ಎಫ್​ಡಿ, ಪಿಪಿಎಫ್ ಇತ್ಯಾದಿಯಲ್ಲಿ ಹಣ ಹಾಕಿದರೆ ಎಷ್ಟು ವರ್ಷಕ್ಕೆ ಡಬಲ್ ಆಗುತ್ತೆ? ಇಲ್ಲಿದೆ ನೋಡಿ ರೂಲ್ 72

Investment Rule 72: ಇವತ್ತು ವಿವಿಧ ವಾರ್ಷಿಕ ರಿಟರ್ನ್ ನೀಡುವ ಹಲವು ಹೂಡಿಕೆ ಆಯ್ಕೆಗಳಿವೆ. ಕೆಲ ಹೂಡಿಕೆಗಳು ರಿಸ್ಕ್ ಆದರೂ ಹೆಚ್ಚು ರಿಟರ್ನ್ ಕೊಡುತ್ತವೆ. ಇನ್ನೂ ಕೆಲ ಹೂಡಿಕೆಗಳು ಕನಿಷ್ಠ ರಿಟರ್ನ್ ಖಾತ್ರಿ ಕೊಡುತ್ತವೆ. ಯಾವ ಹೂಡಿಕೆಗಳಲ್ಲಿನ ಹಣ ಎಷ್ಟು ವರ್ಷಕ್ಕೆ ಡಬಲ್ ಮಾಡುತ್ತವೆ ಎಂದು ತಿಳಿಯಲು ಸರಳ ಗಣಿತ ಸೂತ್ರವೊಂದು ಇದೆ. ಅದು ರೂಲ್ 72. ನಿಮ್ಮ ಹೂಡಿಕೆ ನೀಡುವ ವಾರ್ಷಿಕ ರಿಟರ್ನ್ ಅಥವಾ ಬಡ್ಡಿ ಮೊತ್ತದ ಸಂಖ್ಯೆಯಿಂದ 72 ಅನ್ನು ಭಾಗಿಸಬೇಕು. ಅದು ಹೂಡಿಕೆ ಡಬಲ್ ಆಗುವ ವರ್ಷವನ್ನು ಸೂಚಿಸುತ್ತದೆ.

ಎಫ್​ಡಿ, ಪಿಪಿಎಫ್ ಇತ್ಯಾದಿಯಲ್ಲಿ ಹಣ ಹಾಕಿದರೆ ಎಷ್ಟು ವರ್ಷಕ್ಕೆ ಡಬಲ್ ಆಗುತ್ತೆ? ಇಲ್ಲಿದೆ ನೋಡಿ ರೂಲ್ 72
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 26, 2024 | 5:32 PM

ಸುಮ್ಮನೆ ಹಣವನ್ನು ಬ್ಯಾಂಕ್​ನಲ್ಲಿ ಶೇಖರಿಸಿಡುವುದಲ್ಲ. ಈ ಉಳಿಸಿದ ಹಣವನ್ನು ಹೂಡಿಕೆಗಳ ಮೂಲಕ ಹೆಚ್ಚಿಸುವ ಪ್ರಯತ್ನಗಳಾಗಬೇಕು. ಇವತ್ತು ಬಹಳ ಸುರಕ್ಷಿತವೆನಿಸುವ ಹೂಡಿಕೆ ಆಯ್ಕೆಗಳಿವೆ. ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ನಾವು ಮಾಡುವ ಹೂಡಿಕೆ (investment) ಎಷ್ಟು ಬೆಳೆಯುತ್ತದೆ ಎಂದು ಮೊದಲೇ ಮನಗಾಣಬಹುದು. ಕೆಲ ಹೂಡಿಕೆಗಳಲ್ಲಿ ಹಣ ಆರೇಳು ವರ್ಷಕ್ಕೆ ಡಬಲ್ ಆಗಬಹುದು, ಇನ್ನೂ ಕೆಲ ಹೂಡಿಕೆಗಳಲ್ಲಿ ಹಣ ಡಬಲ್ ಆಗಲು 10 ವರ್ಷವೇ ಬೇಕಾಗಬಹುದು. ಒಂದು ಹೂಡಿಕೆ ಎಷ್ಟು ವರ್ಷಕ್ಕೆ ಡಬಲ್ ಆಗುತ್ತದೆ ಎಂಬುದು ಆ ಸ್ಕೀಮ್​ನಲ್ಲಿ ಸಿಗುವ ವಾರ್ಷಿಕ ಬಡ್ಡಿ ಆಧಾರವಾಗಿರುತ್ತದೆ. ಈ ಬಡ್ಡಿ ಎಷ್ಟೆಂದು ತಿಳಿದರೆ ಹೂಡಿಕೆ ಎಷ್ಟು ವರ್ಷಕ್ಕೆ ಡಬಲ್ ಆಗುತ್ತದೆ ಎಂದು ಸುಲಭವಾಗಿ ಎಣಿಸಬಹುದು. ಅದಕ್ಕೆ ರೂಲ್ 72 ಎಂಬ ಸುಲಭ ಸೂತ್ರ ಇದೆ.

ರೂಲ್ 72 ಹೇಗೆ?

72 ನಂಬರ್ ಅನ್ನು ಬಡ್ಡಿದರದೊಂದಿಗೆ ಭಾಗಿಸಬೇಕು. ಆಗ ಸಿಗುವ ಸಂಖ್ಯೆಯು ನಿರ್ದಿಷ್ಟ ಹೂಡಿಕೆಯಲ್ಲಿ ನಮ್ಮ ಹಣ ಎಷ್ಟು ವರ್ಷಕ್ಕೆ ದ್ವಿಗುಣಗೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ. ಉದಾಹರಣೆಗೆ ನೀವು ಶೇ. 9ರಷ್ಟು ಬಡ್ಡಿ ಕೊಡುವ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ನಲ್ಲಿ ಹಣ ಇರಿಸಿದರೆ 8 ವರ್ಷಕ್ಕೆ (72/9=8) ಹಣ ಡಬಲ್ ಆಗುತ್ತದೆ.

ಇದನ್ನೂ ಓದಿ: ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೆ ಬಡ್ಡಿ ಶೇ. 7.4; ಅಧಿಕ ಬಡ್ಡಿ ಜೊತೆಗೆ ತೆರಿಗೆ ಲಾಭವೂ ಇದೆ ಎಂಐಎಸ್​ನಲ್ಲಿ

ಯಾವ್ಯಾವ ಹೂಡಿಕೆಯಲ್ಲಿ ಹಣ ಡಬಲ್ ಆಗಲು ಎಷ್ಟು ವರ್ಷ ಬೇಕು?

  • ಪಿಪಿಎಫ್: ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ವರ್ಷಕ್ಕೆ ಶೇ. 7.1ರಷ್ಟು ಬಡ್ಡಿ ನೀಡಲಾಗುತ್ತದೆ. ಇದರ ಬಡ್ಡಿದರವನ್ನು ಸರ್ಕಾರ ಕಾಲಕಾಲಕ್ಕೆ ಪರಿಷ್ಕರಿಸುತ್ತದೆ. ಒಂದು ವೇಳೆ ಇದೇ ಶೇ. 7.1ರ ಬಡ್ಡಿದರ ಮುಂದುವರಿದರೆ, ಇದರಲ್ಲಿನ ಹೂಡಿಕೆ ಡಬಲ್ ಆಗಲು 10 ವರ್ಷ ಬೇಕಾಗುತ್ತದೆ.
  • ಸುಕನ್ಯ ಸಮೃದ್ಧಿ ಯೋಜನೆ: ಹೆಣ್ಮಕ್ಕಳಿಗೆಂದು ರೂಪಿಸಿರುವ ಈ ಸ್ಕೀಮ್​ನಲ್ಲಿ ಬಡ್ಡಿದರ ಶೇ. 8.2ರಷ್ಟಿದೆ. ಇದು ಸುಮಾರು 8-9 ವರ್ಷಕ್ಕೆ ಹಣ ಡಬಲ್ ಮಾಡುತ್ತದೆ.
  • ಕಿಸಾನ್ ವಿಕಾಸ್ ಪತ್ರ: ಇದರಲ್ಲಿ ವಾರ್ಷಿಕ ಬಡ್ಡಿದರ ಶೇ. 7.5ರಷ್ಟಿದೆ. ಇದರಲ್ಲಿನ ಹೂಡಿಕೆ ದ್ವಿಗುಣಗೊಳ್ಳಲು 9-10 ವರ್ಷ ಬೇಕಾಗುತ್ತದೆ.
  • ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್: ಇದರಿಂದ ಶೇ. 7.7ರಷ್ಟು ಬಡ್ಡಿ ಆದಾಯ ಸಿಗುತ್ತದೆ. ಈ ಮೂಲಕ ಹಣ ಡಬಲ್ ಆಗಲು 6ರಿಂದ 7 ವರ್ಷ ಬೇಕಾಗಬಹುದು.

ಇದನ್ನೂ ಓದಿ: ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಮೂಲಕ ನಿಮ್ಮ ಉಳಿತಾಯ ಹಣಕ್ಕೆ ಭರ್ಜರಿ ಲಾಭ; 5 ಕೋಟಿ ಆದಾಯ ಹೇಗೆ?

  • ನ್ಯಾಷನಲ್ ಪೆನ್ಷನ್ ಸಿಸ್ಟಂ: ಇದು ಮಾರುಕಟ್ಟೆಗೆ ಲಿಂಕ್ ಆಗಿರುವ ಪಿಂಚಣಿ ಸ್ಕೀಮ್. ನಿರ್ದಿಷ್ಟವಾಗಿ ಆದಾಯ ಇಷ್ಟೇ ಬರುತ್ತೆ ಎನ್ನಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಶೇ. 10ರಿಂದ 11ರಷ್ಟು ಹಣ ಬೆಳೆಯಬಹುದು. ಹೀಗಾದಾಗ ಹೂಡಿಕೆಯು 6ರಿಂದ 7 ವರ್ಷಕ್ಕೆ ಡಬಲ್ ಆಗುತ್ತದೆ.
  • ಮ್ಯುಚುವಲ್ ಫಂಡ್: ಇದು ವರ್ಷಕ್ಕೆ ಸರಾಸರಿಯಾಗಿ ಶೇ. 12ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಬಹುದು. ಈ ರೀತಿ ಬೆಳೆದಲ್ಲಿ ಹೂಡಿಕೆಯು ಕೇವಲ 6 ವರ್ಷಕ್ಕೆ ಡಬಲ್ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ