ರೈಲಿನಿಂದ ಬೆಡ್ಶೀಟ್ಗಳನ್ನು ಕದ್ದು ಯುವತಿಯೊಬ್ಬಳು ರೈಲ್ವೆ ಸಿಬ್ಬಂದಿ ಬಳಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ರೈಲ್ವೆ ಸಿಬ್ಬಂದಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರ ಲಗೇಜ್‌ಗಳನ್ನು ಪರಿಶೀಲಿಸುತ್ತಿದ್ದರು. ರೈಲ್ವೆ ಬೋಗಿಗಳಲ್ಲಿರಿಸಿದ್ದ ಟವೆಲ್ಗಳು ಹಾಗೂ ಬೆಡ್ಶೀಟ್ಗಳನ್ನು ಕದ್ದಿರುವುದು ದೃಢಪಟ್ಟಿದೆ.
ತನ್ನದಷ್ಟೇ ಅಲ್ಲ ಬೋಗಿಗಳಿಂದ ಹಲವು ಬೆಡ್ಶೀಟ್ಗಳನ್ನು ಆಕೆ ಕದ್ದಿದ್ದಳು. whoismayankk ಎಂಬ ಹೆಸರಿನ ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಪ್ರಯಾಣಿಕರು ಕಂಬಳಿಗಳು ಮತ್ತು ದಿಂಬುಗಳಂತಹ ರೈಲ್ವೆ ಆಸ್ತಿಯನ್ನು ಕದಿಯುವ ಪ್ರಕರಣಗಳು ದಿನದಿಂದ ಹೆಚ್ಚುತ್ತಿವೆ. 4,600 ಕ್ಕೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಣೆ ಮಾಡಿದ್ದು, ಆನ್‌ಲೈನ್‌ನಲ್ಲಿ ವ್ಯಾಪಕ ಟೀಕೆಗಳನ್ನು ಹುಟ್ಟುಹಾಕಿತು.
In 2018, nearly 2 lakh towels, 81,000 bedsheets, and over 7,000 blankets were stolen from Indian trains.
And we wonder why we’re not as developed as China 🇨🇳? pic.twitter.com/pshYYInKYy
— Gems (@gemsofbabus_) January 17, 2025
ಆಕೆಗೆ ಕಠಿಣ ದಂಡ ವಿಧಿಸಬೇಕು ಎಂದು ಒತ್ತಾಯಿಸಿದರು. ಒಬ್ಬ ಬಳಕೆದಾರರು ಮಾತನಾಡಿ ನಾನು ಒಮ್ಮೆ ದೆಹಲಿಯಲ್ಲಿ ಪಿಜಿಯಲ್ಲಿದ್ದೆ ಆಗ ಅಲ್ಲಿನ ಮಾಲೀಕರು ಕಪಾಟಿನಲ್ಲಿ ರೈಲ್ವೆಯ ಬೆಡ್ಶೀಟ್ಗಳನ್ನು ಇರಿಸಿದ್ದರು. ಅದು ಹೇಗೆ ಇಂಥಾ ಕೆಲಸ ಮಾಡಲು ಮನಸ್ಸು ಬರುತ್ತದೆ ಎಂದು ಇನ್ನೊಬ್ಬ ಬಳಕೆದಾರರು ಕೇಳಿದ್ದಾರೆ.
ನಿದ್ದೆ ಮಾಡುತ್ತಿರುವಂತೆ ನಟಿಸಿ, ರೈಲ್ವೆ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ
ನಿದ್ದೆ ಮಾಡುತ್ತಿರುವಂತೆ ನಟಿಸಿ, ಪಕ್ಕದಲ್ಲೇ ಮಲಗಿದ್ದ ವ್ಯಕ್ತಿಯ ಪ್ಯಾಂಟ್ ಜೇಬಿನಿಂದ ಫೋನ್ ಎಗರಿಸಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದಿದೆ. ಕಳ್ಳ ಫೋನ್ ಎಗರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಫೋನ್ ಕಳೆದುಕೊಂಡ ವ್ಯಕ್ತಿಯ ದೂರಿನ ಆಧಾರದ ಮೇಲೆ ರೈಲ್ವೆ ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದು,ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ರೈಲ್ವೆ ಪೊಲೀಸರು ಕೊನೆಗೆ ಕಳ್ಳನನ್ನು ಗುರುತಿಸಿದ್ದಾರೆ. ನಿದ್ದೆಯ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ 21 ವರ್ಷದ ಅವಿನೀಶ್ ಸಿಂಗ್ ಎಂಬಾತನನ್ನು ಮಂಗಳವಾರ ಬಂಧಿಸಲಾಗಿದೆ. ತನಿಖೆಯ ವೇಳೆ ಐದು ಮೊಬೈಲ್ ಗಳನ್ನು ಕಳವು ಮಾಡಿರುವುದು ತಿಳಿದು ಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ