ಅಮೇಜಾನ್​ನಲ್ಲಿ ಮಾರಾಟ ವಂಚನೆ ತಡೆಯಲು 15,000 ಮಂದಿ ಪರಿಣಿತರ ನೇಮಕ; 10,000 ಕೋಟಿ ರೂ ವೆಚ್ಚ

Amazon Measures To Ensure Safe Business: ಅಮೇಜಾನ್ ಸಂಸ್ಥೆ ತನ್ನ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದೆ. ತನ್ನ ಪ್ಲಾಟ್​ಫಾರ್ಮ್​ನಲ್ಲಿ ಮಾರಾಟ ವಂಚನೆ ಆಗುವುದನ್ನು ತಡೆಯಲು 1.2 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ವಂಚನೆ ಪತ್ತೆ ಮಾಡಲೆಂದೇ 15,000 ಪರಿಣಿತರನ್ನು ನೇಮಿಸಿದೆ. ಜಾಗತಿಕವಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ 21,000ಕ್ಕೂ ಹೆಚ್ಚು ವಂಚಕ ಮಾರಾಟಗಾರರನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ ಎಂದು ಅಮೇಜಾನ್​ನ ವರದಿಯೊಂದು ಹೇಳಿದೆ.

ಅಮೇಜಾನ್​ನಲ್ಲಿ ಮಾರಾಟ ವಂಚನೆ ತಡೆಯಲು 15,000 ಮಂದಿ ಪರಿಣಿತರ ನೇಮಕ; 10,000 ಕೋಟಿ ರೂ ವೆಚ್ಚ
ಅಮೇಜಾನ್
Follow us
|

Updated on: Mar 26, 2024 | 6:24 PM

ನವದೆಹಲಿ, ಮಾರ್ಚ್ 26: ಆನ್ಲೈನ್ ಮಾರಾಟದ ವೇಳೆ ನಕಲಿ ಉತ್ಪನ್ನಗಳನ್ನು (counterfeit products) ಸರಬರಾಜು ಮಾಡುವುದು ಸೇರಿದಂತೆ ವಿವಿಧ ರೀತಿಯ ವಂಚನೆ ಪ್ರಕರಣಗಳು ಭಾರತದಲ್ಲಿ ಸಾಕಷ್ಟು ಬೆಳಕಿಗೆ ಬರುತ್ತಲೇ ಇವೆ. ಇಕಾಮರ್ಸ್ ಕಂಪನಿಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ಮೂಡಿಸುತ್ತವೆ ಇಂಥ ಪ್ರಕರಣಗಳು. ಸಾವಿರಾರು ಕೋಟಿ ರೂ ಆದಾಯ ಮಾಡುವ ಇಕಾಮರ್ಸ್ ಕಂಪನಿಗಳು ಇಂಥ ವಂಚನೆಯ ಪ್ರಕರಣಗಳನ್ನು ಕಂಡೂ ಕಾಣದಂತೆ ಸುಮ್ಮನಿರಲು ಸಾಧ್ಯವಿಲ್ಲ. ಇದರ ಅಪಾಯದ ಅರಿವಿರುವ ಅಮೇಜಾನ್ ಸಂಸ್ಥೆ ತನ್ನ ಪ್ಲಾಟ್​ಫಾರ್ಮ್​ನಲ್ಲಿ (amazon platform) ಮಾರಾಟ ವಂಚನೆಗಳನ್ನು ತಡೆದು ಗ್ರಾಹಕರ ಹಿತ ಕಾಯಲು ಬಿಗಿ ಕ್ರಮಗಳನ್ನು ಕೈಗೊಂಡಿದೆ. ಅದಕ್ಕಾಗಿ 1.2 ಬಿಲಿಯನ್ ಡಾಲರ್ (ಸುಮಾರು 10,000 ಕೋಟಿ ರೂ) ಹಣವನ್ನು ವಿನಿಯೋಗಿಸಿದೆ. ಮಾರಾಟ ವಂಚನೆಯನ್ನು (bad selling) ಪತ್ತೆ ಮಾಡಲೆಂದೇ ಅಮೇಜಾನ್ ಕಳೆದ ವರ್ಷ (2023) ಸುಮಾರು 15,000 ತಜ್ಞರನ್ನು ನೇಮಿಸಿದೆ. ಹಾಗೆಂದು ಅಮೇಜಾನ್ 2023 ಬ್ರ್ಯಾಂಡ್ ಪ್ರೊಟೆಕ್ಷನ್ ವರದಿ ಹೇಳುತ್ತಿದೆ.

ಒಬ್ಬ ಗ್ರಾಹಕರು ನಮ್ಮ ಆನ್ಲೈನ್ ಸ್ಟೋರ್​ನಲ್ಲಿ ಖರೀದಿಸಲು ಬರುತ್ತಾರೆ ಎಂದರೆ ಅವರಿಗೆ ಅಸಲಿ ಉತ್ಪನ್ನ ಸಿಗುತ್ತದೆ ಎನ್ನುವ ವಿಶ್ವಾಸ ಇರುತ್ತದೆ. ಮಾರಾಟಗಾರರು ನಮ್ಮ ಸ್ಟೋರ್​ನಲ್ಲಿ ಮಾರಲು ಬರುತ್ತಾರೆ ಎಂದರೆ ಅವರು ಒಳ್ಳೆಯ ಮಾರಾಟ ವಾತಾವರಣ ನಿರೀಕ್ಷಿಸುತ್ತಾರೆ. ಸ್ಪರ್ಧೆಯಲ್ಲಿ ವಂಚಕ ಮಾರಾಟಗಾರರು ಇರುವುದಿಲ್ಲ ಎನ್ನುವ ವಿಶ್ವಾಸ ಅವರಿಗೆ ಇರುತ್ತದೆ,’ ಎಂದು ಈ ಅಮೇಜಾನ್ ರಿಪೋರ್ಟ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಭಾರತ ಈಗ ಚಿಪ್ ತಯಾರಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು: ರಘುರಾಮ್ ರಾಜನ್

ಅಮೇಜಾನ್ ನೇಮಿಸಿದ 15,000 ತಜ್ಞರು ಯಾರು?

ಯಾವುದೇ ಉತ್ಪನ್ನಗಳ ಮಾರಾಟಗಾರರು ಆಮೇಜಾನ್ ಪ್ಲಾಟ್​ಫಾರ್ಮ್​ನಲ್ಲಿ ಮಾರಾಟ ಮಾಡಬೇಕೆಂದರೆ ಅಲ್ಲಿ ನೊಂದಾಯಿಸಬೇಕು. ಈ ವೇಳೆ ವಂಚಕ ಮಾರಾಟಗಾರರು ನಕಲಿ ದಾಖಲೆಗಳನ್ನು ನೀಡಿ ನೊಂದಾಯಿಸಬಹುದು. ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತೇವೆ ಎಂದು ಉತ್ಪನ್ನಗಳನ್ನು ಲಿಸ್ಟ್ ಮಾಡಿ, ಅಂತಿಮವಾಗಿ ಗ್ರಾಹಕರಿಗೆ ಕಳಪೆ ಗುಣಮಟ್ಟದ ನಕಲಿ ಉತ್ಪನ್ನಗಳನ್ನು ನೀಡುತ್ತಾರೆ. ಇಂಥ ವಂಚಕ ಮಾರಾಟಗಾರರನ್ನು ಮೂಲದಲ್ಲೇ ಪತ್ತೆ ಹಚ್ಚಲು ಅಮೇಜಾನ್ ತಜ್ಞರನ್ನು ನೇಮಕ ಮಾಡಿದೆ.

ಇವರು ಮೆಷಿನ್ ಲರ್ನಿಂಗ್ ಸೈಂಟಿಸ್ಟ್​​ಗಳು, ಸಾಫ್ಟ್​ವೇರ್ ಡೆವಲಪರ್​ಗಳು, ತನಿಖಾ ತಜ್ಞರು ಮೊದಲಾದವರನ್ನು ಅಮೇಜಾನ್ ನೇಮಿಸಿದೆ. ಮಾರಾಟಗಾರರು ಒದಗಿಸುವ ದಾಖಲೆಯಲ್ಲಿ ಫೋರ್ಜರಿ ಇದೆಯಾ ಎಂಬುದನ್ನು ಈ ನುರಿತರು ಪತ್ತೆ ಹಚ್ಚಲಬಲ್ಲುರು. ಆಧಾರ್ ಇತ್ಯಾದಿ ದಾಖಲೆಗಳು ಅಸಲಿಯಾ, ನಕಲಿಯಾ ಎಂಬುದನ್ನು ತ್ವರಿತವಾಗಿ ಪತ್ತೆ ಮಾಡಬಲ್ಲ ಪರಿಣತಿ ಇವರಲ್ಲಿ ಇರುತ್ತದೆ. ಅಮೇಜಾನ್ ಪ್ಲಾಟ್​ಫಾರ್ಮ್​ನಲ್ಲಿ ಮಾರಾಟಕ್ಕೆಂದು ನೊಂದಣಿಗೆ ಅರ್ಜಿ ಸಲ್ಲಿಸುವಾಗ ಕೊಡಲಾಗುವ ದಾಖಲೆಗಳನ್ನು ಬಹಳ ಕಟ್ಟುನಿಟ್ಟಾಗಿ ಈ ತಜ್ಞರ ತಂಡ ಪರಿಶೀಲನೆ ನಡೆಸುತ್ತದೆ.

ಇದನ್ನೂ ಓದಿ: ಸರ್ಕಾರದಿಂದ ಹೊಸ ವೇತನ ಕ್ರಮಕ್ಕೆ ಆಲೋಚನೆ; ಜಾರಿಯಾದರೆ ಬಹಳ ಹೆಚ್ಚಾಗಲಿದೆ ಕನಿಷ್ಠ ಸಂಬಳ

2023ರಲ್ಲಿ ಈ ಕ್ರಮದಿಂದಾಗಿ ವಂಚಕ ಮಾರಾಟಗಾರರು ಸೆಲಿಂಗ್ ಅಕೌಂಟ್ ತೆರೆಯಲು ಮಾಡಿದ 7 ಲಕ್ಷಕ್ಕೂ ಹೆಚ್ಚು ಪ್ರಯತ್ನಗಳನ್ನು ತಡೆ ಹಿಡಿಯಲಾಗಿದೆ. ಒಂದು ವರ್ಷದಲ್ಲಿ ವಿಶ್ವಾದ್ಯಂತ 70 ಲಕ್ಷ ಉತ್ಪನ್ನಗಳ ವಿಲೇವಾರಿಯನ್ನು ಗುರುತಿಸಿ ತಡೆಯಲಾಗಿದೆ.

2020ರಲ್ಲಿ ಅಮೇಜಾನ್ ತೆಗೆದುಕೊಂಡ ಈ ಮುನ್ನೆಚ್ಚರಿಕೆ ಕ್ರಮದಿಂದ ಸಾಕಷ್ಟು ವಂಚನೆ ಪ್ರಕರಣಗಳು ಕಡಿಮೆ ಆಗಿವೆ. ಕಳೆದ ಮೂರ್ನಾಲ್ಕು ವರ್ಷದಲ್ಲಿ 21,000ಕ್ಕೂ ಹೆಚ್ಚು ವಂಚಕ ಮಾರಾಟಗಾರರ ವಿರುದ್ಧ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ