AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದಿಂದ ಹೊಸ ವೇತನ ಕ್ರಮಕ್ಕೆ ಆಲೋಚನೆ; ಜಾರಿಯಾದರೆ ಬಹಳ ಹೆಚ್ಚಾಗಲಿದೆ ಕನಿಷ್ಠ ಸಂಬಳ

Minimum wage vs Living wage difference: ಸರ್ಕಾರ ಕನಿಷ್ಠ ವೇತನ ಪದ್ಧತಿಯ ಬದಲು ಲಿವಿಂಗ್ ವೇಜ್ ಸಿಸ್ಟಂ ಅನ್ನು ಅಳವಡಿಸಲು ಯೋಜಿಸುತ್ತಿದೆ. ವರದಿಗಳ ಪ್ರಕಾರ ಅಂತರರಾಷ್ಟ್ರೀಯ ಲೇಬರ್ ಆರ್ಗನೈಸೇಶನ್ ಜೊತೆ ಸರ್ಕಾರ ಚರ್ಚಿಸುತ್ತಿದ್ದು, ಲಿವಿಂಗ್ ವೇಜ್ ಸಿಸ್ಟಂನ ರೂಪುರೇಖೆ ರಚಿಸಲು ಸಹಾಯ ಯಾಚಿಸಿದೆ. 2025ರ ಒಳಗೆ ಹೊಸ ವೇತನ ಕ್ರಮ ಜಾರಿಗೆ ತರುವುದು ಸರ್ಕಾರದ ಗುರಿ. ಇದು ಜಾರಿಯಾದಲ್ಲಿ ಒಂದು ಪ್ರದೇಶದ ನೈಜ ಜೀವನ ವೆಚ್ಚದ ಆಧಾರವಾಗಿ ಲಿವಿಂಗ್ ವೇಜ್ ನಿಗದಿ ಆಗುತ್ತದೆ. ಇದು ಸಾಮಾನ್ಯವಾಗಿ ಈಗಿರುವ ಕನಿಷ್ಠ ವೇತನಕ್ಕಿಂತ ಬಹಳ ಹೆಚ್ಚಿನ ಮೊತ್ತವಾಗಿರುತ್ತದೆ.

ಸರ್ಕಾರದಿಂದ ಹೊಸ ವೇತನ ಕ್ರಮಕ್ಕೆ ಆಲೋಚನೆ; ಜಾರಿಯಾದರೆ ಬಹಳ ಹೆಚ್ಚಾಗಲಿದೆ ಕನಿಷ್ಠ ಸಂಬಳ
ವೇತನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 26, 2024 | 3:29 PM

Share

ನವದೆಹಲಿ, ಮಾರ್ಚ್ 26: ಭಾರತದಲ್ಲಿ ಕನಿಷ್ಠ ವೇತನವಾಗಿ ದಿನಕ್ಕೆ 176 ರೂ ಇದೆ. ಸರ್ಕಾರ ಈಗ ವೇತನ ಮಾನದಂಡ ಬದಲಿಸಲು ಮನಸು ಮಾಡಿದೆ. ಕನಿಷ್ಠ ವೇತನ (Minimum wage) ಎಂಬ ಕ್ರಮದ ಬದಲು ವಾಸ ವೇತನ ಅಥವಾ ಲಿವಿಂಗ್ ವೇಜ್ ಸಿಸ್ಟಂ ಅನ್ನು ಜಾರಿಗೆ ತರುವ ಆಲೋಚನೆ ಸರ್ಕಾರದ್ದಾಗಿದೆ. ಈ ಯೋಚನೆ ಕಾರ್ಯರೂಪಕ್ಕೆ ಬಂದರೆ ಕಾರ್ಮಿಕರು ಅಥವಾ ಉದ್ಯೋಗಿಗಳ ಸಂಬಳ ಗಣನೀಯವಾಗಿ ಹೆಚ್ಚಲಿದೆ. ಮುಂದಿನ ವರ್ಷ ಅಂದರೆ 2025ರೊಳಗೆ ವಾಸ ವೇತನ ಪದ್ಧತಿಯನ್ನು (living wage system) ಅಳವಡಿಸುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO- International Labour Organization) ಜೊತೆ ಸರ್ಕಾರ ಮಾತುಕತೆ ನಡೆಸುತ್ತಿದ್ದು, ಲಿವಿಂಗ್ ವೇಜ್ ಅಳವಡಿಕೆಗೆ ರೂಪುರೇಖೆ ಹಾಕಲು ತಾಂತ್ರಿಕ ನೆರವು ಯಾಚಿಸಿದೆ ಎಂದು ಸಿಎನ್​ಬಿಸಿ ಟಿವಿ18 ವೆಬ್​ಸೈಟ್​ನಲ್ಲಿ ವರದಿಯಾಗಿದೆ.

ಐಎಲ್​ಒದ ಸಂಸ್ಥಾಪಕ ಸದಸ್ಯ ದೇಶಗಳಲ್ಲಿ ಭಾರತವೂ ಒಂದು. 1922ರಿಂದಲೂ ಇದರ ಆಡಳಿತ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯತ್ವ ಹೊಂದಿದೆ. ಕಳೆದ ತಿಂಗಳು (ಫೆಬ್ರುವರಿ) ವೇತನ ನೀತಿ ಬಗ್ಗೆ ತಜ್ಞರ ಸಭೆ ನಡೆದು ವಾಸ ವೇತನ ಕ್ರಮವನ್ನು ಜಾರಿ ತರಲು ಒಮ್ಮತಕ್ಕೆ ಬರಲಾಯಿತು. ಐಎಲ್​ಒ ಕೂಡ ಮಾರ್ಚ್ 13ರಂದು ಈ ಹೊಸ ಕ್ರಮಕ್ಕೆ ಶಿಫಾರಸು ಮಾಡಿದೆ.

ಇದನ್ನೂ ಓದಿ: ಚೀನಾದ ಯಾವುದೇ ನಗರಕ್ಕಿಂತಲೂ ಮುಂಬೈನಲ್ಲಿ ಅತಿಹೆಚ್ಚು ಬಿಲಿಯನೇರ್​ಗಳು; ಜಾಗತಿಕವಾಗಿ ಮುಂಬೈಗೆ ಮೂರನೇ ಸ್ಥಾನ

ಲಿವಿಂಗ್ ವೇಜ್ ಎಂದರೇನು? ಸಾಂಪ್ರದಾಯಿಕ ಕನಿಷ್ಠ ವೇತನಕ್ಕೂ ಇದಕ್ಕೂ ಏನು ವ್ಯತ್ಯಾಸ?

ಕನಿಷ್ಠ ವೇತನ ಎಂಬುದು ಎಲ್ಲಾ ಪ್ರದೇಶಗಳಿಗೂ ಸಮಾನವಾಗಿರುತ್ತದೆ. ಸದ್ಯ ಭಾರತದಲ್ಲಿ ದಿನದ ಕನಿಷ್ಠ ವೇತನ 176 ರೂ ಇದೆ. ಆದರೆ, ಕೆಲವೊಂದು ಪ್ರದೇಶಗಳಲ್ಲಿ ವಾಸ ವೆಚ್ಚ ಅಧಿಕ ಇರುತ್ತದೆ. ಆಗ ಈ ವೇತನ ಯಾತಕ್ಕೂ ಸಾಲದು ಎನಿಸಬಹುದು. ಉದಾಹರಣೆಗೆ, ಉತ್ತರ ಕರ್ನಾಟದ ಹಳ್ಳಿಯಿಂದ ಬೆಂಗಳೂರಿಗೆ ಕೆಲಸಕ್ಕೆ ಬರುವ ಕಾರ್ಮಿಕರೊಬ್ಬರು ದಿನಕ್ಕೆ 176 ರೂ ಕೂಲಿ ಪಡೆಯುತ್ತಾರೆ ಎಂದಿಟ್ಟುಕೊಳ್ಳಿ. ಬೆಂಗಳೂರಿನಲ್ಲಿ ಬಾಡಿಗೆ, ಆಹಾರ, ಬಟ್ಟೆಬರೆ, ಮಕ್ಕಳಿಗೆ ಶಿಕ್ಷಣ ಇತ್ಯಾದಿ ಖರ್ಚುಗಳನ್ನು ಪರಿಗಣಿಸಿದರೆ ಈ ವೇತನ ಸರಿಯಾಗದು.

ಈ ಸಂದರ್ಭದಲ್ಲಿ ಮೇಲೆ ತಿಳಿಸಿದ ಕೊರತೆಯನ್ನು ನೀಗಿಸುತ್ತದೆ ವಾಸ ವೇತನ ಅಥವಾ ಲಿವಿಂಗ್ ವೇಜ್ ವ್ಯವಸ್ಥೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಈ ಲಿವಿಂಗ್ ವೇಜ್ ಹೇಗಿರಬೇಕು ಎಂದು ಒಂದಿಷ್ಟು ಮೂಲಭೂತ ಅಂಶಗಳನ್ನು ನಿರ್ದಿಷ್ಟಪಡಿಸಿದೆ.

ಇದನ್ನೂ ಓದಿ: ಅಮೂಲ್​ನ ತಾಜಾ ಹಾಲು ಮೊದಲ ಬಾರಿಗೆ ಅಮೆರಿಕದಲ್ಲಿ; ಕೆಎಂಎಫ್​ನ ಹಾಲು ವಿದೇಶಗಳಲ್ಲಿ ಸಿಗುತ್ತಾ?

ಒಂದು ಪ್ರದೇಶದಲ್ಲಿ ಆಹಾರ, ಬಟ್ಟೆ, ವಸತಿ, ಆರೋಗ್ಯ, ಶಿಕ್ಷಣ ಇತ್ಯಾದಿ ಖರ್ಚುವೆಚ್ಚಗಳನ್ನು ಪರಿಗಣಿಸಲಾಗುತ್ತದೆ. ವ್ಯಕ್ತಿಗೆ ಮದುವೆ ಆಗಿದೆಯಾ, ಮಕ್ಕಳು ಎಷ್ಟಿದ್ದಾರೆ, ಮನೆಯಲ್ಲಿ ಅವಲಂಬಿತರೆಷ್ಟಿದ್ದಾರೆ ಎಂಬೆಲ್ಲಾ ಅಂಶಗಳನ್ನು ಗಣಿಸಿ, ಆ ವ್ಯಕ್ತಿಗೆ ಆ ಪ್ರದೇಶದಲ್ಲಿ ಮಾನವಂತವಾಗಿ ಬದುಕಲು ಕನಿಷ್ಠ ಎಷ್ಟು ಸಂಪಾದನೆ ಬೇಕಾಗುತ್ತದೆ ಎಂದು ಸೂತ್ರ ಇಟ್ಟು ಅದರ ಆಧಾರದ ಮೇಲೆ ವೇತನ ನಿರ್ಧರಿಸಬಹುದು. ಒಂದೊಂದು ಪ್ರದೇಶದಲ್ಲಿ ಜೀವನ ವೆಚ್ಚ ಬದಲಾಗಬಹುದು. ಅಂತೆಯೇ ವಾಸ ವೇತನವೂ ಕೂಡ ಪ್ರದೇಶದಿಂದ ಪ್ರದೇಶಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಅವಿವಾಹಿರಾದವರಿಗಿಂತ ಮಕ್ಕಳನ್ನು ಹೊಂದಿರುವ ಸಂಸಾರಸ್ಥರಿಗೆ ಹೆಚ್ಚು ವೇತನ ಸಿಗುವ ಸಾಧ್ಯತೆ ಇರುತ್ತದೆ. ಇದು ಸಮರ್ಪಕವಾಗಿ ಜಾರಿಯಾದರೆ ಭಾರತದಲ್ಲಿ ಬಹಳ ಬೇಗ ಬಡತನ ನಿವಾರಣೆ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ