ಬಿಹಾರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯ ನಿಷೇಧವನ್ನು ಅಂತ್ಯಗೊಳಿಸುತ್ತೇವೆ: ಪ್ರಶಾಂತ್ ಕಿಶೋರ್

|

Updated on: Sep 15, 2024 | 9:57 AM

ಬಿಹಾರದಲ್ಲಿ 2025ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯ ನಿಷೇಧವನ್ನು ಅಂತ್ಯಗೊಳಿಸುವುದಾಗಿ ಚುನಾವಣಾ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಪ್ರಶಾಂತ್ ಕಿಶೋರ್ 2022ರಲ್ಲಿ ಜನ್​ ಸೂರಜ್​ ಎಂಬ ಪಕ್ಷವನ್ನು ಕಟ್ಟಿದ್ದಾರೆ.

ಬಿಹಾರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯ ನಿಷೇಧವನ್ನು ಅಂತ್ಯಗೊಳಿಸುತ್ತೇವೆ: ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್
Follow us on

ಬಿಹಾರದಲ್ಲಿ 2025ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯ ನಿಷೇಧವನ್ನು ಅಂತ್ಯಗೊಳಿಸುವುದಾಗಿ ಚುನಾವಣಾ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಪ್ರಶಾಂತ್ ಕಿಶೋರ್ 2022ರಲ್ಲಿ ಜನ್​ ಸೂರಜ್​ ಎಂಬ ಪಕ್ಷವನ್ನು ಕಟ್ಟಿದ್ದಾರೆ.

ಕಳೆದ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿದ್ದೇವೆ. ಜನ್ ಸೂರಜ್ ಸರ್ಕಾರ ರಚನೆಯಾದರೆ ಒಂದು ಗಂಟೆಯೊಳಗೆ ಮದ್ಯ ನಿಷೇಧವನ್ನು ಕೊನೆಗೊಳಿಸುತ್ತೇವೆ. ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಇಬ್ಬರೂ ನಾಯಕರ ಅವಧಿಯಲ್ಲಿ ಬಿಹಾರ ನಷ್ಟ ಅನುಭವಿಸಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ತೇಜಸ್ವಿ ಯಾದವ್ ಮತ್ತು ನಿತೀಶ್ ಕುಮಾರ್ ನಡುವೆ ಯಾರು ಯಾರೊಂದಿಗೆ ಕೈಜೋಡಿಸಿದ್ದಾರೆ, ಯಾರ

ಕಾಲಿಗೆ ಬಿದ್ದಿದ್ದಾರೆ ಎಂಬುದು ತಿಳಿದಿಲ್ಲ, ಎರಡೂ ಸಂದರ್ಭಗಳಲ್ಲಿ ಬಿಹಾರ ಸೋತಿದೆ, ಬಿಹಾರದ ಜನರು  ಇಬ್ಬರನ್ನೂ ಬೆಂಬಲಿಸಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು. ಬಿಹಾರದ ಜನರು 30 ವರ್ಷಗಳಿಂದ ಅವರಿಬ್ಬರನ್ನೂ ನೋಡಿದ್ದಾರೆ. ನಾವು ಅವರಿಬ್ಬರನ್ನೂ ಬಿಹಾರ ತೊರೆಯುವಂತೆ ಒತ್ತಾಯಿಸುತ್ತಿದ್ದೇವೆ ಎಂದರು.

ಮತ್ತಷ್ಟು ಓದಿ:
Bihar Reservation: ಮೀಸಲಾತಿ ಪ್ರಮಾಣವನ್ನು ಶೇ.65ಕ್ಕೆ ಏರಿಸಿದ್ದ ಬಿಹಾರ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್​

ಜನ್ ಸೂರಾಜ್ ಎಲ್ಲಾ 243 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಪಕ್ಷವು ಸರ್ಕಾರ ರಚಿಸಿದ ಒಂದು ಗಂಟೆಯೊಳಗೆ ರಾಜ್ಯದಿಂದ ಮದ್ಯ ನಿಷೇಧವನ್ನು ತೆಗೆದುಹಾಕಲಾಗುವುದು ಎಂದು ಹೇಳಿದರು.

ಲಾಲು ಪ್ರಸಾದ್ ಅವರ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಕಣ್ಣು ಮುಚ್ಚಿದೆ, ಏಕೆಂದರೆ ಅವರ ಆರ್‌ಜೆಡಿ ಹಿಂದಿನ ಯುಪಿಎ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾಗಿತ್ತು. ಆರ್‌ಜೆಡಿಗೆ ವಿಧಾನಸಭೆಯಲ್ಲಿ ಬಹುಮತ ಇಲ್ಲದಿದ್ದರೂ ಇದು ಅವರಿಗೆ ಅಧಿಕಾರದಲ್ಲಿ ಉಳಿಯಲು ಸಹಾಯ ಮಾಡಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ