Narendra Modi: ರಾಷ್ಟ್ರೀಯ ಕುಡಗೋಲು-ಕಣ ರಕ್ತಹೀನತೆ ನಿವಾರಣೆ ಮಿಷನ್‌ಗೆ ಪ್ರಧಾನಿ ಚಾಲನೆ, ಪಕಾರಿಯಾ ಗ್ರಾಮಕ್ಕೆ ಭೇಟಿ

|

Updated on: Jul 01, 2023 | 2:26 PM

National Sickle Cell Anemia: ಪ್ರಧಾನಿ ಮೋದಿ ಅವರು ಇಂದು (ಜುಲೈ 1) ಕುಡಗೋಲು ಕಣ ರಕ್ತಹೀನತೆ ನಿರ್ಮೂಲನೆ (Sickle cell anemia) ಮಿಷನ್​​ನ್ನು ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಉದ್ಘಾಟನೆ ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಮೋದಿ ಅವರು ಕುಡಗೋಲು ಕೋಶ ಜೆನೆಟಿಕ್ ಸ್ಟೇಟಸ್ ಕಾರ್ಡ್‌ಗಳನ್ನು ವಿತರಿಸಲಿದ್ದಾರೆ

Narendra Modi: ರಾಷ್ಟ್ರೀಯ ಕುಡಗೋಲು-ಕಣ ರಕ್ತಹೀನತೆ ನಿವಾರಣೆ ಮಿಷನ್‌ಗೆ ಪ್ರಧಾನಿ ಚಾಲನೆ, ಪಕಾರಿಯಾ ಗ್ರಾಮಕ್ಕೆ ಭೇಟಿ
ಪ್ರಧಾನಿ ಮೋದಿ
Follow us on

ಭೋಪಾಲ್: ಪ್ರಧಾನಿ ಮೋದಿ (Narendra Modi) ಅವರು ಇಂದು (ಜುಲೈ 1) ಕುಡಗೋಲು-ಕಣ ರಕ್ತಹೀನತೆ ನಿರ್ಮೂಲನೆ (Sickle cell anemia) ಮಿಷನ್​​ನ್ನು ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಉದ್ಘಾಟನೆ ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಮೋದಿ ಅವರು ಕುಡಗೋಲು ಕೋಶ ಜೆನೆಟಿಕ್ ಸ್ಟೇಟಸ್ ಕಾರ್ಡ್‌ಗಳನ್ನು ವಿತರಿಸಲಿದ್ದಾರೆ ಎಂದು ಶುಕ್ರವಾರ ಹೊರಡಿಸಿದ ಅಧಿಕೃತ ಪ್ರಕಟಣೆ ತಿಳಿಸಿದೆ. ವಿಶೇಷವಾಗಿ ಬುಡಕಟ್ಟು ಜನಸಂಖ್ಯೆಯಲ್ಲಿ ಕುಡಗೋಲು ಕಣ ಕಾಯಿಲೆಯಿಂದ ಬಳಲುತ್ತಿದ್ದು ತುರ್ತು ಆರೋಗ್ಯ ಸವಾಲುಗಳನ್ನು ಪರಿಹರಿಸುವುದು ಈ ಮಿಷನ್‌ ಪ್ರಮುಖ ಉದ್ದೇಶವಾಗಿದೆ.

ಕುಡಗೋಲು-ಕಣ ರಕ್ತಹೀನತೆಯು (ಸಿಕಲ್‌ ಸೆಲ್‌ ಅನೀಮಿಯಾ) ಹಿಮೋಗ್ಲೋಬಿನ್ S ಎಂಬ ದೋಷಯುಕ್ತ ಜೀನ್‌ನಿಂದ ಉಂಟಾಗುತ್ತದೆ, ಇದು ಕೆಂಪು ರಕ್ತ ಕಣಗಳು ಗಟ್ಟಿಯಾಗಲು ಮತ್ತು ಕುಡಗೋಲು ಆಕಾರವನ್ನು ಹೆಚ್ಚು ಮಾಡುತ್ತದೆ. ರಕ್ತದ ಹರಿವನ್ನು ತಡೆಯುತ್ತದೆ ಮತ್ತು ಅಂಗ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ.

ಈ ಯೋಜನೆಯನ್ನು 2047ರ ವೇಳೆಗೆ ಈ ಕುಡಗೋಲು ಕೋಶ ರೋಗವನ್ನು ತೊಡೆದುಹಾಕಲು ಕೇಂದ್ರದ ಪ್ರಯತ್ನವನ್ನು ಕೇಂದ್ರ ಮಾಡುತ್ತಿದೆ. ಇದೀಗ ಇದು ಈ ರೋಗವನ್ನು ನಿರ್ಮೂನೆ ಮಾಡಲು ಪ್ರಮುಖ ಹಂತವಾಗಿದೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಅಸ್ಸಾಂ, ಉತ್ತರ ಪ್ರದೇಶ, ಕೇರಳ, ಬಿಹಾರ ಮತ್ತು ಉತ್ತರಾಖಂಡ್ 17 ಹೆಚ್ಚು ಕೇಂದ್ರೀಕೃತ ರಾಜ್ಯಗಳಲ್ಲಿಯೂ ಈ ಕಾರ್ಯಕ್ರಮವನ್ನು ತರಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ: National Sickle Cell Anemia Elimination Program: 2047ರ ವೇಳೆಗೆ ಸಿಕಲ್‌ ಸೆಲ್‌ ಅನೀಮಿಯಾ ಮುಕ್ತವಾಗಬೇಕು ಭಾರತ, ಪ್ರಧಾನಿ ಮೋದಿ ಇಂದು ಆರೋಗ್ಯ ಮಿಷನ್​​ಗೆ ಚಾಲನೆ

ಮಧ್ಯಪ್ರದೇಶದಲ್ಲಿ ಸರಿಸುಮಾರು 3.57 ಕೋಟಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಕಾರ್ಡ್‌ಗಳ ವಿತರಣೆಯನ್ನು ಮೋದಿ ಮಾಡಿದ್ದಾರೆ. ಆಯುಷ್ಮಾನ್ ಕಾರ್ಡ್ ವಿತರಣಾ ಅಭಿಯಾನದ ಮೂಲಕ 100% ಆರೋಗ್ಯ ಸಾಧಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಪ್ರತಿಯೊಬ್ಬ ಫಲಾನುಭವಿಯನ್ನು ತಲುಪುವ ಪ್ರಧಾನಮಂತ್ರಿಯವರ ದೃಷ್ಟಿಯನ್ನು ಸಾಕಾರಗೊಳಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಕೇಂದ್ರ ಹೇಳಿದೆ.

ಜೊತೆಗೆ, ಪ್ರಧಾನಮಂತ್ರಿ ಅವರು ಜಿಲ್ಲೆಯ ಪಕಾರಿಯಾ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಬುಡಕಟ್ಟು ಮುಖಂಡರು, ಸ್ವ-ಸಹಾಯ ಗುಂಪುಗಳು, PESA (ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ ಕಾಯ್ದೆ) ಸಮಿತಿ ನಾಯಕರು ಮತ್ತು ಗ್ರಾಮ ಮಟ್ಟದ ಫುಟ್ಬಾಲ್ ಕ್ಲಬ್‌ಗಳ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Sat, 1 July 23