Padma Awards 2022: ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​​ರಿಂದ ಪ್ರಶಸ್ತಿ ಪ್ರದಾನ

| Updated By: ರಶ್ಮಿ ಕಲ್ಲಕಟ್ಟ

Updated on: Mar 21, 2022 | 7:12 PM

ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ  ರಾಮ್‌ನಾಥ ಕೋವಿಂದ್ ಅವರು 2022ರ ಎರಡು ಪದ್ಮವಿಭೂಷಣ, ಎಂಟು ಪದ್ಮಭೂಷಣ ಮತ್ತು ಐವತ್ತನಾಲ್ಕು ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.

Padma Awards 2022: ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​​ರಿಂದ ಪ್ರಶಸ್ತಿ ಪ್ರದಾನ
ಪದ್ಮ ಪ್ರಶಸ್ತಿ ಪ್ರದಾನ
Follow us on

ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ (Rashtrapati Bhavan)  ಅವರು ಪುರಸ್ಕೃತರಿಗೆ ಪದ್ಮ ಪ್ರಶಸ್ತಿಗಳನ್ನು(Padma awards) ಪ್ರದಾನ ಮಾಡಿದರು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಮತ್ತು ಸೆರಮ್  ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಧ್ಯಕ್ಷ ಸೈರಸ್ ಪೂನವಾಲಾ ಅವರಿಗೆ ಸಾರ್ವಜನಿಕ ವ್ಯವಹಾರಗಳು ಮತ್ತು ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಗಳಲ್ಲಿನ ಸಾಧನೆಗೆ ಪ್ರಶಸ್ತಿ ನೀಡಲಾಗಿದೆ. ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ದೇವೇಂದ್ರ ಝಝಾರಿಯಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಗೀತಾ ಪ್ರೆಸ್‌ನ ದಿವಂಗತ ಅಧ್ಯಕ್ಷ ರಾಧೇಯ ಶ್ಯಾಮ್ ಅವರಿಗ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿ ನೀಡಿದ್ದು,ಅವರ ಮಗ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜನರಲ್ ಬಿಪಿನ್ ರಾವತ್ (ಮರಣೋತ್ತರ) ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಗುರ್ಮೀತ್ ಬಾವಾ ಅವರ ಪುತ್ರಿ ಕಲಾ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು (ಮರಣೋತ್ತರ) ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ  ರಾಮ್‌ನಾಥ ಕೋವಿಂದ್ ಅವರು 2022ರ ಎರಡು ಪದ್ಮವಿಭೂಷಣ, ಎಂಟು ಪದ್ಮಭೂಷಣ ಮತ್ತು ಐವತ್ತನಾಲ್ಕು ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.


ಇಂದಿನ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಮುಖ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ-  ಶ್ರೀ ರಾಧೇ ಶ್ಯಾಮ್ ಮತ್ತು ಜನರಲ್ ಬಿಪಿನ್ ರಾವತ್ (ಮರಣೋತ್ತರ).  ಗುಲಾಂ ನಬಿ ಆಜಾದ್, ಶ್ರೀಮತಿ. ಗುರ್ಮೀತ್ ಬಾವಾ (ಮರಣೋತ್ತರ),  ಎನ್. ಚಂದ್ರಶೇಖರನ್,  ದೇವೇಂದ್ರ ಝಜಾರಿಯಾ,  ರಶೀದ್ ಖಾನ್,  ರಾಜೀವ್ ಮೆಹ್ರಿಷಿ, ಡಾ. ಸೈರಸ್ ಪೂನವಾಲಾ ಮತ್ತು ಸಚ್ಚಿದಾನಂದ ಸ್ವಾಮಿ ಅವರು ಪದ್ಮಭೂಷಣ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭ-2 ನ್ನು ಮಾರ್ಚ್ 28 ರಂದು ಆಯೋಜಿಸಲಾಗಿದೆ.

ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಅವುಗಳೆಂದರೆ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ. ಈ ಪ್ರಶಸ್ತಿಗಳನ್ನು ಕಲೆ, ಸಮಾಜ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ, ಇತ್ಯಾದಿ ಚಟುವಟಿಕೆಗಳ ವಿವಿಧ ವಿಭಾಗಗಳು/ ಕ್ಷೇತ್ರಗಳಲ್ಲಿ ನೀಡಲಾಗುತ್ತದೆ. ಅತ್ಯುತ್ತಮ ಮತ್ತು ವಿಶಿಷ್ಟ ಸೇವೆಗಾಗಿ ‘ಪದ್ಮವಿಭೂಷಣ’; ಉನ್ನತ ಮಟ್ಟದ ವಿಶಿಷ್ಟ ಸೇವೆಗಾಗಿ ‘ಪದ್ಮಭೂಷಣ’ ಮತ್ತು ಯಾವುದೇ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಗಾಗಿ ‘ಪದ್ಮಶ್ರೀ’ ನೀಡಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ.

ಈ ವರ್ಷ ಎರಡು ಜೋಡಿ ಸಾಧನೆಗಳು ಸೇರಿದಂತೆ ಒಟ್ಟು 128 ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ (ಇಬ್ಬರು ವ್ಯಕ್ತಿಗಳಿಗೆ ನೀಡಲಾಗಿದ್ದರೂ, ಅದನ್ನು ಒಂದು ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ). ಪ್ರಶಸ್ತಿ ಪುರಸ್ಕೃತರ ಪಟ್ಟಿಯು ನಾಲ್ಕು ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 34 ಮಹಿಳೆಯರು ಮತ್ತು ಪಟ್ಟಿಯು ವಿದೇಶಿ/ಎನ್‌ಆರ್‌ಐ/ಪಿಐಒ/ಒಸಿಐ ವರ್ಗದಿಂದ 10 ವ್ಯಕ್ತಿಗಳು ಮತ್ತು 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರನ್ನು ಒಳಗೊಂಡಿದೆ.

ಇದನ್ನೂ ಓದಿ: Pushkar Singh Dhami ಉತ್ತರಾಖಂಡ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಪುಷ್ಕರ್ ಸಿಂಗ್ ಧಾಮಿ