AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ನಿವಾಸದಲ್ಲಿ ಬಿಲ್ ಗೇಟ್ಸ್; ಎಐನಿಂದ ಪರಿಸರದವರೆಗೆ ವಿವಿಧ ವಿಚಾರ ಚರ್ಚಿಸಿದ ಜಾಗತಿಕ ನಾಯಕರು

Bill Gates and Narendra Modi interaction: ಮೈಕ್ರೋಸಾಫ್ಟ್​ನ ಮಾಜಿ ಛೇರ್ಮನ್ ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ, ಅವರೊಂದಿಗೆ ಅನೌಪಚಾರಿಕ ಚರ್ಚೆ ನಡೆಸಿದ್ದಾರೆ. ಇದರ ಒಂದು ಪ್ರೋಮೋವನ್ನು ಎಎನ್​ಐ ಸುದ್ದಿ ಸಂಸ್ಥೆ ಮಾರ್ಚ್ 28ರಂದು ಬಿಡುಗಡೆ ಮಾಡಿದೆ. ತಂತ್ರಜ್ಞಾನದಿಂದ ಹಿಡಿದು ಹವಾಮಾನ ಬದಲಾವಣೆ, ಕೋವಿಡ್ ಸಮಸ್ಯೆ ಇತ್ಯಾದಿ ಹಲವು ವಿಚಾರಗಳ ಬಗ್ಗೆ ಇಬ್ಬರೂ ಲೋಕಾಭಿರಾಮವಾಗಿ ಚರ್ಚೆ ನಡೆಸಿರುವಂತಿದೆ. ಇದರ ಪೂರ್ಣ ವಿಡಿಯೋವನ್ನು ಮಾರ್ಚ್ 29ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಮೋದಿ ನಿವಾಸದಲ್ಲಿ ಬಿಲ್ ಗೇಟ್ಸ್; ಎಐನಿಂದ ಪರಿಸರದವರೆಗೆ ವಿವಿಧ ವಿಚಾರ ಚರ್ಚಿಸಿದ ಜಾಗತಿಕ ನಾಯಕರು
ಬಿಲ್ ಗೇಟ್ಸ್, ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 28, 2024 | 5:52 PM

Share

ನವದೆಹಲಿ, ಮಾರ್ಚ್ 28: ಮೈಕ್ರೋಸಾಫ್ಟ್ ಸಂಸ್ಥಾಪಕರಾದ ಬಿಲ್ ಗೇಟ್ಸ್ (Bill Gates) ಇಂದು ಗುರುವಾರ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ನರೇಂದ್ರ ಮೋದಿ (Narendra Modi) ಜೊತೆ ಚರ್ಚೆ ನಡೆಸಿದರು. ಇದರ ಒಂದು ಪ್ರೋಮೋವನ್ನು ಎಎನ್​ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ನಾಳೆ ಶುಕ್ರವಾರ ಇವರ ಭೇಟಿ ಮತ್ತು ಚರ್ಚೆಯ ಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಪ್ರೋಮೋದಲ್ಲಿರುವ (promo) ದೃಶ್ಯಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಲ್ ಗೇಟ್ಸ್ ಬಹಳ ಆತ್ಮೀಯವಾಗಿ ಮತ್ತು ಮುಕ್ತವಾಗಿ ಮಾತನಾಡುತ್ತಾರೆ, ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ತಂತ್ರಜ್ಞಾನ ಬಳಕೆಯಿಂದ ಹಿಡಿದು ಕೋವಿಡ್, ಹವಾಮಾನ ಬದಲಾವಣೆ ವಿರುದ್ಧ ನಡೆಯುತ್ತಿರುವ ಹೋರಾಟಗಳ ಸುತ್ತ ಮಾತುಕತೆ ನಡೆಯುತ್ತದೆ.

ಭಾರತದ ಬಗ್ಗೆ ನನಗಿರುವ ಒಂದು ಮೆಚ್ಚುಗೆ ಎಂದರೆ ಇದು ತಂತ್ರಜ್ಞಾನವನ್ನು ಬಳಸುತ್ತಿರುವುದು ಮಾತ್ರವಲ್ಲ, ಅದನ್ನು ಮುನ್ನಡೆಸುತ್ತಲೂ ಇದೆ ಎಂದು ಬಿಲ್ ಗೇಟ್ಸ್ ಹೇಳುತ್ತಾರೆ. ತಂತ್ರಜ್ಞಾನ ವಿಚಾರವಾಗಿ ಮಾತನಾಡುತ್ತಾ ನರೇಂದ್ರ ಮೋದಿ ತಮ್ಮ ಮೊಬೈಲ್​ನಲ್ಲಿರುವ ಆ್ಯಪ್​ವೊಂದನ್ನು ಬಿಲ್ ಗೇಟ್ಸ್​ಗೆ ತೋರಿಸಿ, ಸೆಲ್ಫಿ ತೆಗೆಯಲು ಹೇಳುತ್ತಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕರು ವಾವ್ ಎಂದು ಉದ್ಗರಿಸುತ್ತಾರೆ.

ಇದನ್ನೂ ಓದಿ: ಅನಗತ್ಯ, ಸ್ವೀಕಾರಾರ್ಹವಲ್ಲ: ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಅಮೆರಿಕದ ಹೇಳಿಕೆಗೆ ಭಾರತ ಪ್ರತಿಕ್ರಿಯೆ

ಇವತ್ತು ಹಳ್ಳಿಗಳಲ್ಲಿರುವವರಿಗೆ ತಂತ್ರಜ್ಞಾನ ತಲುಪಿಸುವುದು ನನಗೆ ಮುಖ್ಯ. ನಮ್ಮ ಕಾಲದಲ್ಲಿ ಹೆಣ್ಮಕ್ಕಳು ಸೈಕಲ್ ತುಳಿಯುವುದೇ ಕಷ್ಟವಾಗಿತ್ತು. ಇವತ್ತು ಪೈಲಟ್​ಗಳಾಗಿದ್ದಾರೆ, ಡ್ರೋನ್ ಓಡಿಸುತ್ತಾರೆ.

ಹವಾಮಾನ ಬದಲಾವಣೆ ಸಮಸ್ಯೆ ಬಗೆಹರಿಸುವ ವಿಚಾರವನ್ನು ಬಿಲ್ ಗೇಟ್ಸ್ ಪ್ರಸ್ತಾಪಿಸುತ್ತಾರೆ. ಇದಕ್ಕೆ ನರೇಂದ್ರ ಮೋದಿ ತಾವು ಹಾಕಿದ ಕೋಟ್ ಅಥವಾ ಜಾಕೆಟ್ ಅನ್ನು ತೋರಿಸುತ್ತಾರೆ. ಇದು ರೀಸೈಕಲ್ಡ್ ವಸ್ತುಗಳಿಂದ ತಯಾರಿಸಿದ ಜಾಕೆಟ್ ಎನ್ನುತ್ತಾರೆ.

ಪ್ರೋಮೋ ವಿಡಿಯೋ

ಕೋವಿಡ್ ಸಾಂಕ್ರಾಮಿಕ ರೋಗವನ್ನು ಸರ್ಕಾರ ನಿಯಂತ್ರಣ ಮಾಡಿದ ಬಗ್ಗೆ ಬಿಲ್ ಗೇಟ್ಸ್ ವಿಚಾರ ಪ್ರಸ್ತಾಪ ಮಾಡುತ್ತಾರೆ. ಇದು ವೈರಸ್ ಮತ್ತು ಸರ್ಕಾರದ ನಡುವಿನ ಯುದ್ಧವಲ್ಲ, ಜೀವ ಮತ್ತು ವೈರಸ್ ನಡುವಿನ ಯುದ್ಧವಾಗಿತ್ತು ಎಂಬುದು ಪ್ರಧಾನಿಗಳ ಉತ್ತರ.

ಇದನ್ನೂ ಓದಿ: ಭಾರತದ ಆರ್ಥಿಕತೆ 2047ರವರೆಗೆ ಸತತ ಎಂಟು ಪ್ರತಿಶತ ವೇಗದಲ್ಲಿ ಬೆಳೆಯಲು ಸಾಧ್ಯ: ಕೆವಿ ಸುಬ್ರಮಣಿಯನ್

ಎಎನ್​ಐ ಸುದ್ದಿಸಂಸ್ಥೆ ಇವರಿಬ್ಬರ ಅನೌಪಚಾರಿಕ ಚರ್ಚೆಯ ಪೂರ್ಣ ವಿಡಿಯೋ ತುಣಕನ್ನು ಮಾರ್ಚ್ 29ರಂದು ಬಿಡುಗಡೆ ಮಾಡಲಿದೆ. ನರೇಂದ್ರ ಮೋದಿ ಮತ್ತು ಬಿಲ್ ಗೇಟ್ಸ್ ಔಪಚಾರಿಕವಾಗಿ ಹಲವು ಬಾರಿ ಭೇಟಿಯಾಗಿದ್ದಾರೆ. ಫೆಬ್ರುವರಿ ಕೊನೆಯ ವಾರದಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಲ್ ಗೇಟ್ಸ್ ಇದೇ ಪ್ರಧಾನಿ ನಿವಾಸಕ್ಕೆ ತೆರಳಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದೇ ಮೊದಲ ಬಾರಿಗೆ ಅನೌಪಚಾರಿಕವಾಗಿ ಅವರಿಬ್ಬರು ಮಾತನಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Thu, 28 March 24

ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ