ಅನಗತ್ಯ, ಸ್ವೀಕಾರಾರ್ಹವಲ್ಲ: ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಅಮೆರಿಕದ ಹೇಳಿಕೆಗೆ ಭಾರತ ಪ್ರತಿಕ್ರಿಯೆ
ಭಾರತದ "ಸದೃಢ ಮತ್ತು ಸ್ವತಂತ್ರ ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಗ್ಗೆ ಒತ್ತಿ ಹೇಳಿದ ವಿದೇಶಾಂಗ ಸಚಿವಾಲಯ ನಮ್ಮ ಚುನಾವಣಾ ಮತ್ತು ಕಾನೂನು ಪ್ರಕ್ರಿಯೆಗಳ ಮೇಲೆ ಬಾಹ್ಯ ದೋಷಾರೋಪಣೆಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಸಚಿವಾಲಯದ ವಕ್ತಾರರು ದೇಶದ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು "ಯಾವುದೇ ರೀತಿಯ ಅನಗತ್ಯ ಬಾಹ್ಯ ಪ್ರಭಾವಗಳಿಂದ" ರಕ್ಷಿಸಲು ಭಾರತ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು.
ದೆಹಲಿ ಮಾರ್ಚ್ 28: ಅರವಿಂದ್ ಕೇಜ್ರಿವಾಲ್ (Arvind Kejriwal) ಬಂಧನದ ಕುರಿತು ಅಮೆರಿಕ ನೀಡಿರುವ ಹೇಳಿಕೆಗಳು ಅನಗತ್ಯವಾಗಿದ್ದು, ತೀವ್ರ ಪ್ರತಿಭಟನೆಯನ್ನು ದಾಖಲಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs) ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ಅಮೆರಿಕದ (US) ಹೇಳಿಕೆಗಳಿಗೆ ಸಂಬಂಧಿಸಿದಂತೆ ನಿನ್ನೆ ಭಾರತವು ಅಲ್ಲಿನ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗೆ ತನ್ನ ತೀವ್ರ ಆಕ್ಷೇಪಣೆ ಮತ್ತು ಪ್ರತಿಭಟನೆಯನ್ನು ಸಲ್ಲಿಸಿತು. ಇತ್ತೀಚಿನ ಹೇಳಿಕೆಗಳು ಅನಗತ್ಯವಾಗಿವೆ. ಭಾರತದಲ್ಲಿ, ಕಾನೂನು ಪ್ರಕ್ರಿಯೆಗಳು ಕಾನೂನಿನ ನಿಯಮದಿಂದ ನಡೆಸಲ್ಪಡುತ್ತವೆ. ಇದೇ ರೀತಿಯ ನೀತಿಯನ್ನು ಹೊಂದಿರುವ ಯಾರಾದರೂ ವಿಶೇಷವಾಗಿ ಸಹವರ್ತಿ ಪ್ರಜಾಪ್ರಭುತ್ವಗಳು ಈ ಸತ್ಯವನ್ನು ಶ್ಲಾಘಿಸಲು ಹಿಂಜರಿಯಬಾರದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
2024 ರ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಅನ್ಯಾಯದ ತೆರಿಗೆ ಬೇಡಿಕೆಗಳ ಮೇಲೆ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಕಾಂಗ್ರೆಸ್‌ನ ಹೇಳಿಕೆಯ ಕುರಿತು ಅಮೆರಿಕದ ಹೇಳಿಕೆಗಳೂ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತ ಮಾಡಿದ್ದರಿಂದ ತನ್ನ ಚುನಾವಣಾ ಪ್ರಚಾರಕ್ಕೆ ಖರ್ಚು ಮಾಡಲು ಹಣವಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು.
ಎಂಇಎ ವಕ್ತಾರರ ಸುದ್ದಿಗೋಷ್ಠಿ
#WATCH | MEA Spokesperson Randhir Jaiswal says “Our position on the matter of Arunachal Pradesh has been made very clear time and again. We have also issued statements in this regard. China may repeat its baseless claims as many times as they want. That is not going to change our… pic.twitter.com/mcPS4cnQTJ
— ANI (@ANI) March 28, 2024
ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, “ಅರುಣಾಚಲ ಪ್ರದೇಶದ ವಿಷಯದಲ್ಲಿ ನಮ್ಮ ನಿಲುವನ್ನು ಪದೇ ಪದೇ ಸ್ಪಷ್ಟಪಡಿಸಲಾಗಿದೆ. ನಾವು ಈ ನಿಟ್ಟಿನಲ್ಲಿ ಹೇಳಿಕೆಗಳನ್ನು ನೀಡಿದ್ದೇವೆ. ಚೀನಾ ತನ್ನ ಆಧಾರರಹಿತ ಹಕ್ಕುಗಳನ್ನು ಎಷ್ಟು ಬಾರಿ ಬೇಕಾದರೂ ಪುನರಾವರ್ತಿಸಬಹುದು. ಇದರಿಂದ ನಮ್ಮ ನಿಲುವು ಬದಲಾಗುವುದಿಲ್ಲ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದ್ದಾರೆ.
ಭಾರತದ “ಸದೃಢ ಮತ್ತು ಸ್ವತಂತ್ರ ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಗ್ಗೆ ಒತ್ತಿ ಹೇಳಿದ ವಿದೇಶಾಂಗ ಸಚಿವಾಲಯ ನಮ್ಮ ಚುನಾವಣಾ ಮತ್ತು ಕಾನೂನು ಪ್ರಕ್ರಿಯೆಗಳ ಮೇಲೆ ಬಾಹ್ಯ ದೋಷಾರೋಪಣೆಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಸಚಿವಾಲಯದ ವಕ್ತಾರರು ದೇಶದ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು “ಯಾವುದೇ ರೀತಿಯ ಅನಗತ್ಯ ಬಾಹ್ಯ ಪ್ರಭಾವಗಳಿಂದ” ರಕ್ಷಿಸಲು ಭಾರತ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು.
“ಪರಸ್ಪರ ಗೌರವ ಮತ್ತು ತಿಳುವಳಿಕೆಯು ಅಂತರಾಷ್ಟ್ರೀಯ ಸಂಬಂಧಗಳ ಅಡಿಪಾಯವನ್ನು ರೂಪಿಸುತ್ತದೆ ಮತ್ತು ರಾಜ್ಯಗಳು ಇತರರ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಗೌರವಿಸುವ ನಿರೀಕ್ಷೆಯಿದೆ” ಎಂದು ಎಂಇಎ ಹೇಳಿದೆ.
ಇದನ್ನೂ ಓದಿ: ಭಾರತದ ಆಂತರಿಕ ವಿಷಯಗಳ ಬಗ್ಗೆ ಮತ್ತೆ ಮಾತಾಡಿದ ಅಮೆರಿಕ, ಕೇಜ್ರಿವಾಲ್ ಬಂಧನ, ಕಾಂಗ್ರೆಸ್ ಖಾತೆ ಸ್ಥಗಿತ ಪ್ರಸ್ತಾಪ
ಕೇಜ್ರಿವಾಲ್ ಅವರ ಬಂಧನ ಬಗ್ಗೆ “ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಯುಎಸ್ ಬುಧವಾರ ಪುನರುಚ್ಚರಿಸಿದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಹೇಳಿಕೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದೆ. ಎಂಇಎ ಅಧಿಕಾರಿಗಳು ಮತ್ತು ದೆಹಲಿಯಲ್ಲಿ ಅಮೆರಿಕದ ಕಾರ್ಯನಿರ್ವಾಹಕ ಉಪ ಮುಖ್ಯಸ್ಥ ಗ್ಲೋರಿಯಾ ಬರ್ಬೆನಾ ನಡುವಿನ ಸಭೆಯ ಬಗ್ಗೆ ಕೇಳಿದಾಗ “ಈ ಕ್ರಮಗಳನ್ನು ನಿಕಟವಾಗಿ ಅನುಸರಿಸುವುದನ್ನು ಮುಂದುವರೆಸಿದೆ” ಎಂದು ಅಮೆರಿಕ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Thu, 28 March 24