂತರ ಅವರ ವಿರುದ್ಧ  ದಾಂಧಲೆ ಪ್ರಕರಣ ದಾಖಲಿಸಲಾಯಿತು. ಮೇ 2021 ರಲ್ಲಿ, ಯುಪಿ ಸರ್ಕಾರವು ವಾರಣಾಸಿಯಲ್ಲಿ ಮಾಜಿ ಡಿಎಸ್ಪಿ ವಿರುದ್ಧದ ದಾಂಧಲೆ ಪ್ರಕರಣವನ್ನು ಹಿಂತೆಗೆದುಕೊಂಡಿತು.

ಮುಖ್ತಾರ್ ಅನ್ಸಾರಿ ವಿರುದ್ಧ ಅವರು ತೆಗೆದುಕೊಂಡ ಕ್ರಮದಿಂದಾಗಿ ಸಿಂಗ್ ಅಂದಿನ ಸರ್ಕಾರ ಮತ್ತು ಅವರ ಇಲಾಖೆಯ ಮೇಲಧಿಕಾರಿಗಳಿಂದ ಕಿರುಕುಳ ಅನುಭವಿಸಿದರು. ಕೊನೆಗೆ ರಾಜೀನಾಮೆ ನೀಡಬೇಕಾಯಿತು ಮತ್ತು ದಾಂಧಲೆ ಆರೋಪಗಳನ್ನು ಎದುರಿಸಬೇಕಾಯಿತು ಎಂದು ಮಾಜಿ ಡಿಎಸ್ಪಿ ಹೇಳಿದರು.

ಘಟನೆಯನ್ನು ನೆನಪಿಸಿಕೊಳ್ಳುತ್ತಾ, ನಿವೃತ್ತ ಡಿಐಜಿಯೊಬ್ಬರು ಈ ಹಿಂದೆ ಹೆಚ್‌ಟಿಗೆ ತಿಳಿಸಿದರು, ಸಿಂಗ್ ಯುಪಿ ಎಸ್‌ಟಿಎಫ್‌ನ ವಾರಣಾಸಿ ಘಟಕದ ಉಸ್ತುವಾರಿ ವಹಿಸಿದ್ದರು. 2003 ರಲ್ಲಿ ಲಕ್ನೋದಲ್ಲಿ ಅವರ ನಡುವೆ ನಡೆದ ಗುಂಡಿನ ಚಕಮಕಿಯ ನಂತರ ಮುಖ್ತಾರ್ ಅನ್ಸಾರಿ ಮತ್ತು ಕೃಷ್ಣಾ ನಂದ್ ರಾಯ್ ಗ್ಯಾಂಗ್‌ಗಳ ಬಗ್ಗೆ ಪಡೆ ಜಾಗರೂಕವಾಗಿತ್ತು, ನಂತರ ಕೆಲವು ಅನುಮಾನಾಸ್ಪದ ಮೊಬೈಲ್ ಫೋನ್ ಸಂಖ್ಯೆಗಳ ಮೇಲೆ ಎಲೆಕ್ಟ್ರಾನಿಕ್ ಕಣ್ಗಾವಲು ಇಡಲಾಗಿತ್ತು.

₹ 1 ಕೋಟಿಗೆ ಲಘು ಮೆಷಿನ್ ಗನ್ (ಎಲ್‌ಎಂಜಿ) ಒದಗಿಸುವ ಒಪ್ಪಂದದ ಕುರಿತು ಒಂದು ಅನುಮಾನಾಸ್ಪದ ಸಂಭಾಷಣೆಯನ್ನು ಎಸ್‌ಟಿಎಫ್ ತಡೆಹಿಡಿದಿದೆ. ಈ ಕರೆಯ ಆಧಾರದ ಮೇಲೆ, ಅನ್ಸಾರಿ ತನ್ನ ಶಸ್ತ್ರಾಗಾರದಲ್ಲಿ ಎಲ್‌ಎಂಜಿಯನ್ನು ಸೇರಿಸಲು ಪರಾರಿಯಾದ ಸೇನಾಧಿಕಾರಿಯೊಂದಿಗೆ ವ್ಯವಹರಿಸುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ ಎಂದು ಡಿಐಜಿ ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ 1,700 ಕೋಟಿ ರೂ ಮೊತ್ತಕ್ಕೆ ನೋಟೀಸ್ ನೀಡಿದ ಆದಾಯ ತೆರಿಗೆ ಇಲಾಖೆ

ಸಿಂಗ್ ಮತ್ತು ಅವರ ತಂಡವು ವಾರಣಾಸಿಯ ಚೌಬೆಪುರದಿಂದ ಇಬ್ಬರನ್ನು ಬಂಧಿಸಿತು. ಜನವರಿ 25, 2004 ರಂದು ಎಲ್‌ಎಂಜಿ ಮತ್ತು ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡರು, ನಂತರ ಅನ್ಸಾರಿ ಮತ್ತು ಅವರ ಸಹಾಯಕರ ವಿರುದ್ಧ ಪೋಟಾ ಪ್ರಕರಣವನ್ನು ದಾಖಲಿಸಲಾಯಿತು.
ಎಲ್‌ಎಂಜಿ ಡೀಲ್ ನಡೆಸಿದ ಮೊಬೈಲ್ ನಂಬರ್ ಅನ್ಸಾರಿ ಅವರ ಆಪ್ತರ ಹೆಸರಿನಲ್ಲಿ ನೀಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಎಲ್‌ಎಂಜಿ ಅಕ್ರಮ ಖರೀದಿಯಲ್ಲಿ ಅನ್ಸಾರಿ ಭಾಗಿಯಾಗಿದ್ದಾರೆ ಎಂದು ಪೋಟಾ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರ ಮೇಲೆ ರಾಜಕೀಯ ಒತ್ತಡ ಬೆಳೆಯಲು ಪ್ರಾರಂಭಿಸಿತು ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:24 pm, Fri, 29 March 24