ಏಪ್ರಿಲ್ ತಿಂಗಳಲ್ಲಿ ಯುಗಾದಿ, ಈದ್ ಸೇರಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ

Bank Holidays 2024 April Month: ಏಪ್ರಿಲ್ ತಿಂಗಳಲ್ಲಿ ಒಟ್ಟು 14 ದಿನಗಳ ಕಾಲ ಬ್ಯಾಂಕುಗಳು ಬಾಗಿಲು ಬಂದ್ ಆಗಿರುತ್ತವೆ. ಈ ತಿಂಗಳಲ್ಲಿ ಯುಗಾದಿ, ಈದ್ ಹಬ್ಬಗಳು ಇವೆ. ರಾಮನವಮಿ ಹಬ್ಬವೂ ಇದೆ. ನಾಲ್ಕು ಭಾನುವಾರ, ಎರಡು ಶನಿವಾರದ ರಜೆಗಳು ಇದರಲ್ಲಿ ಒಳಗೊಂಡಿವೆ. ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಲ್ಲಿ ಒಟ್ಟು 9 ರಜಾ ದಿನಗಳಿವೆ. ಬ್ಯಾಂಕುಗಳು ರಜೆ ಇದ್ದರೂ ಬಹುತೇಕ ಬ್ಯಾಂಕಿಂಗ್ ಸೇವೆ ವರ್ಷದ 365 ದಿನವೂ ಆನ್​ಲೈನ್​ನಲ್ಲಿ ಲಭ್ಯ ಇರುತ್ತವೆ. ಹೀಗಾಗಿ ಹೆಚ್ಚಿನ ಬ್ಯಾಂಕ್ ಬಳಕೆದಾರರಿಗೆ ರಜೆಗಳಿಂದ ಬಾಧೆ ಇರುವುದಿಲ್ಲ.

ಏಪ್ರಿಲ್ ತಿಂಗಳಲ್ಲಿ ಯುಗಾದಿ, ಈದ್ ಸೇರಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ
ಬ್ಯಾಂಕ್ ರಜಾ ದಿನಗಳು
Follow us
|

Updated on: Mar 28, 2024 | 12:24 PM

2024ರ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಒಟ್ಟಾರೆ 14 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಆರ್​ಬಿಐ ರಜೆಯ ಕ್ಯಾಲಂಡರ್​ನಲ್ಲಿ (RBI holiday calender) ಶನಿವಾರ, ಭಾನುವಾರದ್ದೂ ಸೇರಿ ಒಟ್ಟು 14 ರಜಾದಿನಗಳಿವೆ. ಪ್ರದೇಶವಾರು ರಜೆಗಳಲ್ಲಿ ವ್ಯತ್ಯಾಸ ಇರುತ್ತದೆ. ಪ್ರಾದೇಶಿಕ ರಜೆಗಳೂ ಇರುವುದರಿಂದ ಕೆಲ ಪ್ರದೇಶಗಳಲ್ಲಿ ಹೆಚ್ಚಿನ ರಜೆ ಇರಬಹುದು, ಕೆಲವೆಡೆ ಕಡಿಮೆ ರಜೆ ಇರುತ್ತವೆ. ಈ ಏಪ್ರಿಲ್​ನಲ್ಲಿ ಯುಗಾದಿ, ಈದ್, ರಾಮನವಮಿ ಹಬ್ಬಗಳಿವೆ. ಇಂಥ ಹಬ್ಬ ಮತ್ತು ವಿಶೇಷ ದಿನಗಳ ಪ್ರಯುಕ್ತ ಒಂದು ತಿಂಗಳಲ್ಲಿ 9 ರಜೆಗಳಿವೆ. ಉಳಿದವು ಭಾನುವಾರ ಮತ್ತು ಶನಿವಾರದ ರಜೆಗಳು ಸೇರಿವೆ.

ಆರ್​ಬಿಐ ಕ್ಯಾಲಂಡರ್ ಪ್ರಕಾರ 2024ರ ಏಪ್ರಿಲ್​ನಲ್ಲಿ ಇರುವ ರಜೆಗಳು

  • ಏಪ್ರಿಲ್ 1: ವಾರ್ಷಿಕ ಲೆಕ್ಕಗಳನ್ನು ಮುಗಿಸಲು ಬ್ಯಾಂಕುಗಳು ಮುಚ್ಚಿರುತ್ತವೆ.
  • ಏಪ್ರಿಲ್ 5, ಶುಕ್ರವಾರ: ಬಾಬು ಜಗಜೀವನರಾಮ್ ಜಯಂತಿ, ಜುಮಾತ್ ಉಲ್ ವಿದಾ (ತೆಲಂಗಾಣ, ಕಾಶ್ಮೀರದಲ್ಲಿ ರಜೆ)
  • ಏಪ್ರಿಲ್ 7: ಭಾನುವಾರ
  • ಏಪ್ರಿಲ್ 9, ಮಂಗಳವಾರ: ಯುಗಾದಿ, ಗುದಿ ಪಡ್ವಾ, ಸಜಿಬು ನೊಂಗ್ಮಪನ್ಬ, ಮೊದಲ ನವರಾತ್ರಿ (ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಮಣಿಪುರ್, ಗೋವಾ, ಕಾಶ್ಮೀರದಲ್ಲಿ ರಜೆ).
  • ಏಪ್ರಿಲ್ 10, ಬುಧವಾರ: ಈದ್ ಉಲ್ ಫಿತರ್ (ಕೇರಳದಲ್ಲಿ ರಜೆ)
  • ಏಪ್ರಿಲ್ 11, ಗುರುವಾರ: ಈದ್ ಉಲ್ ಫಿತರ್ (ಚಂಡೀಗಡ್, ಸಿಕ್ಕಿಂ, ಹಿಮಾಚಲಪ್ರದೇಶ, ಕೇರಳ ಹೊರತುಪಡಿಸಿ ಉಳಿದೆಡೆ ರಜೆ)
  • ಏಪ್ರಿಲ್ 13, ಎರಡನೇ ಶನಿವಾರ
  • ಏಪ್ರಿಲ್ 14: ಭಾನುವಾರ
  • ಏಪ್ರಿಲ್ 15, ಸೋಮವಾರ: ಬೋಹಾಗ್ ಬಿಹು, ಹಿಮಾಚಲ ದಿನ (ಅಸ್ಸಾಂ ಮತ್ತು ಹಿಮಾಚಲಪ್ರದೇಶದಲ್ಲಿ ರಜೆ)
  • ಏಪ್ರಿಲ್ 16, ಮಂಗಳವಾರ: ಶ್ರೀರಾಮನವಮಿ (ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಚಂಡೀಗಡ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಉತ್ತರಪ್ರದೇಶ, ಬಿಹಾರ, ಝಾರ್ಖಂಡ್, ಹಿಮಾಚಲಪ್ರದೇಶದಲ್ಲಿ ರಜೆ)
  • ಏಪ್ರಿಲ್ 20, ಶನಿವಾರ: ಗರಿಯ ಪೂಜೆ (ತ್ರಿಪುರಾದಲ್ಲಿ ರಜೆ)
  • ಏಪ್ರಿಲ್ 21: ಭಾನುವಾರ
  • ಏಪ್ರಿಲ್ 27: ನಾಲ್ಕನೇ ಶನಿವಾರ
  • ಏಪ್ರಿಲ್ 28: ಭಾನುವಾರ

ಎಪ್ರಿಲ್ 1ರಂದು ವಾರ್ಷಿಕ ಲೆಕ್ಕ ಸಮಾಪ್ತಿಗೆಂದು ಬ್ಯಾಂಕ್ ಬಾಗಿಲು ಮುಚ್ಚಿದ್ದರೂ, ಸಿಬ್ಬಂದಿ ಕೆಲಸ ಮಾಡುತ್ತಿರುತ್ತಾರೆ. ಸಾರ್ವಜನಿಕರಿಗೆ ಸೇವೆ ಇರುವುದಿಲ್ಲ. ಏಪ್ರಿಲ್ 5ರಿಂದ 16ರವರೆಗೆ 9 ರಜೆಗಳಿವೆ.

ಇದನ್ನೂ ಓದಿ: ಜಾನ್ ಅಬ್ರಹಾಂ, ಗೌರಿ ಖಾನ್, ನಿಖಿಲ್ ಕಾಮತ್ ಮೊದಲಾದವರಿಂದ ಫಂಡಿಂಗ್ ಪಡೆದ ಸಬ್ಕೋ ಕಾಫಿ; ಏನದರ ವೈಶಿಷ್ಟ್ಯ

ಕರ್ನಾಟಕದಲ್ಲಿ ಏಪ್ರಿಲ್​ನಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳು

ಕರ್ನಾಟಕದಲ್ಲಿ ಎಪ್ರಿಲ್ ತಿಂಗಳಲ್ಲಿ ಒಟ್ಟು 9 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಇದರಲ್ಲಿ ಎಪ್ರಿಲ್ 9ರಂದು ಯುಗಾದಿ ಹಬ್ಬ, ಏಪ್ರಿಲ್ 11ರಂದು ಈದ್ ಹಬ್ಬಕ್ಕೆ ರಜೆ ಇದೆ. ಉಳಿದವು ಶನಿವಾರ ಮತ್ತು ಭಾನುವಾರದ ರಜೆಗಳಾಗಿವೆ.

  • ಏಪ್ರಿಲ್ 1, ಸೋಮವಾರ
  • ಏಪ್ರಿಲ್ 7: ಭಾನುವಾರ
  • ಏಪ್ರಿಲ್ 9, ಮಂಗಳವಾರ (ಯುಗಾದಿ ಹಬ್ಬ).
  • ಏಪ್ರಿಲ್ 11, ಗುರುವಾರ: ಈದ್ ಉಲ್ ಫಿತರ್
  • ಏಪ್ರಿಲ್ 13, ಎರಡನೇ ಶನಿವಾರ
  • ಏಪ್ರಿಲ್ 14: ಭಾನುವಾರ
  • ಏಪ್ರಿಲ್ 21: ಭಾನುವಾರ
  • ಏಪ್ರಿಲ್ 27: ನಾಲ್ಕನೇ ಶನಿವಾರ
  • ಏಪ್ರಿಲ್ 28: ಭಾನುವಾರ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ