ಸಾವರಿನ್ ಗೋಲ್ಡ್ ಬಾಂಡ್; ಇವತ್ತು ಒಂದು ಸರಣಿಯ ಮೆಚ್ಯೂರಿಟಿ, ವರ್ಷಾಂತ್ಯದಲ್ಲಿ ಇನ್ನೆರಡು ಟ್ರಾಂಚ್ ರಿಡಂಪ್ಷನ್ಗೆ ಲಭ್ಯ
Sovereign Gold Bond Scheme: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 2015-16ರ ಸರಣಿಯ ಒಂದು ಟ್ರಾಂಚ್ ಇಂದು ರಿಡಂಪ್ಷನ್ಗೆ ಲಭ್ಯ ಇದೆ. 2016ರ ಮಾರ್ಚ್ 29ರಂದು ಬಿಡುಗಡೆ ಆಗಿತ್ತು. ಎಂಟು ವರ್ಷದ ಈ ಬಾಂಡ್ 2024ರ ಮಾರ್ಚ್ 29ರಂದು ಮೆಚ್ಯೂರ್ ಆಗುತ್ತದಾದರೂ ನಾಳೆ ರಜೆ ಇರುವುದರಿಂದ ಇಂದೇ ಇದನ್ನು ರಿಡೀಮ್ ಮಾಡಿಕೊಳ್ಳಬಹುದು. 2016-17ರ ಸರಣಿಯ ಎರಡು ಸರಣಿಯ ಎಸ್ಬಿಜಿ ಇದೇ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಮೆಚ್ಯೂರ್ ಆಗಲಿದೆ.
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ (Sovereign Gold Bond Scheme) ದಿನೇ ದಿನೇ ಜನಪ್ರಿಯವಾಗುತ್ತಿದೆ. ರಿಸ್ಕ್ ರಹಿತವಾಗಿ, ಈಕ್ವಿಟಿ ಮಾರುಕಟ್ಟೆ ರೀತಿಯಲ್ಲಿ ಲಾಭ ತಂದುಕೊಡಬಲ್ಲ ಕಾರಣಕ್ಕೆ ಎಸ್ಜಿಬಿ ಸ್ಕೀಮ್ ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. 2015ರಲ್ಲಿ ಆರಂಭವಾದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ ಮೊದಲೆರಡು ಟ್ರಾಂಚ್ಗಳು ಕೆಲ ತಿಂಗಳ ಹಿಂದೆ ರಿಡಂಪ್ಷನ್ಗೆ ಬಂದಿದ್ದವು. 2016ರಲ್ಲಿ ನಾಲ್ಕು ಟ್ರಾಂಚ್ಗಳನ್ನು ಬಿಡುಗಡೆ ಮಾಡಲಾಗಿತ್ತು. ಫೆಬ್ರುವರಿಯಲ್ಲಿ ಈಗಾಗಲೇ ಒಂದು ಮೆಚ್ಯೂರ್ ಆಗಿದೆ. ಇವತ್ತು ಗುರುವಾರ (ಮಾ. 28) ಮತ್ತೊಂದು ಮೆಚ್ಯೂರ್ ಆಗುತ್ತಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಇನ್ನೆರಡು ಎಸ್ಬಿಜಿ ಟ್ರಾಂಚ್ಗಳು ರಿಡಂಪ್ಷನ್ಗೆ ಬರುತ್ತಿವೆ. ಎಂಟು ವರ್ಷದ ಈ ಸ್ಕೀಮ್ನಲ್ಲಿ ಚಿನ್ನದ ದರ ಬದಲಾವಣೆಗೆ ಅನುಗುಣವಾಗಿ ಹೂಡಿಕೆ ಬೆಳೆಯುತ್ತದೆ. ಮೊದಲೆರಡು ಟ್ರಾಂಚ್ಗಳು ಭರ್ಜರಿ ಲಾಭ ತಂದಿದ್ದವು. ಸರಾಸರಿಯಾಗಿ ವರ್ಷಕ್ಕೆ ಶೇ. 12ರಂತೆ ಬೆಳೆದಿದ್ದವು. ಈ ವರ್ಷದ ಉಳಿದ ಎಸ್ಜಿಬಿ ಟ್ರಾಂಚ್ಗಳು ಎಷ್ಟು ಬೆಳೆದಿರಬಹುದು?
2016ರ ಎಸ್ಜಿಬಿ ಸರಣಿ-1 ಫೆಬ್ರುವರಿ 8ರಂದು ಮೆಚ್ಯೂರ್ ಆಗಿತ್ತು. ಇದರ ಆರಂಭಿಕ ಬೆಲೆ ಒಂದು ಗ್ರಾಮ್ಗೆ 2,600 ರೂ ಇತ್ತು. ಎಂಟು ವರ್ಷದ ಮೆಚ್ಯೂರಿಟಿ ಬಳಿಕ ಅಂತಿಮ ಬೆಲೆ 6,271 ರೂ ಆಗಿತ್ತು. ಎಂಟು ವರ್ಷದಲ್ಲಿ ಎರಡಕ್ಕೂ ಹೆಚ್ಚು ಪಟ್ಟು ಲಾಭ ತಂದಿದೆ.
ಇನ್ನು, 2016ರ ಸೀರೀಸ್-2 ಆ ವರ್ಷ ಮಾರ್ಚ್ 29ರಂದು ಬಿಡುಗಡೆ ಆಗಿತ್ತು. ಈ ಮಾರ್ಚ್ 29ರಂದು ರಜೆ ಇರುವುದರಿಂದ ಇಂದೇ (ಮಾರ್ಚ್ 28) ಇದನ್ನು ರಿಡಂಪ್ಷನ್ ಪಡೆಯಬಹುದು. ಆಗ ಒಂದು ಗ್ರಾಮ್ಗೆ 2,600 ರೂ ಇತ್ತು. ಭಾರತೀಯ ಆಭರಣ ಸಂಸ್ಥೆಯ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ ಇವತ್ತು ಚಿನ್ನದ ಬೆಲೆ ಗ್ರಾಮ್ಗೆ 6,683 ರೂ ಇದೆ. ಮಾರ್ಚ್ 18ರಿಂದ 22ರ ವಾರದ ಸರಾಸರಿ ಪರಿಗಣಿಸಿದರೆ ಗ್ರಾಮ್ಗೆ 6,601 ರೂ ಆಗುತ್ತದೆ. ಇದೂ ಕೂಡ ಎರಡು ಪಟ್ಟಿಗೂ ಹೆಚ್ಚು ಲಾಭ ತಂದಿದೆ.
ಇದನ್ನೂ ಓದಿ: ಎಸ್ಬಿಎಂನಲ್ಲಿ ಕೇವಲ 2,000 ರೂಗೆ ಎಫ್ಡಿ ಇಡಿ; ಸ್ಟೆಪಪ್ ಕ್ರೆಡಿಟ್ ಕಾರ್ಡ್ ಪಡೆಯಿರಿ
2016-17ರ ಸರಣಿ 1 ಮತ್ತು ಸರಣಿ 2 ಈ ವರ್ಷದ ಕೊನೆಯಲ್ಲಿ ಮೆಚ್ಯೂರ್ ಆಗುತ್ತವೆ. ಸರಣಿ-1 2016ರ ಆಗಸ್ಟ್ 5ರಂದು ಬಿಡುಗಡೆ ಆಗಿತ್ತು. ಈ ವರ್ಷ ಆಗಸ್ಟ್ ಮೊದಲ ವಾರ ಇದು ಮೆಚ್ಯೂರ್ ಆಗುತ್ತದೆ. ಎರಡನೇ ಸರಣಿಯು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮೆಚ್ಯೂರ್ ಆಗುವ ನಿರೀಕ್ಷೆ ಇದೆ. ಮೊದಲ ಸರಣಿಯಲ್ಲಿ ಬೆಲೆ ಗ್ರಾಮ್ಗೆ 3,119 ರೂ ಇದ್ದರೆ, ಎರಡನೇ ಸರಣಿಯಲ್ಲಿ 3,150 ರೂ ಇತ್ತು. ಸೆಪ್ಟೆಂಬರ್ನಲ್ಲಿ ಚಿನ್ನದ ಬೆಲೆ ಸರಾಸರಿಯಾಗಿ ಗ್ರಾಮ್ಗೆ 7,000 ರೂ ದಾಟುವ ನಿರೀಕ್ಷೆ ಇದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ