ಗಣಿ ಖಾತೆ ಮಾಡಿದ ಸಾಧನೆಯನ್ನು ಪ್ರಶಂಸಿಸಿದ ಪ್ರಧಾನಿ ಮೋದಿ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 08, 2022 | 8:00 PM

ಕಲ್ಲಿದ್ದಲು ಸಚಿವಾಲಯದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ರಾಷ್ಟ್ರಪತಿಗಳ ಬಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಕಲ್ಲಿದ್ದಲು ಸಚಿವಾಲಯದಲ್ಲಿ ಆಗಿರುವ ಪಾದರ್ಶಕ ಆಡಳಿತ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ಗಣಿ ಖಾತೆ ಮಾಡಿದ ಸಾಧನೆಯನ್ನು ಪ್ರಶಂಸಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ ಮತ್ತು ಪ್ರಲ್ಹಾದ್ ಜೋಶಿ
Follow us on

ದೇಶದ ಗಣಿ (mining reforms) ಹಂಚಿಕೆ ವಿಚಾರದಲ್ಲಿ ಕೇಂದ್ರ ಮತ್ತು ಹಲವು ರಾಜ್ಯ ಸರ್ಕಾರಗಳು ತಂದ ಬದಲಾವಣೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಕ್ರಮಗಳಿಂದ ರಾಜ್ಯ ಸರ್ಕಾರಗಳಿಗೆ ಹೆಚ್ಚು ಆದಾಯ ಬರತೊಡಗಿದೆ. ಇದು ಗಣಿ ಮತ್ತು ನೈಸರ್ಗಿಕ ಖನಿಜ ನಿರ್ವಹಣೆಯಲ್ಲಿ ನಮ್ಮ ಸರ್ಕಾರ ನಿರ್ವಹಿಸಿದ ಮಹತ್ತರ ಪಾತ್ರ ಎಂದು ಹೇಳಿದರು. ರಾಷ್ಟ್ರಪತಿಗಳ ಭಾಷಣದ ಮೇಲೆ ನಡೆದ ಚರ್ಚೆಗೆ ಪ್ರಧಾನಿಯವರು ಇಂದು ರಾಜ್ಯಸಭೆಯಲ್ಲಿ ಉತ್ತರಿಸಿದರು. ಕಲ್ಲಿದ್ದಲು ಸಚಿವಾಲಯದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ರಾಷ್ಟ್ರಪತಿಗಳ ಬಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಕಲ್ಲಿದ್ದಲು ಸಚಿವಾಲಯದಲ್ಲಿ ಆಗಿರುವ ಪಾದರ್ಶಕ ಆಡಳಿತ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ. ಹಿಂದೆ ಈ ದೇಶದ ಪ್ರಾಕೃತಿಕ ಸಂಪತ್ತು ಕೇವಲ ಕೆಲವರ ಬೊಕ್ಕಸ ತುಂಬುವುದಕ್ಕೆ ಬಳಕೆಯಾಗುತ್ತಿತ್ತು. ಆದ್ರೆ ಈಗ ಹಾಗಾಗಿಲ್ಲ. ಕಲ್ಲಿದ್ದಲು ಹರಾಜು ಪ್ರಕ್ರಿಯೆಯಲ್ಲಿ ಬದಲಾವಣೆಗಳಾಗಿವೆ. ಪಾರದರ್ಶಕವಾಗಿ ಕಲ್ಲಿದ್ದಲು ಹರಾಜು ನಡೆಯುತ್ತಿದೆ‌. ನಮ್ಮ ಕಲ್ಲಿದ್ದಲು ಗಣಿಗಾರಿಕೆ ಸುಧಾರಣೆಯಿಂದ ಲಾಭದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿವೆ. ರೂ 14000 ಕೋಟಿಯಿಂದ ರೂ. 35000 ಕೋಟಿಗೆ ಏರಿಕೆಯಾಗಿದೆ ಎಂದು ಪ್ರಧಾನಿ ಮೋದಿ ಉತ್ತರನೀಡಿದ್ದಾರೆ.

ಈ ತಿದ್ದುಪಡಿಯು ಆತ್ಮನಿರ್ಭರ ಭಾರತ ಪರಿಕಲ್ಪನೆ ಅಡಿಯಲ್ಲಿ ಗಣಿಗಾರಿಕೆ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರಲು ಮತ್ತಷ್ಟು ಶಕ್ತಿ ನೀಡಲಿದ್ದು, ಜೊತೆಗೆ, ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ. ಗಣಿಗಾರಿಕೆಗೆ ಅವಕಾಶವಿರುವ ರಾಜ್ಯಗಳಲ್ಲಿ ಹೆಚ್ಚೆಚ್ಚು ಉದ್ಯೋಗಾವಕಾಶ ತೆರೆದುಕೊಳ್ಳುವಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಪ್ರಲ್ಹಾದ್ ಜೋಶಿ ಅವರು ಮಹತ್ತರ ಕಾರ್ಯನಿರ್ವಹಿಸಿದ್ದಾರೆ.

ಒಂದು ಕಾಲದಲ್ಲಿ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ದೇಶದ ನಿರ್ದಿಷ್ಟ ಜನರ ಖಜಾನೆ ತುಂಬಲು ಬಳಸಲಾಗುತ್ತಿತ್ತು. ನಾವು ಆ ಕಷ್ಟದ ದಿನಗಳನ್ನು ನೋಡಿದ್ದೇವೆ. ಈ ವಿಷಯವು ಚರ್ಚೆಯ ಭಾಗ ಕೂಡವಾಗಿತ್ತು. ಕಲ್ಲಿದ್ದಲು ಮತ್ತು ಗಣಿಗಳಲ್ಲಿ ಬಿಜೆಪಿ ತಂದ ಸುಧಾರಣೆಗಳೊಂದಿಗೆ, ಈಗ ನೈಸರ್ಗಿಕ ಸಂಪನ್ಮೂಲಗಳು ರಾಜ್ಯಗಳ ಆರ್ಥಿಕತೆಯನ್ನು ಹೆಚ್ಚಿಸಿವೆ. ಗಣಿಗಾರಿಕೆಯಲ್ಲಿನ ಪಾರದರ್ಶಕತೆ ರಾಜ್ಯಗಳಿಗೆ ಮಾತ್ರವಲ್ಲದೆ ದೇಶಕ್ಕೂ ಲಾಭ ತಂದಿದೆ.

ಇನ್ನೂ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಗಣಿಗಾರಿಕೆ ಕ್ಷೇತ್ರದಲ್ಲಿ ಕೇಂದ್ರದ ದೃಷ್ಟಿಕೋನ ಸೆಳೆಯುವಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸಂಸತ್ತಿನಲ್ಲಿ ಸಹಕಾರಿ ಫೆಡರಲಿಸಂ ಕುರಿತು ಮಾತನಾಡಿದ ಮೋದಿ, ಬಿಜು ಜನತಾ ದಳ (ಬಿಜೆಡಿ) ನೇತೃತ್ವದ ಒಡಿಶಾ ಸರ್ಕಾರವು ರಾಜ್ಯದಲ್ಲಿ ಗಣಿಗಾರಿಕೆ ಸುಧಾರಣೆಗಳನ್ನು ಪರಿಚಯಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ರಾಜ್ಯಸಭೆಯಲ್ಲಿ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಿದ ಅವರು, ಕಲ್ಲಿದ್ದಲು ಗಣಿಗಾರಿಕೆಯಲ್ಲಿನ ಸುಧಾರಣೆಗಳು ಲಾಭದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿವೆ. ರೂ.14,000 ಕೋಟಿಯಿಂದ ರೂ. 35,000 ಕೋಟಿ. ರಾಜ್ಯಗಳು ಇದರ ಲಾಭ ಪಡೆದಿವೆ ಮತ್ತು ಒಡಿಶಾ ಈ ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದು ಅವರು ಸಿಎಂ ಅವರನ್ನು ಶ್ಲಾಘಿಸಿದರು.

ಇದನ್ನೂ ಓದಿ;

Ramanujacharya Sahasrabdi: ರಾಮಾನುಜಾಚಾರ್ಯರ ಬೋಧನೆಗಳು ಎಲ್ಲರಿಗೂ ಆದರ್ಶ: ಅಮಿತ್ ಶಾ

Published On - 7:46 pm, Tue, 8 February 22