ಭಾರತದ 15ನೇ ರಾಷ್ಟ್ರಪತಿಯಾಗಿ (15th President of India) ದ್ರೌಪದಿ ಮುರ್ಮು (Draupadi Murmu) ಅವರು ಇಂದು (ಸೋಮವಾರ) ಬೆಳಗ್ಗೆ 10.14ಕ್ಕೆ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಮುರ್ಮು ಪಾತ್ರರಾದರು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ದೇಶವನ್ನು ಉದ್ದೇಶಿಸಿ ದ್ರೌಪದಿ ಮುರ್ಮು ತಮ್ಮ ಮೊದಲ ಭಾಷಣ ಮಾಡಿದರು. ಮುರ್ಮು ಅವರು ಹಿಂದಿಯಲ್ಲಿ ಮಾಡಿದ ಭಾಷಣದ ಇಂಗ್ಲಿಷ್ ಭಾವಾನುವಾದವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಓದಿದರು. ಸಂಸತ್ ಭವನದ ಎದುರು ರಾಷ್ಟ್ರಪತಿ ಬೆಂಗಾವಲು ಪಡೆಯಿಂದ ಮೊದಲ ಬಾರಿಗೆ ಮುರ್ಮು ಗೌರವ ವಂದನೆ ಸ್ವೀಕರಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಿಂದಿಯಲ್ಲಿ ಮಾಡಿದ ಭಾಷಣದ ಇಂಗ್ಲಿಷ್ ಭಾವಾನುವಾದವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಓದಿದರು. ರಾಷ್ಟ್ರಗೀತೆಯೊಂದಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಕ್ತಾಯವಾಯಿತು. ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಮತ್ತು ಸಂಸದರು ಅಭಿನಂದಿಸಿದರು. ಸಂಸತ್ ಭವನದ ಎದುರು ರಾಷ್ಟ್ರಪತಿ ಬೆಂಗಾವಲು ಪಡೆಯಿಂದ ಮೊದಲ ಬಾರಿಗೆ ಮುರ್ಮು ಗೌರವ ವಂದನೆ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ಸಚಿವಾಲಯ ನಿರ್ವಹಿಸುವ rashtrapatibhvn (President of India) ಟ್ವಿಟರ್ ಖಾತೆಯಲ್ಲಿ ದ್ರೌಪದಿ ಮುರ್ಮು ಅವರ ಭಾವಚಿತ್ರವನ್ನು ಅಪ್ಡೇಟ್ ಮಾಡಲಾಗಿದೆ. ಈವರೆಗೆ ಈ ಖಾತೆಯಲ್ಲಿ ರಾಮನಾಥ್ ಕೋವಿಂದ್ ಅವರ ಭಾವಚಿತ್ರವಿತ್ತು.
LIVE: Swearing-in-Ceremony of the President-elect Smt Droupadi Murmu https://t.co/34DbgoUw1H
— President of India (@rashtrapatibhvn) July 25, 2022
ಒಡಿಶಾದ ಕವಯತ್ರಿ ಭೀಮಾಬಾಯಿ ಅವರ ಕವಿತೆಯನ್ನು ದ್ರೌಪದಿ ಮುರ್ಮು ಉಲ್ಲೇಖಿಸಿದರು. ನಮ್ಮ ಜೀವನದ ಹಿತ ಮತ್ತು ಅಹಿತಗಳಿಗಿಂತಲೂ ಲೋಕಕಲ್ಯಾಣದ ಭಾವನೆ ದೊಡ್ಡದು ಮತ್ತು ಮುಖ್ಯವಾದುದು. ಇದೇ ಆಶಯದೊಂದಿಗೆ ನಾವೆಲ್ಲರೂ ಮುನ್ನಡೆಯೋಣ. ಸಮೃದ್ಧ, ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡೋಣ.
ಭಾರತದಲ್ಲಿ ಮಹಿಳಾ ಸಶಕ್ತಿಕರಣಕ್ಕಾಗಿ ಹಲವು ಪ್ರಯತ್ನಗಳು ನಡೆಯುತ್ತಿದೆ. ಮಹಿಳೆಯರು ದೇಶದ ಪ್ರಗತಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ಕೊಟ್ಟಿದ್ದಾರೆ. ನಮ್ಮ ಯುವಜನರು ದೇಶದ ಭವಿಷ್ಯವೇ ಆಗಿದ್ದಾರೆ. ದೇಶದ ರಾಷ್ಟ್ರಪತಿಯಾಗಿ ನಾನು ಇವರ ಆಶೋತ್ತರಗಳಿಗೆ ಸ್ಪಂದಿಸಲು ಯತ್ನಿಸುತ್ತೇನೆ.
ಇದು ಭಾರತದ ಅಮೃತಕಾಲವಾಗಿದೆ. ಹಲವು ಕ್ಷೇತ್ರಗಳಲ್ಲಿ ಭಾರತವು ಮುನ್ನಡೆ ದಾಖಲಿಸುತ್ತಿದೆ. ಭಾರತವು 200 ಕೋಟಿ ಡೋಸ್ ಕೊರೊನಾ ಲಸಿಕೆಗಳನ್ನು ನೀಡಿದೆ. ಭಾರತವು ಕೊರೊನಾ ಸಂಕಷ್ಟ ಸಂದರ್ಭದಲ್ಲಿ ವಿಶ್ವದ ಹಲವು ದೇಶಗಳಿಗೆ ನೆರವಾಗಿತ್ತು. ವಿಶ್ವದ ಆರ್ಥಿಕ ಸ್ಥಿರತೆಗಾಗಿ ಮತ್ತು ಪೂರೈಕೆ ಸರಪಳಿಯ ಸುಸೂತ್ರ ಕಾರ್ಯನಿರ್ವಹಣೆಗಾಗಿ ಭಾರತ ಸಕ್ರಿಯ ಪಾತ್ರ ನಿರ್ವಹಿಸುವುದನ್ನು ಮುಂದುವರಿಸಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ನುಡಿದರು.
ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ರಿಂದ ನಿಕಟಪೂರ್ವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರವರೆಗೆ ಹಲವರು ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಂವಿಧಾನಾತ್ಮಕ ಜವಾಬ್ದಾರಿಯನ್ನು ನಾನೂ ಇದೇ ರೀತಿ ನಿರ್ವಹಿಸಲು ಇಚ್ಛಿಸುತ್ತೇನೆ. ಪೂಜ್ಯ ಬಾಪು ನಮಗೆ ಸ್ವರಾಜ್ಯ, ಸ್ವಚ್ಛತೆಯ ಮಾರ್ಗ ತೋರಿಸಿದ್ದರು. ನೇತಾಜಿ, ನೆಹರು, ಚಂದ್ರಶೇಖರ್ ಆಚಾಜ್, ಭಗತ್ಸಿಂಗ್ ಸೇರಿದಂತೆ ಹಲವು ಹೋರಾಟಗಾರರು ಭಾರತದ ಸ್ವಾಭಿಮಾನ ಹೆಚ್ಚಿಸಲು ಹೋರಾಡಿದರು. ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಸೇರಿದಂತೆ ಹಲವು ವೀರ ವನಿತೆಯರು ದೇಶಕ್ಕಾಗಿ ಹೋರಾಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ನೆನಪಿಸಿಕೊಂಡರು.
ಪೂರ್ವ ಭಾರತದ ಒಂದು ಸಣ್ಣ ಆದಿವಾಸಿ ಹಳ್ಳಿಯಿಂದ ನನ್ನ ಬದುಕಿನ ಯಾತ್ರೆ ಆರಂಭವಾಯಿತು. ಇದು ನಮ್ಮ ಪ್ರಜಾಪ್ರಭುತ್ವದ ಶಕ್ತಿ. ಸಾಮಾನ್ಯ ಆದಿವಾಸಿ ಮಹಿಳೆ ಇಂದು ದೇಶದ ರಾಷ್ಟ್ರಪತಿ ಸ್ಥಾನಕ್ಕೆ ಬಂದಿದ್ದಾಳೆ. ಇದು ನನಗೆ ಸಿಕ್ಕಿದ್ದು ಎಂದು ನಾನು ಅಂದುಕೊಂಡಿಲ್ಲ. ಇದು ಭಾರತದ ಎಲ್ಲ ಬಡವರಿಗೆ ಸಿಕ್ಕ ಗೌರವ. ನಮ್ಮ ದೇಶದ ಬಡವರು ರಾಷ್ಟ್ರಪತಿಯಾಗುವ ಕನಸು ಕಾಣಬಹುದು, ಅದನ್ನು ನನಸು ಮಾಡಿಕೊಳ್ಳಬಹುದು ಎಂದು ಹೇಳಿದರು.
ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದೇಶವನ್ನು ಉದ್ದೇಶಿಸಿ ಮೊದಲ ಬಾರಿಗೆ ಭಾಷಣ ಮಾಡಿದ ದ್ರೌಪದಿ ಮುರ್ಮು, ದೇಶವು ಸ್ವಾತಂತ್ರ್ಯ ಪಡೆದು 75 ವರ್ಷವಾದ ಪವಿತ್ರ ಸಂದರ್ಭದಲ್ಲಿ ನಾನು ರಾಷ್ಟ್ರಪತಿಯಾಗಿ ಜವಾಬ್ದಾರಿ ಸ್ವೀಕರಿಸಿದ್ದೇನೆ. ಇದು ಐತಿಹಾಸಿಕ ಸಂದರ್ಭವಾಗಿದೆ. ದೇಶದ ಎಲ್ಲ ಜನರ ಪ್ರೀತಿಯೇ ನನ್ನ ಶಕ್ತಿಯಾಗಿದೆ ಎಂದು ಹೇಳಿದರು.
ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಾಂಕೇತಿಕವಾಗಿ ತಮ್ಮ ಕುರ್ಚಿ ಬಿಟ್ಟುಕೊಟ್ಟರು. ಮುಖ್ಯ ದಾಖಲೆಗಳಿಗೆ ದ್ರೌಪದಿ ಮುರ್ಮು ಅವರು ಇದೇ ಸಂದರ್ಭದಲ್ಲಿ ಸಹಿ ಹಾಕುವ ಮೂಲಕ ಅಧಿಕೃತವಾಗಿ ಭಾರತದ ಸಂವಿಧಾನ ಮತ್ತು ಸಾರ್ವಭೌಮತೆಯ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡರು.
ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಪ್ರಮಾಣ ವಚನ ಬೋಧಿಸಿದರು. ಸಂಸತ್ ಭವನದ ಸೆಂಟ್ರಲ್ಹಾಲ್ನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ವಿಧಿಗಳು ನೆರವೇರಿದವು. ಈ ವೇಳೆ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಿ ಮೋದಿ, ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು ಉಪಸ್ಥಿತರಿದ್ದರು.
ರಾಷ್ಟ್ರಪತಿ ಭವನದಿಂದ ಬೆಂಗಾವಲು ಅಶ್ವಪಡೆಯೊಂದಿಗೆ ಸಂಸತ್ ಭವನಕ್ಕೆ ಬಂದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಲೋಕಸಭೆಯ ಸ್ಪೀಕರ್ ಓಂಬಿರ್ಲಾ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸ್ವಾಗತಿಸಿದರು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಉಪಸ್ಥಿತರಿದ್ದರು.
National salute accorded to outgoing President #RamNathKovind and President-elect #DroupadiMurmu @rashtrapatibhvn pic.twitter.com/XthHUqRv2p
— SansadTV (@sansad_tv) July 25, 2022
ದೆಹಲಿಯಲ್ಲಿರುವ ರಾಷ್ಟ್ರಪತಿ ಭವನಕ್ಕೆ ಬಂದ ದ್ರೌಪದಿ ಮುರ್ಮು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾದರು. ನೂತನ ರಾಷ್ಟ್ರಪತಿ ಮುರ್ಮು ಅವರಿಗೆ ಕೋವಿಂದ್ ಶುಭ ಕೋರಿದರು.
Outgoing President #RamNathKovind extends greetings to President-elect #DroupadiMurmu at @rashtrapatibhvn. pic.twitter.com/PcNADFq4At
— DD News (@DDNewslive) July 25, 2022
1977ರಿಂದ ಈವರೆಗೆ ಜುಲೈ 25ರಂದೇ ರಾಷ್ಟ್ರಪತಿಗಳು ಪ್ರತಿಜ್ಞಾವಿಧಿ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ನಿರ್ದಿಷ್ಟವಾಗಿ ಇದೇ ದಿನಾಂಕ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಬೇಕು ಎನ್ನುವ ಲಿಖಿತ ನಿಯಮವೇನೂ ಇಲ್ಲ.
1977ರಿಂದ ಈವರೆಗೆ ಇದೇ ದಿನಾಂಕದಂದು ರಾಷ್ಟ್ರಪತಿ ಪ್ರತಿಜ್ಞಾವಿಧಿ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ.
Link: https://t.co/qo45dnxIQl#DraupadiMurmu #PresidentOfIndia #Tv9Explainer #PresidentOathCeremony
— TV9 Kannada (@tv9kannada) July 25, 2022
ಇಂದು ಮುಂಜಾನೆ 10:14ಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಚುನಾಯಿತ ರಾಷ್ಟ್ರಪತಿಗೆ ಪ್ರಮಾಣ ವಚನದ ನಮೂನೆಯನ್ನು ಹಸ್ತಾಂತರಿಸುತ್ತಾರೆ. ನಂತರ ಪ್ರಮಾಣವಚನ ಬೋಧಿಸಲಿದ್ದಾರೆ. ಈ ಪ್ರಕ್ರಿಯೆಯ ನಂತರ ರಾಷ್ಟ್ರಪತಿ ಪದವಿಯ ಕುರ್ಚಿಯನ್ನು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಿಟ್ಟುಕೊಡಲಿದ್ದಾರೆ.
ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮದ ಸಮಯ ಹಾಗೂ ಇನ್ನಿತರ ಕಾರ್ಯಕ್ರಮಗಳ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.
ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮದ ಸಮಯ ಹಾಗೂ ಇನ್ನಿತರ ಕಾರ್ಯಕ್ರಮಗಳ ವಿವರ ಇಂತಿದೆ.
Link: https://t.co/BawzrE4g87#DraupadiMurmu #DroupadiMurmu #OathTakingCeremony #PresidentOfIndia
— TV9 Kannada (@tv9kannada) July 25, 2022
ರಾಷ್ಟ್ರಪತಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮುನ್ನ ದೆಹಲಿಯ ರಾಜ್ಘಾಟ್ಗೆ ತೆರಳಿದ ದ್ರೌಪದಿ ಮುರ್ಮು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸಮಾಧಿಯ ಮೇಲೆ ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು.
LIVE: President-elect Smt Droupadi Murmu pays homage to Mahatma Gandhi at Rajghat https://t.co/72sto2wDl3
— President of India (@rashtrapatibhvn) July 25, 2022
Published On - 8:47 am, Mon, 25 July 22