AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಆರ್ಥಿಕತೆ 2047ರವರೆಗೆ ಸತತ ಎಂಟು ಪ್ರತಿಶತ ವೇಗದಲ್ಲಿ ಬೆಳೆಯಲು ಸಾಧ್ಯ: ಕೆವಿ ಸುಬ್ರಮಣಿಯನ್

KV Subramanian on Indian economic growth: ಭಾರತದ ಆರ್ಥಿಕತೆ ಇವತ್ತಿನಿಂದ 2047ರವರೆಗೂ ಶೇ. 8ರ ದರದಲ್ಲಿ ಸತತವಾಗಿ ಬೆಳೆಯಲು ಸಾಧ್ಯ ಎಂದು ಐಎಂಎಫ್​​ಗೆ ಭಾರತದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಕೆವಿ ಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಈ ಹಿಂದೆ ಶೇ. 8ರ ಬೆಳವಣಿಗೆಯಲ್ಲಿ ಸ್ಥಿರವಾಗಿ ಮುಂದುವರಿದಿಲ್ಲವಾದರೂ ಭವಿಷ್ಯದಲ್ಲಿ ಇದು ಸಾಧ್ಯವಿದೆ. ಅದಕ್ಕಾಗಿ ಕಳೆದ 10 ವರ್ಷದಲ್ಲಿ ಜಾರಿಯಾದ ಒಳ್ಳೆಯ ನೀತಿಗಳನ್ನು ದ್ವಿಗುಣಗೊಳಿಸುವ ಮೂಲಕ ಮತ್ತು ಸುಧಾರಣಾ ಕ್ರಮಗಳನ್ನು ವೇಗವಾಗಿ ಜಾರಿ ಮಾಡುವ ಮೂಲಕ ಉನ್ನತ ಮಟ್ಟದ ಆರ್ಥಿಕ ಬೆಳವಣಿಗೆ ಸಾಧಿಸಲು ಸಾಧ್ಯವಿದೆ ಎಂದಿದ್ದಾರೆ ಸುಬ್ರಮಣಿಯನ್.

ಭಾರತದ ಆರ್ಥಿಕತೆ 2047ರವರೆಗೆ ಸತತ ಎಂಟು ಪ್ರತಿಶತ ವೇಗದಲ್ಲಿ ಬೆಳೆಯಲು ಸಾಧ್ಯ: ಕೆವಿ ಸುಬ್ರಮಣಿಯನ್
ಕೆವಿ ಸುಬ್ರಮಣಿಯನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 28, 2024 | 4:02 PM

Share

ನವದೆಹಲಿ, ಮಾರ್ಚ್ 28: ಸತತವಾಗಿ ಶೇ. 8ರ ಬೆಳವಣಿಗೆ ಮಟ್ಟವನ್ನು ಕಾಯ್ದುಕೊಳ್ಳುವುದು ಕಷ್ಟ. ಆದರೂ ಕೂಡ ಭಾರತ 2047ರವರೆಗೂ ಶೇ. 8ರ ದರದಲ್ಲಿ ಆರ್ಥಿಕ ವೃದ್ಧಿ (Indian economic growth) ಕಾಣಲು ಸಾಧ್ಯವಿದೆ ಎಂದು ಐಎಂಎಫ್​ಗೆ ಭಾರತದ ಎಕ್ಸಿಕ್ಯೂಟಿವ್ ನಿರ್ದೇಶಕರಾಗಿರುವ ಕೆವಿ ಸುಬ್ರಮಣಿಯನ್ (KV Subramanian) ಅಭಿಪ್ರಾಯಪಟ್ಟಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಜಾರಿಗೊಳಿಸಲಾಗಿರುವ ಒಳ್ಳೆಯ ನೀತಿಗಳನ್ನು ದ್ವಿಗುಣಗೊಳಿಸುವ ಮೂಲಕ ಮತ್ತು ಸುಧಾರಣಾ ಕ್ರಮಗಳನ್ನು ವೇಗವಾಗಿ ಜಾರಿಗೊಳಿಸುವುದರ ಮೂಲಕ ಭಾರತವು ಶೇ. 8ರ ದರವನ್ನು ದಾಟಬಹುದು ಎಂದು ಸುಬ್ರಮಣಿಯನ್ ಹೇಳಿದ್ದಾರೆ.

1991ರಿಂದ ಇಲ್ಲಿಯವರೆಗೆ ಭಾರತದ ಆರ್ಥಿಕ ವೃದ್ಧಿ ಸರಾಸರಿಯಾಗಿ ಶೇ. 7ರಷ್ಟಿದೆ. ಶೇ. 8ರ ಬೆಳವಣಿಗೆ ದರ ಸಾಧಿಸಿದೆಯಾದರೂ ಸ್ಥಿರವಾಗಿ ಬಂದಿಲ್ಲ. ಸುಬ್ರಮಣಿಯನ್ ಪ್ರಕಾರ ಒಂದಷ್ಟು ಸುಧಾರಣೆಗಳನ್ನು ಮುಂದುವರಿಸಿದರೆ ಈ ವೇಗದ ಪ್ರಗತಿ ಸಾಧ್ಯವಿದೆ.

ಇದನ್ನೂ ಓದಿ: ಚೀನಾ ಪರ್ವ ಮುಗಿಯಿತು; ಭಾರತವೊಂದೇ ಪ್ರಮುಖ ಆರ್ಥಿಕತೆಯಾಗಲಿದೆ: ಅರವಿಂದ್ ಪನಗರಿಯಾ ಕೊಟ್ಟ ಕಾರಣಗಳಿವು

‘ಕಳೆದ 10 ವರ್ಷದಲ್ಲಿ ಭಾರತ ಸಾಧಿಸಿರುವ ಬೆಳವಣಿಗೆಯನ್ನು ನೋಡಿದರೆ, ನಾವು 10 ವರ್ಷದಲ್ಲಿ ಜಾರಿಗೆ ತಂದಿರುವ ಒಳ್ಳೆಯ ನೀತಿಗಳನ್ನು ಹೆಚ್ಚಿಸಿ, ಸುಧಾರಣೆಗಳನ್ನು ಬೇಗ ಜಾರಿಗೊಳಿಸಿದರೆ ಇಲ್ಲಿಂದ 2047ರವರೆಗೂ ದೇಶದ ಆರ್ಥಿಕತೆ ಶೇ. 8ರಷ್ಟು ವೃದ್ಧಿಸಬಲ್ಲುದು,’ ಎಂದು ಟೈಮ್ಸ್ ನೌನ ಕಾರ್ಯಕ್ರಮವೊಂದರಲ್ಲಿ ಕೃಷ್ಣಮೂರ್ತಿ ವೆಂಕಟ್ ಸುಬ್ರಮಣಿಯನ್ ತಿಳಿಸಿದ್ದಾರೆ.

ಭಾರತ 2023ರಲ್ಲಿ ಬಹಳ ಉತ್ತಮವಾದ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ಮೂರು ಕ್ವಾರ್ಟರ್​ಗಳಲ್ಲಿ ಶೇ. 7.8, ಶೇ. 7.6 ಮತ್ತು ಶೇ. 8.4ರಷ್ಟು ಜಿಡಿಪಿ ಬೆಳೆದಿದೆ. ಈ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ. 8ರಷ್ಟು ಬೆಳೆಯುವ ನಿರೀಕ್ಷೆ ಇದೆ.

ಇದೇ ರೀತಿ 2047ರವರೆಗೂ ಭಾರತ ಶೇ 8ರ ವೇಗದಲ್ಲಿ ಬೆಳೆಯುತ್ತಾ ಹೋದರೆ 55 ಟ್ರಿಲಿಯನ್ ಡಾಲರ್​ನಷ್ಟು ಅಗಾಧವಾಗಿರುತ್ತದೆ ಆರ್ಥಿಕತೆ ಎಂದು ಕೆ ವಿ ಸುಬ್ರಮಣಿಯನ್ ಹೇಳುತ್ತಾರೆ.

ಇದನ್ನೂ ಓದಿ: ಭಾರತ ಈಗ ಚಿಪ್ ತಯಾರಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು: ರಘುರಾಮ್ ರಾಜನ್

ಭಾರತದ ಜಿಡಿಪಿಗೆ ಆಂತರಿಕ ಅನುಭೋಗದ ಕೊಡುಗೆ ಶೇ. 58ರಷ್ಟಿದೆ. ಹೀಗಾಗಿ, ಆಂತರಿಕ ಆರ್ಥಿಕತೆಯನ್ನು ಬಲಪಡಿಸುವ ಅವಶ್ಯಕತೆ ಇದೆ. ನಾವು ಸಾಕಷ್ಟು ಉದ್ಯೋಗ ಸೃಷ್ಟಿಸಬಲ್ಲೆವಾದರೆ ಇದರಿಂದ ಅನುಭೋಗ ಪ್ರಮಾಣ ಇನ್ನಷ್ಟು ಹೆಚ್ಚುತ್ತದೆ. ಉದ್ಯೋಗ ಸೃಷ್ಟಿಗೆ ಪುಷ್ಟಿ ಸಿಗಬೇಕಾದರೆ ಉತ್ಪಾದನಾ ವಲಯಕ್ಕೆ ಉತ್ತೇಜನ ಕೊಡಬೇಕಾಗುತ್ತದೆ. ಅದಕ್ಕಾಗಿ ಭೂ ಸುಧಾರಣೆ, ಕಾರ್ಮಿಕ ಸುಧಾರಣೆ, ಬಂಡವಾಳ ಮಾರುಕಟ್ಟೆ ಸುಧಾರಣೆ, ಲಾಜಿಸ್ಟಿಕ್ಸ್ ವಲಯದಲ್ಲಿ ಸುಧಾರಣೆಗಳು ಆಗಬೇಕು. ಬ್ಯಾಂಕಿಂಗ್ ವಲಯದಲ್ಲೂ ಸುಧಾರಣೆಗಳನ್ನು ತರಬೇಕಾಗುತ್ತದೆ ಎಂದು ಆರ್ಥಿಕ ತಜ್ಞರೂ ಆದ ಕೆವಿ ಸುಬ್ರಮಣಿಯನ್ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?