ಭಾರತದ ಕರೆಂಟ್ ಅಕೌಂಟ್ ಡೆಫಿಸಿಟ್ ಈಗ 10.5 ಬಿಲಿಯನ್ ಡಾಲರ್; ಜಿಡಿಪಿಗೆ 1.2 ಪ್ರತಿಶತವಿರುವ ಸಿಎಡಿ

Current Account Deficit: ಭಾರತದ ಚಾಲ್ತಿ ಖಾತೆ ಕೊರತೆ 2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಕಡಿಮೆ ಆಗಿದೆ. 10.5 ಬಿಲಿಯನ್ ಡಾಲರ್​ನಷ್ಟು ಸಿಎಡಿ ಇದೆ. ಇದು ಜಿಡಿಪಿಯ ಶೇ. 1.2ರಷ್ಟಾಗುತ್ತದೆ. ಹಿಂದಿನ ವರ್ಷಕ್ಕೆ ಮತ್ತು ಹಿಂದಿನ ಕ್ವಾರ್ಟರ್​ಗೆ ಹೋಲಿಸಿದರೆ ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ತಗ್ಗಿದೆ. ಇದೇ ವೇಳೆ ಸರಕು ವ್ಯಾಪಾರ ಕೊರತೆ ಹೆಚ್ಚಾಗಿದೆ. ಸರ್ವಿಸ್ ಸೆಕ್ಟರ್​ನಲ್ಲಿ ರಫ್ತು ಹೆಚ್ಚಾದ ಹಿನ್ನೆಲೆಯಲ್ಲಿ ಒಟ್ಟಾರೆ ಸಿಎಡಿ ಕಡಿಮೆ ಆಗಲು ಸಹಾಯಕವಾಗಿದೆ.

ಭಾರತದ ಕರೆಂಟ್ ಅಕೌಂಟ್ ಡೆಫಿಸಿಟ್ ಈಗ 10.5 ಬಿಲಿಯನ್ ಡಾಲರ್; ಜಿಡಿಪಿಗೆ 1.2 ಪ್ರತಿಶತವಿರುವ ಸಿಎಡಿ
ವ್ಯಾಪಾರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 27, 2024 | 10:08 AM

ನವದೆಹಲಿ, ಮಾರ್ಚ್ 27: 2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ (Current Account Deficit) 10.5 ಬಿಲಿಯನ್ ಡಾಲರ್​ಗೆ ಇಳಿದಿದೆ. ಆರ್​ಬಿಐ ನಿನ್ನೆ ಮಂಗಳವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಈಗ ಚಾಲ್ತಿ ಖಾತೆ ಅಂತರವು ಜಿಡಿಪಿಗೆ ಶೇ. 1.2ರಷ್ಟಿದೆ. ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ 2023ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಸಿಎಡಿ 11.4 ಬಿಲಿಯನ್ ಡಾಲರ್ ಇತ್ತು. ಇನ್ನು, ವರ್ಷದ ಹಿಂದೆ ಇದೇ ಅವಧಿಯಲ್ಲಿ, ಅಂದರೆ 2022ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಸಿಎಡಿ 16.8 ಬಿಲಿಯನ್ ಡಾಲರ್ ಇತ್ತು.

ಸರಕು ವ್ಯಾಪಾರ ಕೊರತೆ ಹಿಂದಿನ ಕ್ವಾರ್ಟರ್​ಗಿಂತ ತುಸು ಹೆಚ್ಚಿದೆ. ವರದಿ ಪ್ರಕಾರ 2023ರ ಮೂರನೇ ಕ್ವಾರ್ಟರ್​ನಲ್ಲಿ ಮರ್ಚಂಡೈಸ್ ಟ್ರೇಡ್ ಡೆಫಿಸಿಟ್ 71.3 ಬಿಲಿಯನ್ ಡಾಲರ್ ಇತ್ತು. ಕೊನೆಯ ಕ್ವಾರ್ಟರ್​ನಲ್ಲಿ ಅದು 71.6 ಬಿಲಿಯನ್ ಡಾಲರ್​ಗೆ ಏರಿದೆ. ಆದರೆ, ಸರ್ವಿಸ್ ವಲಯದ ರಫ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5.2ರಷ್ಟು ಹೆಚ್ಚಾಗಿದೆ. ಸಾಫ್ಟ್​ವೇರ್, ಟ್ರಾವಲ್ ಸರ್ವಿಸ್​ನ ರಫ್ತು ಹೆಚ್ಚಾಗಿದೆ.

ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ವಿದೇಶೀ ಹೂಡಿಕೆ ಬಹಳಷ್ಟು ಕಡಿಮೆ ಆಗಿರುವುದು ಅಂಕಿ ಅಂಶದಿಂದ ತಿಳಿದುಬರುತ್ತದೆ. 2022ರ ಏಪ್ರಿಲ್​ನಿಂದ ಡಿಸೆಂಬರ್​ವರೆಗಿನ ಅವಧಿಯಲ್ಲಿ ನಿವ್ವಳ ಎಫ್​ಡಿಐ ಒಳಹರಿವು 21.6 ಬಿಲಿಯನ್ ಡಾಲರ್ ಇತ್ತು. ಅದೇ 2023ರಲ್ಲಿ ಇದೇ ಅವಧಿಯಲ್ಲಿ ಭಾರತಕ್ಕೆ ಬಂದ ನಿವ್ವಳ ಎಫ್​ಡಿಐ ಹೂಡಿಕೆ ಮೊತ್ತ ಕೇವಲ 8.5 ಬಿಲಿಯನ್ ಡಾಲರ್ ಮಾತ್ರ.

ಇದನ್ನೂ ಓದಿ: ಅಮೇಜಾನ್​ನಲ್ಲಿ ಮಾರಾಟ ವಂಚನೆ ತಡೆಯಲು 15,000 ಮಂದಿ ಪರಿಣಿತರ ನೇಮಕ; 10,000 ಕೋಟಿ ರೂ ವೆಚ್ಚ

2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ನಿವ್ವಳ ಎಫ್​ಡಿಐ ಹೂಡಿಕೆ 4.2 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 2 ಬಿಲಿಯನ್ ಡಾಲರ್ ಮಾತ್ರ ಇತ್ತು. ಇನ್ನು ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆ ವರ್ಷದ ಹಿಂದೆ 4.6 ಬಿಲಿಯನ್ ಡಾಲರ್ ಇದ್ದದ್ದು 2023ರಲ್ಲಿ 12 ಬಿಲಿಯನ್ ಡಾಲರ್ ಆಗಿದೆ.

ಕರೆಂಟ್ ಅಕೌಂಟ್ ಡೆಫಿಸಿಟ್ ಎಂದರೇನು?

ಚಾಲ್ತಿ ಖಾತೆ ಅಂತರ ಅಥವಾ ಕೊರತೆ ಎಂದರೆ ದೇಶದ ಒಟ್ಟಾರೆ ಆಮದು ಮತ್ತು ರಫ್ತು ಮಧ್ಯೆ ಇರುವ ಅಂತರವಾಗಿದೆ. ರಫ್ತಿಗಿಂತ ಆಮದು ಪ್ರಮಾಣ ಹೆಚ್ಚಾಗಿದ್ದರೆ ಆಗ ಅದು ಕರೆಂಟ್ ಅಕೌಂಟ್ ಡೆಫಿಸಿಟ್ ಎನಿಸುತ್ತದೆ. ಒಂದು ವೇಳೆ ಆಮದಿಗಿಂತ ರಫ್ತು ಹೆಚ್ಚಾಗಿದ್ದರೆ ಆಗ ಅದನ್ನು ಕರೆಂಟ್ ಅಕೌಂಟ್ ಸರ್​ಪ್ಲಸ್ ಎನ್ನುತ್ತಾರೆ.

ಇದನ್ನೂ ಓದಿ: ಭಾರತ ಈಗ ಚಿಪ್ ತಯಾರಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು: ರಘುರಾಮ್ ರಾಜನ್

ಭಾರತ ಮೊದಲಿಂದಲೂ ಆಮದು ಹೆಚ್ಚಿರುವ ದೇಶವಾಗಿದೆ. ಭಾರತ ಅತಿಹೆಚ್ಚು ಆಮದು ಮಾಡಿಕೊಳ್ಳುವ ಸರಕುಗಳಲ್ಲಿ ಪೆಟ್ರೋಲ್, ಚಿನ್ನ ಪ್ರಮುಖವಾದುದು. ಅಮೆರಿಕದಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ಅಧಿಕ ಇದೆ. 194.8 ಬಿಲಿಯನ್ ಡಾಲರ್ ಡೆಫಿಸಿಟ್ ಇದೆ. ಜಿಡಿಪಿಗೆ ಹೋಲಿಸಿದರೆ ಇದು ಶೇ. 2.8ರಷ್ಟಿದೆ. ಚೀನಾದಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ 229 ಬಿಲಿಯನ್ ಡಾಲರ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು