ರಾಷ್ಟ್ರಪತಿ ರಾಮನಾಥ ಕೋವಿಂದ್ಗೆ (President Ram Nath Kovind )ಇಂದು 76ನೇ ವರ್ಷದ ಜನ್ಮದಿನದ ಸಂಭ್ರಮ. ರಾಮನಾಥ್ ಕೋವಿಂದ್ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರಾದ ಅಮಿತ್ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಗಣ್ಯರು ಶುಭಕೋರಿದ್ದಾರೆ. ಟ್ವೀಟ್ ಮೂಲಕ ಶುಭಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿಯವರಿಗೆ ಜನ್ಮದಿನದ ಶುಭಾಶಯಗಳು. ಅವರು ತಮ್ಮ ವಿನಮ್ರ ವ್ಯಕ್ತಿತ್ವದ ಮೂಲಕ ಇಡೀ ರಾಷ್ಟ್ರವನ್ನು ಪ್ರೀತಿಸುತ್ತಿದ್ದಾರೆ. ಸಮಾಜದ ಬಡವರ್ಗ ಮತ್ತು ನಿರ್ಲಕ್ಷಿತರ ಸಬಲೀಕರಣಕ್ಕಾಗಿ ಅವರು ಪಟ್ಟ ಶ್ರಮ ಎಲ್ಲರಿಗೂ ಮಾದರಿ. ಅವರಿಗೆ ಆಯುರಾರೋಗ್ಯವನ್ನು ದೇವರು ಕರುಣಿಸಲಿ ಎಂದು ಹೇಳಿದ್ದಾರೆ.
ರಾಮನಾಥ ಕೋವಿಂದ್ ಭಾರತದ 14ನೇ ರಾಷ್ಟ್ರಪತಿಯಾಗಿ 2017ರ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಉತ್ತರಪ್ರದೇಶದ ಪರೌಂಖಾ ಎಂಬ ಪುಟ್ಟ ಹಳ್ಳಿಯಲ್ಲಿ, ರೈತನ ಮಗನಾಗಿ ಜನಿಸಿದ ರಾಮನಾಥ ಕೋವಿಂದ್ ಅವರ ರಾಜಕೀಯ ಪ್ರಯಾಣ ಅದ್ಭುತವಾಗಿದೆ. ವಕೀಲಿ ವೃತ್ತಿ ಮಾಡುತ್ತಿದ್ದ ರಾಮನಾಥ ಕೋವಿಂದ್ ನಂತರ ರಾಜ್ಯಸಭೆಗೆ ಆಯ್ಕೆಯಾದರು. ಬಳಿಕ ಬಿಹಾರ್ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು. ನಂತರ ರಾಷ್ಟ್ರಪತಿ ಹುದ್ದೆಗೆ ಏರಿದ್ದಾರೆ. ಇವರ ಬಾಲ್ಯ, ತಂದೆ-ತಾಯಿ, ರಾಜಕೀಯ ಜೀವನದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ರೈತನ ಮಗ
ರಾಮನಾಥ ಕೋವಿಂದ್ 1945ರ ಅಕ್ಟೋಬರ್ 1ರಂದು ಉತ್ತರಪ್ರದೇಶ ಕಾನ್ಪುರ ಜಿಲ್ಲೆಯ ಪರೌಂಖ್ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದಾರೆ. ಇವರ ತಂದೆ ರೈತರು. ಅದರಾಚೆಗೆ ಒಂದು ಸಣ್ಣ ಕಿರಾಣಿ ಅಂಗಡಿಯನ್ನೂ ನಡೆಸುತ್ತಿದ್ದರು. ರಾಮನಾಥ ಕೋವಿಂದ್ ಅವರು ಚಿಕ್ಕವರಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಾರೆ. ವಿದ್ಯಾಭ್ಯಾಸದಲ್ಲಿ ಮುಂದಿದ್ದ ಅವರು ಕಾನ್ಪುರ ಯೂನಿವರ್ಸಿಟಿಯಿಂದ ಕಾಮರ್ಸ್ ಮತ್ತು ಕಾನೂನು ವಿಷಯದಲ್ಲಿ ಪದವಿ ಪಡೆದರು. ಅದಾದ ಬಳಿಕ ನಾಗರಿಕ ಸೇವಾ ಪರೀಕ್ಷೆ ಬರೆಯಲು ದೆಹಲಿಗೆ ತೆರಳಿದರು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕಾನೂನು ಪ್ರ್ಯಾಕ್ಟೀಸ್ ಆಯ್ಕೆ ಮಾಡಿಕೊಂಡು 1971ರಲ್ಲಿ ಬಾರ್ ಕೌನ್ಸಿಲ್ ಸೇರ್ಪಡೆಯಾದರು. ಅಲ್ಲಿಂದ 1993ರವರೆಗೆ ಅಂದರೆ 16 ವರ್ಷ ದೆಹಲಿಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳಲ್ಲಿ ಕಾನೂನು ಅಭ್ಯಾಸ ಮಾಡಿದ್ದಾರೆ. ಅದಕ್ಕೂ ಮೊದಲು 1977ರಿಂದ 1979ರಲ್ಲಿ ದೆಹಲಿ ಹೈಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಸಲಹೆಗಾರರಾಗಿ ಕೆಲಸ ಮಾಡಿದರು.
1978ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಅಡ್ವೋಕೇಟ್ ಆನ್ ರೆಕಾರ್ಡ್ ಆದರು. ನಂತರ 1980ರಿಂದ 1993ರವರೆಗೆ ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಸ್ಥಾಯಿ ಸಲಹೆಗಾರರಾಗಿದ್ದರು. ಇನ್ನು 1977ರಲ್ಲಿ ಬಿಜೆಪಿ ಸೇರ್ಪಡೆಯಾಗುವುದಕ್ಕೂ ಮೊದಲು ಅವರು ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿಯವರ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2002ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಷಣ ಮಾಡಿದ್ದಾರೆ. ಇನ್ನೊಂದು ಮುಖ್ಯ ಸಂಗತಿಯೆಂದರೆ ಇವರು ತಮ್ಮ ಉತ್ತರಪ್ರದೇಶದಲ್ಲಿರುವ ಪೂರ್ವಜರ ಮನೆಯನ್ನು ದೇಣಿಗೆಯಾಯಿ ಸ್ಥಳೀಯ ಆಡಳಿತಕ್ಕೆ ನೀಡಿದ್ದಾರೆ. ಅದೀಗ ಮದುವೆ ಛತ್ರವಾಗಿ ಬದಲಾವಣೆಗೊಂಡಿದೆ.
ಪ್ರಧಾನಿ ಸೇರಿ ಗಣ್ಯರ ವಿಶ್
ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹುಟ್ಟುಹಬ್ಬಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ ಮಾಡಿದ್ದಾರೆ.
Birthday greetings to Rashtrapati Ji. Due to his humble personality, he has endeared himself to the entire nation. His focus on empowering the poor and marginalised sections of society is exemplary. May he lead a long and healthy life. @rashtrapatibhvn
— Narendra Modi (@narendramodi) October 1, 2021
राष्ट्रपति श्री राम नाथ कोविंद जी को जन्मदिन की शुभकामनाएं।
देश के हर वर्ग के कल्याण और समाज में समता व समरसता के प्रति आपकी प्रतिबद्धता प्रेरणीय है। आपके ज्ञान व अनुभव से देश को निरंतर लाभ मिला है। मैं ईश्वर से आपके उत्तम स्वास्थ्य व दीर्घायु की कामना करता हूँ।@rashtrapatibhvn
— Amit Shah (@AmitShah) October 1, 2021
Warm wishes to the President of India, Shri Ramnath Kovind ji on his birthday. He is admired by everyone for his wisdom, intellect and contribution to public life. The nation has been benefited from his wide experience. Praying for his long and healthy life. @rashtrapatibhvn
— Rajnath Singh (@rajnathsingh) October 1, 2021
जन सरोकारों के प्रति प्रतिबद्ध, भारत के प्रथम नागरिक माननीय राष्ट्रपति श्री राम नाथ कोविन्द जी को जन्मदिवस की हार्दिक बधाई एवं शुभकामनाएं।
प्रभु श्री राम से आपके उत्तम स्वास्थ्य एवं समृद्ध व सुदीर्घ जीवन की प्रार्थना करता हूं।
— Yogi Adityanath (@myogiadityanath) September 30, 2021
ಇದನ್ನೂ ಓದಿ: ಉಡುಪಿ: ಗೋ ಹತ್ಯೆ ಖಂಡಿಸಿ ಪ್ರತಿಭಟನೆ; ಗಂಗೊಳ್ಳಿಯಲ್ಲಿ ಸ್ವಯಂಪ್ರೇರಿತವಾಗಿ ಸಂಪೂರ್ಣ ಬಂದ್
ಏರ್ಟೆಲ್ –ಜಿಯೋಗೆ ಶುರುವಾಗಿದೆ ನಡುಕ: ಬೆಜೋಸ್, ಎಲಾನ್ ಮಸ್ಕ್ರಿಂದ ಭಾರತದಲ್ಲಿ ಸ್ಯಾಟ್ ಲೈಟ್ ಇಂಟರ್ನೆಟ್ ಸಂಪರ್ಕ
Published On - 11:03 am, Fri, 1 October 21