ಆಶೀರ್ವಾದ ಅಭಿಯಾನ ಆರಂಭಿಸಿದ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ

ನೀವು ಯಾವುದೇ ಸಂದೇಶವನ್ನು ಸಹ ಹಂಚಿಕೊಳ್ಳಬಹುದು. ಅನೇಕ ತಾಯಂದಿರು ಮತ್ತು ಹೆಣ್ಣುಮಕ್ಕಳು ತಮ್ಮ ಮಗ ಮತ್ತು ಸಹೋದರನಿಗೆ (ಕೇಜ್ರಿವಾಲ್) ಶುಭಾಶಯಗಳನ್ನು ಕಳುಹಿಸಿದ್ದಾರೆ. ನನಗೆ ಅನೇಕ ಕರೆಗಳು ಬಂದವು ಮತ್ತು ಅನೇಕ ಜನರು ಅರವಿಂದ್ ಕೇಜ್ರಿವಾಲ್​​ಗಾಗಿ ಉಪವಾಸ ಮಾಡುತ್ತಿದ್ದರು. ಈ WhatsApp ಸಂಖ್ಯೆಗೆ ನಿಮ್ಮ ಪ್ರೀತಿಯನ್ನು ಬರೆದು ಕಳುಹಿಸಿ ಎಂದ ಸುನೀತಾ ಕೇಜ್ರಿವಾಲ್

ಆಶೀರ್ವಾದ ಅಭಿಯಾನ ಆರಂಭಿಸಿದ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ
ಸುನೀತಾ ಕೇಜ್ರಿವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 29, 2024 | 2:11 PM

ದೆಹಲಿ ಮಾರ್ಚ್ 29: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಪತ್ನಿ ಸುನೀತಾ (Sunita) ಶುಕ್ರವಾರ ವಾಟ್ಸಾಪ್ ಮೂಲಕ “ಕೇಜ್ರಿವಾಲ್ ಕೋ ಆಶೀರ್ವಾದ್ (ಕೇಜ್ರಿವಾಲ್ ಅವರನ್ನು ಆಶೀರ್ವದಿಸಿ)” ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಅಭಿಯಾನ ಮೂಲಕ ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ (AAP) ನಾಯಕನಿಗೆ ಆಶೀರ್ವಾದ ಮತ್ತು ಶುಭಾಶಯಗಳನ್ನು ಕಳುಹಿಸಲು ಜನರನ್ನು ಒತ್ತಾಯಿಸಲಾಗುತ್ತಿದೆ. “ನೀವು ಯಾವುದೇ ಸಂದೇಶವನ್ನು ಸಹ ಹಂಚಿಕೊಳ್ಳಬಹುದು. ಅನೇಕ ತಾಯಂದಿರು ಮತ್ತು ಹೆಣ್ಣುಮಕ್ಕಳು ತಮ್ಮ ಮಗ , ಸಹೋದರನಿಗೆ (ಕೇಜ್ರಿವಾಲ್) ಶುಭಾಶಯಗಳನ್ನು ಕಳುಹಿಸಿದ್ದಾರೆ. ನನಗೆ ಅನೇಕ ಕರೆಗಳು ಬಂದವು ಮತ್ತು ಅನೇಕ ಜನರು ಅರವಿಂದ್ ಕೇಜ್ರಿವಾಲ್​​ಗಾಗಿ ಉಪವಾಸ ಮಾಡುತ್ತಿದ್ದರು. ಈ WhatsApp ಸಂಖ್ಯೆಗೆ ನಿಮ್ಮ ಪ್ರೀತಿಯನ್ನು ಬರೆದು ಕಳುಹಿಸಿ. ನಿಮ್ಮ ಸಂದೇಶಗಳನ್ನು ಓದುವಾಗ ಅವರಿಗೆ ಖುಷಿಯಾಗುತ್ತದೆ. ಜೈಲಿನಲ್ಲಿರುವ ಅವರಿಗೆ ಎಲ್ಲ ಸಂದೇಶಗಳನ್ನು ತಲುಪಿಸುತ್ತೇನೆ’ ಎಂದು ಸುನೀತಾ ಹೇಳಿದ್ದಾರೆ. “ಕೇಜ್ರಿವಾಲ್ ಅವರಿಗೆ ಸಂದೇಶ ಕಳುಹಿಸಲು ನೀವು ಎಎಪಿ ಕಾರ್ಯಕರ್ತರಾಗಿರಬೇಕಾಗಿಲ್ಲ. ನೀವು ಯಾವ ಪಕ್ಷದಲ್ಲಿದ್ದರೂ ಅರವಿಂದ್ ಕೇಜ್ರಿವಾಲ್ ಅವರಿಗೆ ಸಂದೇಶಗಳನ್ನು ಕಳುಹಿಸಿ ಎಂದು ಸುನೀತಾ ಮನವಿ ಮಾಡಿದ್ದಾರೆ.

ಇದೀಗ ರದ್ದಾದ 2021-22ರ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಬೇಕೆಂಬ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳ ನಂತರ, ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ED) ಕೇಜ್ರಿವಾಲ್ ಅವರನ್ನು ಬಂಧಿಸಿತು.

ಸುನೀತಾ ಸುದ್ದಿಗೋಷ್ಠಿ

ಗುರುವಾರ ದೆಹಲಿ ನ್ಯಾಯಾಲಯ ಕೇಜ್ರಿವಾಲ್ ಅವರ ಇಡಿ ಅವರ ಬಂಧನವನ್ನು ವಿಸ್ತರಿಸಿದೆ. ಕೇಜ್ರಿವಾಲ್ ಅತ್ಯಂತ ಭ್ರಷ್ಟ, ಸರ್ವಾಧಿಕಾರಿ ಮತ್ತು ಶಕ್ತಿಶಾಲಿ ಶಕ್ತಿಗಳಿಗೆ ಸವಾಲು ಹಾಕಿದ್ದಾರೆ ಎಂದು ಸುನೀತಾ ಹೇಳಿದರು. “ಅರವಿಂದ್ ಕೇಜ್ರಿವಾಲ್ ನಿನ್ನೆ (ಗುರುವಾರ) ನ್ಯಾಯಾಲಯದಲ್ಲಿ ಮಾತನಾಡಿದ್ದಾರೆ. ಅವರ ಪರವಾಗಿ ಅವರು ವಾದಿಸಿದ್ದಾರೆ. ನೀವೆಲ್ಲರೂ ಅದನ್ನು ಕೇಳಿರಬೇಕು. ಕೇಳದೇ ಇದ್ದರೆ ಒಮ್ಮೆ ಕೇಳಿ. ನ್ಯಾಯಾಲಯದ ಮುಂದೆ ಅವರು ನಡೆದುಕೊಂಡ ರೀತಿಯಲ್ಲಿ ಮಾತನಾಡಲು ಸಾಕಷ್ಟು ಧೈರ್ಯ ಬೇಕು. ಅವರು ನಿಜವಾದ ದೇಶಭಕ್ತ, ಅದ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಸರ್ವಾಧಿಕಾರದ ವಿರುದ್ಧ ಹೋರಾಡುತ್ತಿದಂತೆ ಅವರು ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಅಬಕಾರಿ ನೀತಿ ಪ್ರಕರಣದ ತನಿಖೆಯ ಹೆಸರಿನಲ್ಲಿ ಇಡಿ ದಂಧೆ ನಡೆಸುತ್ತಿದೆ ಎಂದು ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ. ಎಎಪಿಯನ್ನು ಹತ್ತಿಕ್ಕುವುದು ಮತ್ತು ಅವರನ್ನು ಸಿಲುಕಿಸುವುದು ಇಡಿಯ ಏಕೈಕ ಉದ್ದೇಶವಾಗಿದೆ. ಅಬಕಾರಿ ನೀತಿ ತನಿಖೆಯಲ್ಲಿ “ರಾಕೆಟ್” ಅನ್ನು ಕೆಲವು ಉದ್ಯಮಿಗಳಿಂದ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಪಡೆದ ಹಣಕ್ಕೆ ಲಿಂಕ್ ಮಾಡಲು ಪ್ರಯತ್ನಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ 1,700 ಕೋಟಿ ರೂ ಮೊತ್ತಕ್ಕೆ ನೋಟೀಸ್ ನೀಡಿದ ಆದಾಯ ತೆರಿಗೆ ಇಲಾಖೆ

ಕೇಜ್ರಿವಾಲ್ ಅವರನ್ನು ತಮ್ಮ ಮಗ ಮತ್ತು ಸಹೋದರ ಎಂದು ಪರಿಗಣಿಸುವಂತೆ ಸುನೀತಾ ಜನರನ್ನು ಕೇಳಿಕೊಂಡಿದ್ದು “ಈ ಹೋರಾಟದಲ್ಲಿ ನೀವು ಅವನನ್ನು ಬೆಂಬಲಿಸುವುದಿಲ್ಲವೇ? ಒಟ್ಟಾಗಿ ನಾವು ಹೋರಾಡುತ್ತೇವೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ. ಕೇಜ್ರಿವಾಲ್ ಬಂಧನದ ನಂತರ ಸುನೀತಾ ಅವರು ಮೂರನೇ ಬಾರಿ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರ ಬಂಧನ ರಾಜಕೀಯ ಪಿತೂರಿ. ಕೇಜ್ರಿವಾಲ್ ಅವರ ಆರೋಗ್ಯ ಸರಿಯಿಲ್ಲ. ಅವರಿಗೆ ಕಿರುಕುಳ ಮತ್ತು ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದ ಸುನೀತಾ ಜನರು ಉತ್ತರ ನೀಡುತ್ತಾರೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Fri, 29 March 24