Paytm FAStag: ಪೇಟಿಎಂನಲ್ಲೂ ಈಗ ಮತ್ತೆ ಫಾಸ್ಟ್ಯಾಗ್ ರೀಚಾರ್ಜ್ ಅವಕಾಶ; ಇಲ್ಲಿದೆ ಕ್ರಮಗಳು
Utility story: ಪೇಟಿಎಂ ಆ್ಯಪ್ನಲ್ಲಿ ಫಾಸ್ಟ್ಯಾಗ್ ಸೇರಿದಂತೆ ಹಲವು ಸೇವೆಗಳು ಮುಂದುವರಿಯುತ್ತಿವೆ. ಪೇಟಿಎಂನಲ್ಲಿ ಫಾಸ್ಟ್ಯಾಗ್ ರೀಚಾರ್ಜ್ ಮಾಡಬಹುದು. ಹೊಸ ಫಾಸ್ಟ್ಯಾಗ್ ಕೂಡ ಪಡೆಯಬಹುದು. ಹಿಂದೆ ಪೇಟಿಎಂನಲ್ಲಿ ಅದರ ಪೇಮೆಂಟ್ಸ್ ಬ್ಯಾಂಕ್ ಮೂಲಕ ಫಾಸ್ಟ್ಯಾಗ್ ದೊರೆಯುತ್ತಿತ್ತು. ಈಗ ಎಚ್ಡಿಎಫ್ಸಿಯ ಫಾಸ್ಟ್ಯಾಗ್ ಅನ್ನು ಪೇಟಿಎಂ ತನ್ನ ಪ್ಲಾಟ್ಫಾರ್ಮ್ನಲ್ಲಿ ಮಾರಾಟ ಮಾಡುತ್ತಿದೆ. ಹಾಗೆಯೇ, ಯಾವುದೇ ಫಾಸ್ಟ್ಯಾಗ್ ಅನ್ನು ಪೇಟಿಎಂ ಗ್ರಾಹಕರು ರೀಚಾರ್ಜ್ ಮಾಡಬಹುದಾಗಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಪೇಟಿಎಂನ ಇತರ ಸೇವೆಗಳ ಬಗ್ಗೆ ಅನುಮಾನಗಳಿದ್ದವು. ಈಗ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಬದಲು ಬೇರೆ ಬ್ಯಾಂಕುಗಳೊಂದಿಗೆ ಪೇಟಿಎಂ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಅದರ ಬೇರೆ ಸೇವೆಗಳು ಅಬಾಧಿತವಾಗಿ ಮುಂದುವರಿಯಲಿದೆ. ಪೇಟಿಎಂ ಪ್ಲಾಟ್ಫಾರ್ಮ್ನಲ್ಲಿ ಫಾಸ್ಟ್ಯಾಗ್ (paytm fastag) ಅನ್ನು ರೀಚಾರ್ಜ್ ಮಾಡಬಹುದು. ಹೊಸ ಫಾಸ್ಟ್ಯಾಗ್ ಅನ್ನೂ ಕೂಡ ಪೇಟಿಎಂ ಮೂಲಕ ಖರೀದಿಸಬಹುದು. ಫಾಸ್ಟ್ಯಾಗ್ ಮಾತ್ರವಲ್ಲ ಸೌಂಡ್ಬಾಕ್ಸ್, ಕಾರ್ಡ್ ಮೆಷೀನ್ ಪೇಮೆಂಟ್ಸ್ ಇತ್ಯಾದಿ ಪೇಟಿಎಂ ಸೇವೆಗಳೂ ಕೂಡ ಮುಂದುವರಿಯುತ್ತಿವೆ.
ಪೇಟಿಎಂನಲ್ಲಿ ಈ ಹಿಂದೆ ಸಿಗುತ್ತಿದ್ದ ಫಾಸ್ಟ್ಯಾಗ್ ಅದರ ಪೇಮೆಂಟ್ಸ್ ಬ್ಯಾಂಕ್ಗೆ ಜೋಡಿತವಾಗಿತ್ತು. ಈಗ ಎಚ್ಡಿಎಫ್ಸಿ ಬ್ಯಾಂಕ್ ಜೊತೆ ಪೇಟಿಎಂ ಹೊಂದಾಣಿಕೆ ಮಾಡಿಕೊಂಡಿದೆ. ಎಚ್ಡಿಎಫ್ಸಿ ಬ್ಯಾಂಕ್ ನೀಡುವ ಫಾಸ್ಟ್ಯಾಗ್ ಅನ್ನು ಪೇಟಿಎಂ ಪ್ಲಾಟ್ಫಾರ್ಮ್ನಲ್ಲಿ ಪಡೆಯಬಹುದು.
ಇದನ್ನೂ ಓದಿ: ಎಫ್ಡಿ, ಪಿಪಿಎಫ್ ಇತ್ಯಾದಿಯಲ್ಲಿ ಹಣ ಹಾಕಿದರೆ ಎಷ್ಟು ವರ್ಷಕ್ಕೆ ಡಬಲ್ ಆಗುತ್ತೆ? ಇಲ್ಲಿದೆ ನೋಡಿ ರೂಲ್ 72
ಪೇಟಿಎಂನಲ್ಲಿ ಫಾಸ್ಟ್ಯಾಗ್ ರೀಚಾರ್ಜ್ ಮಾಡುವುದು ಹೇಗೆ?
- ಪೇಟಿಎಂ ಆ್ಯಪ್ ತೆರೆದು ಕೆಳಗೆ ಸ್ಕ್ರೋಲ್ ಮಾಡಿ. ಬಿಲ್ ಪೇಮೆಂಟ್ಸ್ ಸೆಕ್ಷನ್ ಅಡಿಯಲ್ಲಿ ‘ಫಾಸ್ಟ್ಯಾಗ್ ರೀಚಾರ್ಜ್’ ಆಯ್ಕೆ ಕಾಣಬಹುದು. ಅದನ್ನು ಒತ್ತಿರಿ.
- ಫಾಸ್ಟ್ಯಾಗ್ ನೀಡುವ ಬ್ಯಾಂಕ್ ಅನ್ನು ಆಯ್ಕೆ ಮಾಡಿ
- ಫಾಸ್ಟ್ಯಾಗ್ ಲಿಂಕ್ ಆಗಿರುವ ವಾಹನದ ನಂಬರ್ ಅನ್ನು ಹಾಕಿ, ಪ್ರೊಸೀಡ್ ಒತ್ತಿರಿ.
- ರೀಚಾರ್ಜ್ ಮಾಡಬಯಸುವ ಮೊತ್ತವನ್ನು ನಮೂದಿಸಿ.
- ಬಳಿಕ ಪ್ರೊಸೀಡ್ ಟು ಪೇ ಅನ್ನು ಒತ್ತಿರಿ.
ಇದನ್ನೂ ಓದಿ: ಸರ್ಕಾರದಿಂದ ಹೊಸ ವೇತನ ಕ್ರಮಕ್ಕೆ ಆಲೋಚನೆ; ಜಾರಿಯಾದರೆ ಬಹಳ ಹೆಚ್ಚಾಗಲಿದೆ ಕನಿಷ್ಠ ಸಂಬಳ
ಪೇಟಿಎಂನಲ್ಲಿ ಎಚ್ಡಿಎಫ್ಸಿ ಫಾಸ್ಟ್ಯಾಗ್ ಖರೀದಿಸುವುದು ಹೇಗೆ?
- ಪೇಟಿಎಂ ಆ್ಯಪ್ನಲ್ಲಿ ಸರ್ವಿಸಸ್ ಕೆಟಗರಿಯಲ್ಲಿ ಎಚ್ಡಿಎಫ್ಸಿ ಫಾಸ್ಟ್ಯಾಗ್ ಇರುತ್ತದೆ. ಇದು ಹುಡುಕುವುದು ಕಷ್ಟವಾದರೆ, ಆ್ಯಪ್ನ ಸರ್ಚ್ನಲ್ಲಿ ‘Buy HDFC FASTag’ ಎಂದು ನಮೂದಿಸಿ ಸರ್ಚ್ ಮಾಡಿ. ಬಳಿಕ ಅದರ ಮೇಲೆ ಟ್ಯಾಪ್ ಮಾಡಿ.
- ಇದರಲ್ಲಿ ಹೆಸರು, ಜನ್ಮದಿನಾಂಕ, ಪ್ಯಾನ್ ನಂಬರ್, ಇಮೇಲ್ ಐಡಿ, ವಾಹನ ನೊಂದಣಿ ಸಂಖ್ಯೆ, ವಾಹನದ ಎಂಜಿನ್ ಸಂಖ್ಯೆ ಈ ವಿವರ ಸಲ್ಲಿಸಬೇಕು.
- ಇದಾದ ಬಳಿಕ ಹಣ ಪಾವತಿಸಬೇಕು.
- ನಿಮ್ಮ ಮನೆ ವಿಳಾಸಕ್ಕೆ ಎಚ್ಡಿಎಫ್ಸಿ ಫಾಸ್ಟ್ಯಾಗ್ ತಲುಪುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ