Mann ki Baat: ಇಂದು ಪ್ರಧಾನಿ ಮೋದಿ ಮನ್​ ಕೀ ಬಾತ್​; ಎಲ್ಲೆಲ್ಲಿ ವೀಕ್ಷಿಸಬಹುದು? ಪ್ರಸಾರದ ಸಮಯ ಯಾವುದು? ಇಲ್ಲಿದೆ ಮಾಹಿತಿ

| Updated By: Lakshmi Hegde

Updated on: Sep 26, 2021 | 9:04 AM

PM Narendra Modi: ಕಳೆದ ತಿಂಗಳಿನ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಲಿಂಪಿಕ್ಸ್​ ಪದಕ ವಿಜೇತರನ್ನು ಶ್ಲಾಘಿಸಿದ್ದರು. ಕ್ರೀಡೆಗಳ ಬಗೆಗಿನ ಉತ್ಸಾಹ , ಹಾಕಿ ಮಾಂತ್ರಿಕ ಧ್ಯಾನ್​ ಚಾಂದ್​ರಿಗೆ ಸಲ್ಲಿಸುವ ಗೌರವ ಎಂದು ಹೇಳಿದ್ದರು.

Mann ki Baat: ಇಂದು ಪ್ರಧಾನಿ ಮೋದಿ ಮನ್​ ಕೀ ಬಾತ್​; ಎಲ್ಲೆಲ್ಲಿ ವೀಕ್ಷಿಸಬಹುದು? ಪ್ರಸಾರದ ಸಮಯ ಯಾವುದು? ಇಲ್ಲಿದೆ ಮಾಹಿತಿ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11ಗಂಟೆಗೆ ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್(Mann ki Baat)​ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಮನ್​​ ಕೀ ಬಾತ್​ 81ನೇ ಆವೃತ್ತಿಯಾಗಿದೆ. ಮನ್​ ಕೀ ಬಾತ್​​ನ್ನು ಆಲ್​ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಎಲ್ಲ ನೆಟ್​​ವರ್ಕ್​​​ನಲ್ಲೂ ಪ್ರಸಾರ ಮಾಡಲಾಗುತ್ತದೆ. ಹಾಗೇ, ಆಲ್​ ಇಂಡಿಯಾ ರೇಡಿಯೋದ ವೆಬ್​ಸೈಟ್​ www.newsonair.com ಮತ್ತು ಮೊಬೈಲ್​ ಆ್ಯಪ್​​  newsonair ನಲ್ಲಿ ಕೂಡ ವೀಕ್ಷಿಸಬಹುದಾಗಿದೆ. ಹಾಗೇ, ಆಲ್​ ಇಂಡಿಯಾ ರೇಡಿಯೋ, ಡಿಡಿ ನ್ಯೂಸ್​, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್​ ಚಾನಲ್​ಗಳಲ್ಲೂ ಮನ್​ ಕಿ ಬಾತ್​ ನೇರಪ್ರಸಾರಗೊಳ್ಳಲಿದೆ. ಇನ್ನು ಇಂದು ರಾತ್ರಿ 8ರ ಹೊತ್ತಿಗೆ ಆಲ್​ ಇಂಡಿಯಾ ರೇಡಿಯೋದಲ್ಲಿ ಮನ್​ ಕೀ ಬಾತ್​ನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಮರುಪ್ರಸಾರ ಮಾಡಲಾಗುತ್ತದೆ. 

ಕಳೆದ ತಿಂಗಳಿನ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಲಿಂಪಿಕ್ಸ್​ ಪದಕ ವಿಜೇತರನ್ನು ಶ್ಲಾಘಿಸಿದ್ದರು. ಕ್ರೀಡೆಗಳ ಬಗೆಗಿನ ಉತ್ಸಾಹ , ಹಾಕಿ ಮಾಂತ್ರಿಕ ಧ್ಯಾನ್​ ಚಾಂದ್​ರಿಗೆ ಸಲ್ಲಿಸುವ ಗೌರವ ಎಂದು ಹೇಳಿದ್ದರು. ಒಲಿಂಪಿಕ್ಸ್​​ನಲ್ಲಿ 40 ವರ್ಷಗಳ ನಂತರ ನಾವು ಹಾಕಿಯಲ್ಲಿ ಪದಕ ಗೆದ್ದಿದ್ದೇವೆ. ಮೇಜರ್ ಧ್ಯಾನ್​ಚಂದ್​ ಅವರು ಅದೆಷ್ಟು ಖುಷಿಯಾಗಿರಬಹುದು ಎಂದು ಕಲ್ಪಿಸಿಕೊಳ್ಳಿ ಎಂದು ಹೇಳಿದ್ದರು. ಹಾಗೇ, ಈಗಿನ ಪೀಳಿಗೆ ಬದಲಾಗುತ್ತಿದೆ. ಸದಾ ಹೊಸದಕ್ಕೆ ತೆರೆದುಕೊಳ್ಳುತ್ತಿದೆ. ಯುವಜನರು ರಿಸ್ಕ್​ ತೆಗೆದುಕೊಳ್ಳಲು ಮುಂದಡಿ ಇಡುತ್ತಿದ್ದಾರೆ. ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿಕೊಳ್ಳುತ್ತಿದ್ದಾರೆ. ಹೊಸಹೊಸ ವಲಯಗಳಲ್ಲಿ ಹೆಜ್ಜೆ ಇಡುತ್ತಿದ್ದಾರೆ ಎಂದೂ ಹೇಳಿದ್ದರು.

ಇದನ್ನೂ ಓದಿ: Vastu Tips: ಧನ ಲಕ್ಷ್ಮೀ ಖುಲಾಯಿಸಬೇಕು ಅಂದರೆ ಮನೆಯಲ್ಲಿ ತಿಜೋರಿ ಇಡುವುದು ಎಲ್ಲಿ ಎಂಬುದನ್ನು ತಿಳಿದುಕೊಳ್ಳೀ

ಒಂದೇ ಒಂದು ಫೋಟೋದಿಂದ ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​ ಪ್ರೇಮ್​​ ಕಹಾನಿ ಬಯಲು; ಇಬ್ಬರ ಕಥೆ ಮುಂದೇನು?