ಟೋಲ್ ಬೂತ್ ರಗಳೆ ಇಲ್ಲ; ಶೀಘ್ರದಲ್ಲೇ ಬರಲಿದೆ ಸೆಟಿಲೈಟ್ ಸಿಸ್ಟಂ: ನಿತಿನ್ ಗಡ್ಕರಿ

Nitin Gadkari on Tolls in Highways: ಸದ್ಯದಲ್ಲೇ ದೇಶಾದ್ಯಂತ ಟೋಲ್ ವ್ಯವಸ್ಥೆ ಇರುವುದಿಲ್ಲ. ಅಂದರೆ ಟೋಲ್ ಬೂತ್​ನಲ್ಲಿ ವಾಹನ ನಿಲ್ಲಿಸುವ ಅಥವಾ ನಿಧಾನಗೊಳಿಸುವ ಅವಶ್ಯಕತೆ ಇರುವುದಿಲ್ಲ. ಸೆಟಿಲೈಟ್ ಟೋಲ್ ಕಲೆಕ್ಷನ್ ಸಿಸ್ಟಂ ಅಳವಡಿಕೆ ಆಗುತ್ತಿದ್ದು, ಹೆದ್ದಾರಿಯಲ್ಲಿ ವಾಹನ ಸಂಚರಿಸುತ್ತಿರುವಂತೆಯೇ ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳುತ್ತದೆ. ಈ ವಿಚಾರವನ್ನು ನಿತಿನ್ ಗಡ್ಕರಿ ಹೇಳಿದ್ದಾರೆ. ಇದೇ ವೇಳೆ ದುಬಾರಿ ಟೋಲ್ ದರವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಟೋಲ್ ಬೂತ್ ರಗಳೆ ಇಲ್ಲ; ಶೀಘ್ರದಲ್ಲೇ ಬರಲಿದೆ ಸೆಟಿಲೈಟ್ ಸಿಸ್ಟಂ: ನಿತಿನ್ ಗಡ್ಕರಿ
ಟೋಲ್ ಬೂತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 28, 2024 | 10:52 AM

ನಾಗಪುರ್, ಮಾರ್ಚ್ 28: ಟೋಲ್ ಬೂತ್ ವ್ಯವಸ್ಥೆಯನ್ನು (toll booth system) ಸದ್ಯದಲ್ಲೇ ಅಂತ್ಯಗೊಳಿಸಿ ಹೊಸ ಸೆಟಿಲೈಟ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು (satellite toll collection system) ಜಾರಿಗೆ ತರಲಿದ್ದೇವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಇದರೊಂದಿಗೆ ಫಾಸ್​ಟ್ಯಾಗ್ ಇದ್ದರೂ ಟೋಲ್ ಬೂತ್ ಮೂಲಕ ಸಾಗಲು ವಿಳಂಬ ಆಗುತ್ತಿರುವ ಸಮಸ್ಯೆಗೆ ಮುಕ್ತಿ ಸಿಗಲಿದೆ. ಹೆದ್ದಾರಿ ಬಳಕೆದಾರರಿಗೆ ಇದರಿಂದ ಸಾಕಷ್ಟು ಸಮಯ ಉಳಿತಾಯವಾಗಲಿದೆ.

‘ಈಗ ಟೋಲ್ ಅಂತ್ಯಗೊಳಿಸುತ್ತಿದ್ದೇವೆ. ಸೆಟಿಲೈಟ್ ಟೋಲ್ ಕಲೆಕ್ಷನ್ ಸಿಸ್ಟಂ ಬರಲಿದೆ. ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ನೀವು ರಸ್ತೆಯಲ್ಲಿ ಎಷ್ಟು ಸಮಯ ವಾಹನ ಚಲಾಯಿಸುತ್ತೀರೋ ಅಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ,’ ಎಂದು ನಿತಿನ್ ಗಡ್ಕರಿ ಹೇಳಿದರೆಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನಿತಿನ್ ಗಡ್ಕರಿ ಹೇಳಿಕೆ

ಸದ್ಯ ಟೋಲ್ ತೆರಿಗೆ ತೀರಾ ಹೆಚ್ಚಾಗಿದೆ ಎಂದು ಬರುತ್ತಿರುವ ಆಕ್ಷೇಪಗಳಿಗೆ ಸಚಿವರು ಇದೇ ವೇಳೆ ಪ್ರತಿಕ್ರಿಯಿಸಿದ್ದು, ಟೋಲ್ ದರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಟೋಲ್ ದರ ಹೆಚ್ಚಾದರೂ ಇದರಿಂದ ವಾಹನ ಸವಾರರಿಗೆ ಸಮಯ ಮತ್ತು ಇಂಧನ ಎರಡೂ ಉಳಿತಾಯ ಆಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಚೀನಾ ಪರ್ವ ಮುಗಿಯಿತು; ಭಾರತವೊಂದೇ ಪ್ರಮುಖ ಆರ್ಥಿಕತೆಯಾಗಲಿದೆ: ಅರವಿಂದ್ ಪನಗರಿಯಾ ಕೊಟ್ಟ ಕಾರಣಗಳಿವು

‘ಈ ಮುಂಚೆ ಮುಂಬೈನಿಂದ ಪುಣೆಗೆ ರಸ್ತೆ ಮೂಲಕ ಹೋಗಲು ಒಂಬತ್ತು ಗಂಟೆ ಬೇಕಾಗುತ್ತಿತ್ತು. ಈಗ ಇದು ಎರಡು ಗಂಟೆಯ ಪ್ರಯಾಣ ಮಾತ್ರವೇ ಆಗಿದೆ. ಏಳು ಗಂಟೆಗಳ ಡೀಸಲ್ ಖರ್ಚು ಉಳಿದಿದೆ. ಸ್ವಾಭಾವಿಕವಾಗಿ ನಾವು ಇದಕ್ಕೆ ಬೆಲೆ ಕೊಡಲೇ ಬೇಕಲ್ಲವಾ. ನಾವಿದನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಹೂಡಿಕೆಯ ಮೂಲಕ ಮಾಡುತ್ತಿದ್ದೇವೆ. ಇದಕ್ಕೆ ಹಣ ತೆರಬೇಕಾಗುತ್ತದೆ,’ ಎಂದಿದ್ದಾರೆ ಕೇಂದ್ರ ಸಾರಿಗೆ ಸಚಿವರು.

ಅಮೆರಿಕದ ಮಟ್ಟಕ್ಕೆ ಭಾರತದಲ್ಲಿ ಹೆದ್ದಾರಿ ಅಭಿವೃದ್ಧಿಗೊಳಿಸುವ ಸಂಕಲ್ಪ

‘ದೇಶದ ಹಣೆಬರಹ 2024ರ ಅಂತ್ಯದಲ್ಲಿ ಬದಲಾಗುತ್ತದೆ. ಅಮೆರಿಕದಲ್ಲಿರುವ ಹೆದ್ದಾರಿಗಳಿಗೆ ಸರಿಸಮವಾಗಿ ನಮ್ಮ ರಾಷ್ಟ್ರೀಯ ಹೆದ್ದಾರಿ ಜಾಲ ಸಿದ್ಧವಾಗುತ್ತಿದೆ. ಇದು ನನ್ನ ಗುರಿ. ಇದರಲ್ಲಿ ನಾನು ಖಂಡಿತವಾಗಿ ಯಶಸ್ವಿಯಾಗುತ್ತೇನೆ’ ಎಂದು ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಯಶಸ್ವಿ ಉದ್ಯಮಿ ಬಾಬಾ ಕಲ್ಯಾಣಿ ಆಸ್ತಿ ಪಾಲಿಗೆ ಕಿತ್ತಾಟ; ಕೋರ್ಟ್ ಮೆಟ್ಟಿಲೇರಿದ ಕುಟುಂಬ ಸದಸ್ಯರು

ಭಾರತಮಾಲ ಪರಿಯೋಜನದಲ್ಲಿ 26,000 ಕಿಮೀ ಆರ್ಥಿಕ ಕಾರಿಡಾರ್​ಗಳನ್ನು ಅಭಿವೃದ್ಧಿಪಡಿಸುವ ಗುರಿ ಇದೆ. ಗೋಲ್ಡನ್ ಕ್ವಾಡ್ರಿಲಾಟರಲ್ ಮತ್ತು ನಾರ್ತ್ ಸೌತ್ ಈಸ್ಟ್ ವೆಸ್ಟ್ ಕಾರಿಡಾರ್ ಹಅಗೂ ಭಾರತಮಾಲ ಪರಿಯೋಜನ ಕಾರಿಡಾರ್​ಗಳು ಬಹಳ ಮಹತ್ವದಿದ್ದು, ಇವು 2024ರೊಳಗೆ ಭಾರತದ ಹೊಸ ಭವಿಷ್ಯಕ್ಕೆ ನಾಂದಿ ಹಾಡಬಲ್ಲುವು ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:48 am, Thu, 28 March 24

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ