Satnam Singh Sandhu: ರಾಜ್ಯಸಭಾ ಸದಸ್ಯರಾಗಿ ಸತ್ನಾಮ್ ಸಿಂಗ್ ಸಂಧು ನಾಮನಿರ್ದೇಶನ; ಯಾರಿವರು?

ರಾಷ್ಟ್ರಪತಿ ಅವರು ಸತ್ನಾಮ್ ಸಿಂಗ್ ಸಂಧು ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಸತ್ನಾಮ್ ಅವರು ತಮ್ಮನ್ನು ಖ್ಯಾತ ಶಿಕ್ಷಣತಜ್ಞ ಮತ್ತು ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ, ಅವರು ವಿವಿಧ ರೀತಿಯಲ್ಲಿ ತಳಮಟ್ಟದ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.

Satnam Singh Sandhu: ರಾಜ್ಯಸಭಾ ಸದಸ್ಯರಾಗಿ ಸತ್ನಾಮ್ ಸಿಂಗ್ ಸಂಧು ನಾಮನಿರ್ದೇಶನ; ಯಾರಿವರು?
ಸತ್ನಾಮ್ ಸಿಂಗ್ ಸಂಧು
Follow us
ರಶ್ಮಿ ಕಲ್ಲಕಟ್ಟ
|

Updated on: Jan 30, 2024 | 4:40 PM

ದೆಹಲಿ ಜನವರಿ 30: ಭಾರತದ ರಾಷ್ಟ್ರಪತಿ ಮಂಗಳವಾರ ಸತ್ನಾಮ್ ಸಿಂಗ್ ಸಂಧು (Satnam Singh Sandhu) ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ (Rajya Sabha) ನಾಮನಿರ್ದೇಶನ ಮಾಡಿದ್ದಾರೆ. ಸಂಧು ದೇಶದ ಪ್ರಮುಖ ಶಿಕ್ಷಣತಜ್ಞರಲ್ಲಿ ಒಬ್ಬರು.ಸತ್ನಾಮ್ ಸಿಂಗ್ ಸಂಧು  ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ. ಸಮುದಾಯ ಸೇವೆಯಲ್ಲಿ ಅವರ ಶ್ರೀಮಂತ ಕೆಲಸ ಮತ್ತು ಶಿಕ್ಷಣ, ನಾವೀನ್ಯತೆ ಮತ್ತು ಕಲಿಕೆಯ ಕಡೆಗೆ ಅವರ ಉತ್ಸಾಹವು ರಾಜ್ಯಸಭೆಗೆ ಶಕ್ತಿಯ ದೊಡ್ಡ ಮೂಲವಾಗಿದೆ. ಅವರಿಗೆ ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ಮೇಲ್ಮನೆಗೆ ಸಂಧು ಅವರ ನಾಮನಿರ್ದೇಶನ ಬಗ್ಗೆ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.

ಸಂಧು ಅವರ ಕಠಿಣ ಪರಿಶ್ರಮಕ್ಕಾಗಿ ಪ್ರಧಾನಿ ಶ್ಲಾಘನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಧು ಅವರ ಕಠಿಣ ಪರಿಶ್ರಮ ಮತ್ತು ತಳಮಟ್ಟದ ಜನರ ಸೇವೆಗಾಗಿ ಅವರನ್ನು ಶ್ಲಾಘಿಸಿದರು. “ರಾಷ್ಟ್ರಪತಿ ಅವರು ಸತ್ನಾಮ್ ಸಿಂಗ್ ಸಂಧು ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಸತ್ನಾಮ್ ಅವರು ತಮ್ಮನ್ನು ಖ್ಯಾತ ಶಿಕ್ಷಣತಜ್ಞ ಮತ್ತು ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ, ಅವರು ವಿವಿಧ ರೀತಿಯಲ್ಲಿ ತಳಮಟ್ಟದ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ. ಅವರು ಯಾವಾಗಲೂ ರಾಷ್ಟ್ರೀಯ ಏಕೀಕರಣಕ್ಕಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಅವರ ಸಂಸದೀಯ ಪ್ರಯಾಣಕ್ಕೆ ನಾನು ಅವರಿಗೆ ಶುಭ ಹಾರೈಸುತ್ತೇನೆ. ಅವರ ಅಭಿಪ್ರಾಯಗಳಿಂದ ರಾಜ್ಯಸಭೆಯ ಕಲಾಪಗಳು ಪುಷ್ಟೀಕರಿಸಲ್ಪಡುತ್ತವೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ ಪ್ರಧಾನಿ.

ಸತ್ನಾಮ್ ಸಿಂಗ್ ಸಂಧು ಯಾರು?

ಶಿಕ್ಷಣ ಗಳಿಸಲು ಸವಾಲುಗಳನ್ನು ಎದುರಿಸಿದ್ದ, ಕೃಷಿಕ ಸಂಧು ಅವರು ತಮ್ಮ ಜೀವನದ ಧ್ಯೇಯವನ್ನು ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಯ ಸ್ಥಾಪನೆಯಾಗಿ ಪರಿವರ್ತಿಸಿದರು. ಸಂಧು ಅವರು 2001 ರಲ್ಲಿ ಮೊಹಾಲಿಯ ಲ್ಯಾಂಡ್ರಾನ್‌ನಲ್ಲಿ ಚಂಡೀಗಢ ಗ್ರೂಪ್ ಆಫ್ ಕಾಲೇಜ್‌ಗಳಿಗೆ (CGC) ಅಡಿಪಾಯ ಹಾಕಿದರು. 2012 ರಲ್ಲಿ ಚಂಡೀಗಢ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದರೊಂದಿಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದರು. ವಿಶ್ವವಿದ್ಯಾನಿಲಯವು QS ವಿಶ್ವ ಶ್ರೇಯಾಂಕಗಳು 2023 ರಲ್ಲಿ ಏಷ್ಯಾದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ: Rajya Sabha Election: ಫೆಬ್ರವರಿ 27ರಂದು 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ

ಸಂಧು ಅವರ ಕಿರುಪರಿಚಯ

  1. ರೈತರೊಬ್ಬರ ಮಗನಾದ ಸಂಧು ಅವರು 2001 ರಲ್ಲಿ ಮೊಹಾಲಿಯ ಲ್ಯಾಂಡ್ರಾನ್‌ನಲ್ಲಿ ಚಂಡೀಗಢ ಗ್ರೂಪ್ ಆಫ್ ಕಾಲೇಜುಗಳನ್ನು (CGC) ಮತ್ತು 2012 ರಲ್ಲಿ ಚಂಡೀಗಢ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.
  2. ಜನಸಾಮಾನ್ಯರ ಆರೋಗ್ಯ ಮತ್ತು ಕ್ಷೇಮವನ್ನು ಸುಧಾರಿಸಲು ದೊಡ್ಡ ಪ್ರಮಾಣದ ಸಮುದಾಯ ಪ್ರಯತ್ನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
  3. ಸತ್ನಾಮ್ ತನ್ನ ಎರಡು ಎನ್‌ಜಿಒಗಳಾದ ಇಂಡಿಯನ್ ಮೈನಾರಿಟೀಸ್ ಫೌಂಡೇಶನ್ ಮತ್ತು ನ್ಯೂ ಇಂಡಿಯಾ ಡೆವಲಪ್‌ಮೆಂಟ್ ಫೌಂಡೇಶನ್ ಮೂಲಕ ಕೋಮು ಸಾಮರಸ್ಯವನ್ನು ಮುನ್ನಡೆಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.
  4.  ದೇಶೀಯವಾಗಿ ರಾಷ್ಟ್ರೀಯ ಏಕೀಕರಣದ ಪ್ರಯತ್ನ ಮತ್ತು ವಿದೇಶದಲ್ಲಿರುವ ಜನರಿಗೆ ವ್ಯಾಪಕವಾದ ಸಹಯೋಗವನ್ನು ಸಂಧು ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ