AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊನಾಟ ಫೈನಾನ್ಸ್ ಅನ್ನು 537 ಕೋಟಿ ರೂಗೆ ಖರೀದಿಸಿದ ಕೋಟಕ್ ಮಹೀಂದ್ರ ಬ್ಯಾಂಕ್

Kotak Mahindra Bank Acquires Sonata Finance Pvt Ltd: ನಾನ್ ಬ್ಯಾಂಕಿಂಗ್ ಫೈನಾನ್ಸ್ ಸಂಸ್ಥೆಯಾದ ಸೊನಾಟ ಫೈನಾನ್ಸ್ ಅನ್ನು ಕೋಟಕ್ ಬ್ಯಾಂಕ್ 537 ಕೋಟಿ ರೂಗೆ ಪೂರ್ಣವಾಗಿ ಖರೀದಿ ಮಾಡಿದೆ. 10 ರಾಜ್ಯಗಳಲ್ಲಿ 549 ಶಾಖೆಗಳನ್ನು ಹೊಂದಿರುವ ಸೊನಾಟ ಫೈನಾನ್ಸ್ ಸಂಸ್ಥೆಯ ಖರೀದಿಯು ಕೋಟಕ್ ಮಹೀಂದ್ರ ಬ್ಯಾಂಕ್​ಗೆ ಉತ್ತರ ಭಾರತದ ಭಾಗದಲ್ಲಿ ಗಟ್ಟಿಯಾಗಲು ಸಹಾಯವಾಗುವ ನಿರೀಕ್ಷೆ ಇದೆ. ಈ ಖರೀದಿ ಬಳಿಕ ಕೋಟಕ್ ಬ್ಯಾಂಕ್​ನ ಷೇರು ಬೆಲೆ ಏರತೊಡಗಿದೆ.

ಸೊನಾಟ ಫೈನಾನ್ಸ್ ಅನ್ನು 537 ಕೋಟಿ ರೂಗೆ ಖರೀದಿಸಿದ ಕೋಟಕ್ ಮಹೀಂದ್ರ ಬ್ಯಾಂಕ್
ಕೋಟಕ್ ಮಹೀಂದ್ರ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 28, 2024 | 2:32 PM

Share

ನವದೆಹಲಿ, ಮಾರ್ಚ್ 28: ಎನ್​ಬಿಎಫ್​ಸಿ ಸಂಸ್ಥೆಯಾದ ಸೊನಾಟ ಫೈನಾನ್ಸ್ ಪ್ರೈ ಲಿ (Sonata Finance Pvt Ltd) ಅನ್ನು ಖರೀದಿಸಿರುವುದಾಗಿ ಕೋಟಕ್ ಮಹೀಂದ್ರ ಬ್ಯಾಂಕ್ ಹೇಳಿದೆ. 537 ಕೋಟಿ ರೂಗೆ ಈ ಖರೀದಿ ಆಗಿರುವುದು ತಿಳಿದುಬಂದಿದೆ. ಕೋಟಕ್ ಮಹೀಂದ್ರ ಬ್ಯಾಂಕ್ (Kotak Mahindra Bank) ತನ್ನ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಈ ಬೆಳವಣಿಗೆಯ ಮಾಹಿತಿ ನೀಡಿದೆ. ಇದರೊಂದಿಗೆ ಸೊನಾಟ ಫೈನಾನ್ಸ್ ಪ್ರೈ ಲಿ ಸಂಸ್ಥೆ ಕೋಟಕ್ ಬ್ಯಾಂಕ್​ನ ಅಂಗ ಸಂಸ್ಥೆಯಾಗಿದೆ. ಈ ಖರೀದಿಯು ಷೇರು ಮಾರುಕಟ್ಟೆಯಲ್ಲಿ ಕೋಟಕ್ ಮಹೀಂದ್ರಗೆ ಪುಷ್ಟಿ ಕೊಟ್ಟಿದೆ. ಹೆಚ್ಚೂಕಡಿಮೆ ಒಂದೂವರೆ ಪ್ರತಿಶತದಷ್ಟು ಷೇರುಬೆಲೆ ಏರಿದೆ. ಕೋಟಕ್ ಬ್ಯಾಂಕ್ ಷೇರುಬೆಲೆ ಇಂದು 1,800 ರೂ ಗಡಿ ದಾಟಿದೆ.

ಆರ್​ಬಿಐನಲ್ಲಿ ನೊಂದಾಯಿತವಾಗಿರುವ ಬ್ಯಾಂಕೇತರ ಹಣಕಾಸು ಸಂಸ್ಥೆ ಎನಿಸಿದ ಸೊನಾಟ ಫೈನಾನ್ಸ್ ಲಿ ಸಂಸ್ಥೆ ನಿರ್ವಹಿಸುತ್ತಿರುವ ಹೂಡಿಕೆ ಮೊತ್ತ 2,620 ಕೋಟಿ ರೂ. ಇದು 10 ರಾಜ್ಯಗಳಲ್ಲಿ 549 ಶಾಖೆಗಳನ್ನು ಹೊಂದಿದೆ.

ಇದನ್ನೂ ಓದಿ: ಏಪ್ರಿಲ್ ತಿಂಗಳಲ್ಲಿ ಯುಗಾದಿ, ಈದ್ ಸೇರಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ

ಕೋಟಕ್ ಮಹೀಂದ್ರ ಬ್ಯಾಂಕ್ ಈ ಹಿಂದೆ ಕೆಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ. ಬಿಎಸ್​ಎಸ್ ಮೈಕ್ರೋಫೈನಾನ್ಸ್ ಸಂಸ್ಥೆಯನ್ನು 2016ರ ಸೆಪ್ಟಂಬರ್​ನಲ್ಲಿ 139 ಕೋಟಿ ರೂಗೆ ಖರೀದಿ ಮಾಡಿತ್ತು. ಅದು ದಕ್ಷಿಣ ಭಾರತದಲ್ಲಿ ಬೇರು ಆಳಕ್ಕಿಳಿಯಲು ಕೋಟಕ್​ಗೆ ತುಸು ಅನುಕೂಲವಾಗಿತ್ತು. ಈಗ ಸೊನಾಟ ಫೈನಾನ್ಸ್ ಸಂಸ್ಥೆಯನ್ನು ಖರೀದಿಸಿರುವುದು ಕೋಟಕ್​ಗೆ ಹಲವು ಲಾಭ ತಂದುಕೊಡುವ ನಿರೀಕ್ಷೆ ಇದೆ. ಉತ್ತರದ ಭಾಗಗಳಲ್ಲಿ ಸೊನಾಟ ಉಪಸ್ಥಿತಿ ಇದೆ. ಇಲ್ಲಿ ಕೋಟಕ್ ವ್ಯಾಪ್ತಿ ಇನ್ನಷ್ಟು ಗಾಢವಾಗಲಿದೆ.

ಕೋಟಕ್ ಮಹೀಂದ್ರ ಬ್ಯಾಂಕ್ ಸೊನಾಟವನ್ನು ಖರೀದಿಸಲು ಕಳೆದ ವರ್ಷ ಆರ್​ಬಿಐ ಅನುಮತಿ ನೀಡಿತ್ತು. ದಿನೇ ದಿನೇ ಕೋಟಕ್ ಬ್ಯಾಂಕ್ ಪ್ರಬಲಗೊಳ್ಳುತ್ತಲೇ ಇದೆ. 2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಬರೋಬ್ಬರಿ 4,264.78 ಕೋಟಿ ರೂಗಳ ನಿವ್ವಳ ಲಾಭ ತೋರಿದೆ. ಅದರ ಒಟ್ಟು ಆದಾಯ 24 ಸಾವಿರ ಕೋಟಿ ರೂ ಗಡಿ ದಾಟಿದೆ.

ಇದನ್ನೂ ಓದಿ: ಜಾನ್ ಅಬ್ರಹಾಂ, ಗೌರಿ ಖಾನ್, ನಿಖಿಲ್ ಕಾಮತ್ ಮೊದಲಾದವರಿಂದ ಫಂಡಿಂಗ್ ಪಡೆದ ಸಬ್ಕೋ ಕಾಫಿ; ಏನದರ ವೈಶಿಷ್ಟ್ಯ

ಷೇರು ಮಾರುಕಟ್ಟೆಯಲ್ಲೂ ಕೋಟಕ್ ಬ್ಯಾಂಕ್ ದೀರ್ಘಾವಧಿಯಲ್ಲಿ ಮಲ್ಟಿಬ್ಯಾಗರ್ ಎನಿಸಿದೆ. 2001ರಲ್ಲಿ ಎರಡು ರೂ ಆಸುಪಾಸು ಇದ್ದ ಅದರ ಷೇರುಬೆಲೆ 2,064 ರೂವರೆಗೂ ಏರಿದೆ. 23 ವರ್ಷದಲ್ಲಿ ಶೇ. 75,000 ದಷ್ಟು ಮೌಲ್ಯ ಹೆಚ್ಚಳ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ