ಸೇನಾ ದಿನಾಚರಣೆ ಪ್ರಯುಕ್ತ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ..

ಜನವರಿ 15, ಸೇನಾ ದಿನಾಚರಣೆ ಈ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಸೈನಿಕರು, ಸೈನಿಕರ ಕುಟುಂಬಸ್ಥರಿಗೆ ಶುಭಕೋರಿದ್ದಾರೆ.

ಸೇನಾ ದಿನಾಚರಣೆ ಪ್ರಯುಕ್ತ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ..
ಸೇನಾ ದಿನಾಚರಣೆ

Updated on: Jan 15, 2021 | 9:22 AM

ದೆಹಲಿ: ದೇಶದ ರಕ್ಷಣೆಗಾಗಿ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿರುವ ಯೋಧರನ್ನು ನೆನಪು ಮಾಡಿಕೊಳ್ಳುವ ದಿನವಿಂದು. ಜನವರಿ 15, ಸೇನಾ ದಿನಾಚರಣೆ ಈ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಸೈನಿಕರು, ಸೈನಿಕರ ಕುಟುಂಬಸ್ಥರಿಗೆ ಶುಭಕೋರಿದ್ದಾರೆ.

ಸೇನಾ ದಿನಾಚರಣೆ ಪ್ರಯುಕ್ತ ದೇಶದ ನಾಯಕರು ಯೋಧರನ್ನು ಸ್ಮರಿಸಿದ್ದಾರೆ. ಅವರ ತ್ಯಾಗ, ಬಲಿದಾನಗಳನ್ನು ಕೊಂಡಾಡಿದ್ದಾರೆ. ನಮ್ಮ ಸೇನೆ ಪ್ರಬಲವಾಗಿದೆ, ಧೈರ್ಯಶಾಲಿಯಾಗಿದೆ. ಇದು ಯಾವಾಗಲೂ ದೇಶವನ್ನ ಹೆಮ್ಮೆ ಪಡುವಂತೆ ಮಾಡಿದೆ. ದೇಶದ ಜನರ ಪರವಾಗಿ ಭಾರತೀಯ ಸೇನೆಗೆ ನಮಸ್ಕರಿಸುವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸೇನಾ ದಿನಾಚರಣೆ ಶುಭಕೋರಿದ್ದಾರೆ. ಹಾಗೂ ಸೈನಿಕರು ಮತ್ತು ಅವರ ಕುಟುಂಬಸ್ಥರಿಗೆ ಶುಭಾಶಯ ತಿಳಿಸಿದ್ದಾರೆ.

ಸೇನಾ ದಿನದ ಅಂಗವಾಗಿ ಭಾರತೀಯ ಸೇನೆಯ ಪರಾಕ್ರಮಿ ಮಹಿಳಾ ಮತ್ತು ಪುರುಷ ಸಿಬ್ಬಂದಿಗೆ ಅಭಿನಂದನೆಗಳು. ದೇಶದ ವಿಷಯ ಬಂದಾಗ ತಮ್ಮ ಜೀವವನ್ನು ಬದಿಗೊತ್ತಿ ತ್ಯಾಗ, ಬಲಿದಾನ ಮಾಡಿದವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳೋಣ. ಭಾರತ ಯಾವಾಗಲೂ ಸೈನಿಕರ ಧೈರ್ಯ, ಬದ್ಧತೆ, ನಿವೃತ್ತ ಯೋಧರು ಮತ್ತು ಅವರ ಕುಟುಂಬದ ಪರವಾಗಿರುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭಕೋರಿದ್ದಾರೆ.

ಚೀನಾ ಗಡಿಗೆ 15 ದಿನಗಳ ತೀವ್ರ ಸಂಘರ್ಷಕ್ಕೆ ಬೇಕಾಗುವಷ್ಟು ಯುದ್ಧೋಪಕರಣ, ಶಸ್ತ್ರಾಸ್ತ್ರ ರವಾನೆ