ಏಪ್ರಿಲ್ 1ರಿಂದ ಆದಾಯ ತೆರಿಗೆ ಹಾಗೂ ಹಣಕಾಸು ನಿಯಮಗಳಲ್ಲಿ ಈ ಪ್ರಮುಖ ಬದಲಾವಣೆಗಳಿವೆ, ಗಮನಿಸಿ
Financial Rules Change from 2024 April 1st: 2024-25ರ ಹಣಕಾಸು ವರ್ಷ ಏಪ್ರಿಲ್ 1ರಿಂದ ಚಾಲನೆಗೆ ಬರಲಿದೆ. ಅಂತೆಯೇ ಕೆಲ ಹೊಸ ಹಣಕಾಸು ನಿಯಮಗಳೂ ಬರಲಿವೆ. ಇಪಿಎಫ್ ಸದಸ್ಯರು ಕೆಲಸ ಬದಲಾಯಿಸಿದಾಗ ಅವರ ಪಿಎಫ್ ಹಣವೂ ಹೊಸ ಕಂಪನಿಯ ಖಾತೆಗೆ ವರ್ಗಾವಣೆ ಆಗುತ್ತದೆ. ನ್ಯಾಷನಲ್ ಪೆನ್ಷನ್ ಸ್ಕೀಮ್ನ ಖಾತೆಗೆ ಯೂಸರ್ ಐಡಿ ಪಾಸ್ವರ್ಡ್ ಜೊತೆಗೆ ಆಧಾರ್ ಅಥೆಂಟಿಕೇಶನ್ ಕೂಡ ಪಡೆದು ಲಾಗಿನ್ ಆಗಬೇಕಾಗುತ್ತದೆ. ಐಟಿ ರಿಟರ್ನ್ ಫೈಲ್ ಮಾಡುವಾಗ ಹೊಸ ಟ್ಯಾಕ್ಸ್ ರೆಜಿಮೆ ಡೀಫಾಲ್ಟ್ ಆಗಿರುತ್ತದೆ.
2023-24ರ ಹಣಕಾಸು ವರ್ಷ ಮುಗಿಯುತ್ತಿದೆ. 2024-25ರ ಹೊಸ ಹಣಕಾಸು ವರ್ಷ (financial year 2024) ಎಪ್ರಿಲ್ 1ರಂದು ಆರಂಭವಾಗುತ್ತದೆ. ಹೊಸ ಹಣಕಾಸು ವರ್ಷವೆಂದರೆ ಸಾಕಷ್ಟು ಹೊಸ ನಿಯಮಗಳೂ (financial rules) ಇರಲಿದೆ. ಕೆಲ ಹಣಕಾಸು ನಿಯಮ ಬದಲಾವಣೆಗಳನ್ನು ನಿರ್ಲಕ್ಷಿಸಲು ಆಗುವುದಿಲ್ಲ. ಆದಾಯ ತೆರಿಗೆ ನಿಯಮಗಳಿಂದ ಹಿಡಿದು ಫಾಸ್ಟ್ಯಾಗ್ವರೆಗೆ ಪ್ರಮುಖ ನಿಯಮ ಬದಲಾವಣೆಗಳ ಸಂಕ್ಷಿಪ್ತ ವಿವರ ಈ ಲೇಖನದಲ್ಲಿದೆ.
ಎನ್ಪಿಎಸ್ ನಿಯಮದಲ್ಲಿ ಬದಲಾವಣೆ
ಎನ್ಪಿಎಸ್ ಖಾತೆಗಳಿಗೆ ಲಾಗಿನ್ ಆಗಲು ಎರಡು ಎಳೆಯ ಭದ್ರತಾ ವ್ಯವಸ್ಥೆ ಇದೆ. ಇಲ್ಲಿಯವರೆಗೂ ನ್ಯಾಷನಲ್ ಪೆನ್ಷನ್ ಸಿಸ್ಟಂ ಅಕೌಂಟ್ಗೆ ಲಾಗಿನ್ ಆಗಲು ಯೂಸರ್ ಐಡಿ ಮತ್ತು ಪಾಸ್ವರ್ಡ್ ಬೇಕಿತ್ತು. ಈಗ ಆಧಾರ್ ದೃಢೀಕರಣವನ್ನೂ ಪಡೆಯಬೇಕಾಗುತ್ತದೆ.
ಇದನ್ನೂ ಓದಿ: ಎನ್ಪಿಎಸ್ ಖಾತೆಗೆ ಲಾಗಿನ್ ಆಗಲು ಡಬಲ್ ಸೆಕ್ಯೂರಿಟಿ; ನ್ಯಾಷನಲ್ ಪೆನ್ಷನ್ ಸ್ಕೀಮ್ ಯಾರು ತೆರೆಯಬಹುದು, ಏನಿದರ ಲಾಭ
ಇಪಿಎಫ್ಒ ಹೊಸ ನಿಯಮ
ಇಪಿಎಫ್ ಸದಸ್ಯರು ತಮ್ಮ ಕೆಲಸ ಬದಲಾವಣೆ ಮಾಡಿದಾಗ ಅವರ ಖಾತೆಯಲ್ಲಿರುವ ಹಣ ಹೊಸ ಸಂಸ್ಥೆಯ ಪಿಎಫ್ ಖಾತೆಗೆ ಸ್ವಯಂ ಆಗಿ ವರ್ಗಾವಣೆ ಆಗುತ್ತದೆ. ಇದರಿಂದ ಉದ್ಯೋಗಿಗಳ ಒಂದು ತಲೆನೋವು ಕಡಿಮೆ ಆಗುತ್ತದೆ. ಈಗಿರುವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಿಎಫ್ ಖಾತೆಗಳಿದ್ದರೆ ಅದನ್ನು ವಿಲೀನಗೊಳಿಸಲು ಇಪಿಎಫ್ ಸಬ್ಸ್ಕ್ರೈಬರ್ಗಳು ಮನವಿ ಸಲ್ಲಿಸಬೇಕಾಗಿದೆ.
ಫಾಸ್ಟ್ಯಾಗ್ ನಿಯಮ
ಫಾಸ್ಟ್ಯಾಗ್ ಇದ್ದಲ್ಲಿ ಅದರ ಕೆವೈಸಿಯನ್ನು ನೀವು ಅಪ್ಡೇಟ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬ್ಯಾಂಕುಗಳು ನಿಮ್ಮ ಫಾಸ್ಟ್ಯಾಗ್ ಅನ್ನು ಡೀ ಆ್ಯಕ್ಟಿವೇಟ್ ಮಾಡುವ ಸಾಧ್ಯತೆ ಇದೆ. ಕೆವೈಸಿ ಅಪ್ಡೇಟ್ ಆಗದ ಫಾಸ್ಟ್ಯಾಗ್ನ ಖಾತೆಯಲ್ಲಿ ಹಣ ಇದ್ದರೂ ಅದು ಕೆಲಸ ಮಾಡುವುದಿಲ್ಲ. ಆದ್ದರಿಂದ ಕೆವೈಸಿ ಅಪ್ಡೇಟ್ ಮಾಡಿರದಿದ್ದರೆ ಮಾರ್ಚ್ 31ರೊಳಗೆ ಅದನ್ನು ಮಾಡಿರಿ.
ಇದನ್ನೂ ಓದಿ: ಬೇರೆಯವರ ಸಾಲಕ್ಕೆ ಶೂರಿಟಿ ಹಾಕಿದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುತ್ತಾ? ಇಲ್ಲಿದೆ ರಿಯಾಲಿಟಿ
ಹೊಸ ಇನ್ಕಮ್ ಟ್ಯಾಕ್ಸ್ ಪದ್ಧತಿ ಡೀಫಾಲ್ಟ್?
2023-24ರ ಹಣಕಾಸು ವರ್ಷದಿಂದ ಸರ್ಕಾರ ಹಳೆಯ ತೆರಿಗೆ ಪದ್ಧತಿ ಜೊತೆಗೆ ಹೊಸ ಆದಾಯ ತೆರಿಗೆ ಪದ್ಧತಿಯನ್ನೂ ಸೇರಿಸಿದೆ. ಹೊಸ ಟ್ಯಾಕ್ಸ್ ರೆಜಿಮೆ ಡೀಫಾಲ್ಟ್ ಆಗಿರಲಿದೆ. ನೀವು ಈಗಾಗಲೇ ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿಯೇ ಇದ್ದರೆ ಹೊಸ ಹಣಕಾಸು ವರ್ಷಕ್ಕೂ ಅದರಲ್ಲೇ ಮುಂದುವರಿಸಬಹುದು. ಒಂದು ವೇಳೆ ನೀವು ಓಲ್ಡ್ ಟ್ಯಾಕ್ಸ್ ರೆಜಿಮೆ ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಹೊಸ ತೆರಿಗೆ ಪದ್ಧತಿಯೇ ಡೀಫಾಲ್ಟ್ ಆಗಿರುತ್ತದೆ. ಒಮ್ಮೆ ನೀವು ಹೊಸ ತೆರಿಗೆ ಪದ್ಧತಿಯಲ್ಲಿ ರಿಟರ್ನ್ ಫೈಲ್ ಮಾಡಿದರೆ ಅದರಲ್ಲೇ ಮುಂದುವರಿಯಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ