ನ್ಯಾಯಾಂಗ ನಿಂದನೆ ಕೇಸ್: ಪ್ರಶಾಂತ್‌ಭೂಷಣ್ ತಪ್ಪಿತಸ್ಥ, ಶಿಕ್ಷೆ ಏನು?

| Updated By: ಸಾಧು ಶ್ರೀನಾಥ್​

Updated on: Aug 14, 2020 | 11:45 AM

ದೆಹಲಿ: ನ್ಯಾಯಾಂಗ ನಿಂದನೆ ಕೇಸ್​ನಲ್ಲಿ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸಿಜೆ ‌ಎಸ್.ಎ.ಬೋಬಡೆ ವಿರುದ್ಧ ಎರಡು ಟ್ವೀಟ್ ಮಾಡಿ ಪೇಚೆಗೆ ಸಿಲುಕಿದ್ದ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಕೊರೊನಾ ಲಾಕ್​ಡೌನ್ ವೇಳೆ ಸುಪ್ರೀಂಕೋರ್ಟ್ ಸಿಜೆ ಎಸ್.ಎ.ಬೋಬಡೆ ಅವರು ತಮ್ಮ ಸ್ವಂತ ಊರಾದ ಮಹಾರಾಷ್ಟ್ರದ ನಾಗಪುರದಲ್ಲಿದ್ದರು. ಆಗ ಹರ್ಲೆ ಡೇವಿಡ್‌ಸನ್ ಬೈಕ್ ಮೇಲೆ ಕುಳಿತು ಫೋಟೋಗೆ ಪೋಸ್ ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ […]

ನ್ಯಾಯಾಂಗ ನಿಂದನೆ ಕೇಸ್: ಪ್ರಶಾಂತ್‌ಭೂಷಣ್ ತಪ್ಪಿತಸ್ಥ, ಶಿಕ್ಷೆ ಏನು?
Follow us on

ದೆಹಲಿ: ನ್ಯಾಯಾಂಗ ನಿಂದನೆ ಕೇಸ್​ನಲ್ಲಿ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸಿಜೆ ‌ಎಸ್.ಎ.ಬೋಬಡೆ ವಿರುದ್ಧ ಎರಡು ಟ್ವೀಟ್ ಮಾಡಿ ಪೇಚೆಗೆ ಸಿಲುಕಿದ್ದ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಕೊರೊನಾ ಲಾಕ್​ಡೌನ್ ವೇಳೆ ಸುಪ್ರೀಂಕೋರ್ಟ್ ಸಿಜೆ ಎಸ್.ಎ.ಬೋಬಡೆ ಅವರು ತಮ್ಮ ಸ್ವಂತ ಊರಾದ ಮಹಾರಾಷ್ಟ್ರದ ನಾಗಪುರದಲ್ಲಿದ್ದರು. ಆಗ ಹರ್ಲೆ ಡೇವಿಡ್‌ಸನ್ ಬೈಕ್ ಮೇಲೆ ಕುಳಿತು ಫೋಟೋಗೆ ಪೋಸ್ ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಎರಡು ಟ್ವೀಟ್ ಮಾಡಿದ್ದರು. ಸಿಜೆ ಎಸ್.ಎ.ಬೋಬಡೆ ಅವರು ಬೈಕ್ ಮೇಲೆ ಕುಳಿತುಕೊಂಡು ತಲೆಗೆ ಹೆಲ್ಮೆಟ್ ಹಾಕಿಲ್ಲ.

ಲಾಕ್‌ಡೌನ್ ನಿಂದ ಸುಪ್ರೀಂಕೋರ್ಟ್ ಗೆ ಬಾಗಿಲು ಹಾಕಿ ಬೈಕ್ ಸವಾರಿ ಮಾಡ್ತಿದ್ದಾರೆ ಎಂದೆಲ್ಲಾ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗಳಿಂದ ಸಂಕಟದಲ್ಲಿ ಸಿಕ್ಕಿ ಹಾಕಿಕೊಂಡ ಪ್ರಶಾಂತ್ ಭೂಷಣ್ ಮೇಲೆ ಸುಪ್ರೀಂಕೋರ್ಟ್ ಸ್ವಪ್ರೇರಣೆಯಿಂದ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿಕೊಂಡಿತ್ತು. ಇಂದಿನ ತೀರ್ಪಿನಲ್ಲಿ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, ಶಿಕ್ಷೆಯ ಬಗ್ಗೆ ಆಗಸ್ಟ್ 20 ರಂದು ವಿಚಾರಣೆ ನಡೆಸುವುದಾಗಿ ಜಸ್ಟೀಸ್ ಅರುಣ್ ಮಿಶ್ರಾ ಪೀಠದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಹೆಲ್ಮೆಟ್ ಹಾಕದೆ ಬೈಕ್ ಮೇಲೆ ಕುಳಿತ CJ, ಇದನ್ನು ಪ್ರಶ್ನಿಸಿದ್ದ ಭೂಷಣ್‌ಗೆ ದಂಡನಾ, ಜೈಲು ಶಿಕ್ಷೆನಾ?