ವಾರಣಾಸಿ: ಕೊವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂವಾದ ನಡೆಸಿದರು. ಕೊವಿಡ್ -19 ವಿರುದ್ಧ ಎಲ್ಲಾ ದಾದಿಯರು, ವೈದ್ಯರು, ಆಂಬ್ಯುಲೆನ್ಸ್ ಚಾಲಕರು ಮತ್ತು ವಾರ್ಡ್‌ಬಾಯ್‌ಗಳು ಜತೆಯಾಗಿ ಕಾರ್ಯನಿರ್ವಹಿಸಿರುವುದು ಎಂಬುದು ಶ್ಲಾಘನೀಯ ಎಂದು ಮೋದಿ ಹೇಳಿದರು.
ಕಡಿಮೆ ಸಮಯದಲ್ಲಿ ಪಂಡಿತ್ ರಾಜನ್ ಮಿಶ್ರಾ ಕೊವಿಡ್ ಆಸ್ಪತ್ರೆಯನ್ನು ಸಜ್ಜುಗೊಳಿಸುವುದರ ಮೂಲಕ ಮತ್ತು ನಗರದಲ್ಲಿ ಆಮ್ಲಜನಕ ಹಾಸಿಗೆಗಳು ಮತ್ತು ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿರುವ ಮೂಲಕ ವಾರಣಾಸಿ ಮಾದರಿಯಾದಿದೆ ಎಂದು ಪ್ರಧಾನಿ ಮೋದಿ ವರ್ಚುವಲ್ ಸಂವಾದದಲ್ಲಿ ಹೇಳಿದರು. ನಾನು ವಾರಣಾಸಿಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ ಮತ್ತು ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವುದಾಗಿ ಪ್ರಧಾನಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ‘ಜಹಾ ಬಿಮಾರ್, ವಹೀ ಉಪ್‌ಚಾರ್’ (ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಮನೆ ಬಾಗಿಲಲ್ಲ ಚಿಕಿತ್ಸೆ) ಎಂಬ ಹೊಸ ಘೋಷಣೆಯನ್ನು ನೀಡಿದ ಮೋದಿ ವಾರಣಾಸಿ ಜಾರಿಗೆ ತಂದ ಮೈಕ್ರೊ ಕಂಟೇನ್ ಮೆಂಟ್ ಜೋನ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊವಿಡ್ -19 ಸೋಂಕಿನ ಸರಪಳಿಯನ್ನು ಮುರಿಯಲು ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿರುವುದನ್ನು ಶ್ಲಾಘಿಸಿದ ಪಿಎಂ ಮೋದಿ ಮತ್ತು ಕಳೆದ ವರ್ಷಗಳಲ್ಲಿ ಬಂದ ಆರೋಗ್ಯ ಮೂಲಸೌಕರ್ಯವು ಕೊವಿಡ್ ತರಂಗದ ವಿರುದ್ಧ ಹೋರಾಡಲು ವಾರಣಾಸಿಗೆ ಸಹಾಯ ಮಾಡಿದೆ ಎಂದಿದ್ದಾರೆ.
ಯೋಗವನ್ನು ಟೀಕಿಸುತ್ತಿರುವ ವಿಪಕ್ಷ ವಿರುದ್ಧ ಕಿಡಿಕಾರಿದ ಮೋದಿ, ” ಯೋಗವನ್ನು ಉತ್ತೇಜಿಸಲು ಪ್ರಾರಂಭಿಸಿದಾಗ ಅದನ್ನು ಅವರು ಅಪಹಾಸ್ಯ ಮಾಡಿದರು. ಕೆಲವರು ಅದಕ್ಕೆ ಕೋಮುವಾದದ ಬಣ್ಣವನ್ನು ನೀಡಿದ್ದರು. ಆದರೆ ಈಗ ಯೋಗವು ಕೊವಿಡ್ -19 ರ ವಿರುದ್ಧ ಹೋರಾಡಲು ಜನರಿಗೆ ಸಹಾಯ ಮಾಡುತ್ತಿದೆ ಎಂದಿದ್ದಾರೆ.
Reviewing COVID-19 situation in Kashi with doctors and frontline workers working there. https://t.co/eIg562g009
— Narendra Modi (@narendramodi) May 21, 2021
ಸಾಂಕ್ರಾಮಿಕ ರೋಗದ ಎರಡನೇ ತರಂಗದಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಪಿಎಂ ಮೋದಿ ಗೌರವ ಸಲ್ಲಿಸಿದರು. ಈ ವೈರಸ್ ನಮ್ಮ ಪ್ರೀತಿಪಾತ್ರರನ್ನು ನಮ್ಮಿಂದ ಕಿತ್ತುಕೊಂಡಿದೆ. ವೈದ್ಯರೊಂದಿಗೆ ಸಂವಾದದ ವೇೆೆಳೆ ಮೋದಿ ಭಾವುಕರಾಗಿದ್ದಾರೆ.
ಪಿಎಂ ಮೋದಿ ವಾರಣಾಸಿ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದಾರೆ. ಕೊವಿಡ್ -19 ರ ಎರಡನೇ ತರಂಗದಲ್ಲಿ, ಇದು ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಅತೀ ಹೆಚ್ಚು ಕೊವಿಡ್ ಪ್ರಕರಣಗಳಿವೆ.
ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿವೆ. ಏಪ್ರಿಲ್ 30 ರಂದು ಗರಿಷ್ಠ ಪ್ರಕರಣ ವರದಿ ಆದ ನಂತರ ರಾಜ್ಯದಲ್ಲಿ ಸಕ್ರಿಯ ಕೊವಿಡ್ -19 ಪ್ರಕರಣಗಳ ಸಂಖ್ಯೆ ಶೇಕಡಾ 62 ರಷ್ಟು ಕಡಿಮೆಯಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.
ಕೊವಿಡ್ ನಿರ್ಬಂಧಗಳಲ್ಲಿ ಯಾವುದೇ ಸಡಿಲತೆಯನ್ನು ತೋರಿಸಬೇಡಿ ಮತ್ತು ಕೋವಿಡ್ ಮಾನದಂಡಗಳನ್ನು ಅನುಸರಿಸುವಂತೆ ಪಿಎಂ ಮೋದಿ ವಾರಣಾಸಿಯ ನಿವಾಸಿಗಳನ್ನು ಕೇಳಿಕೊಂಡರು. ಕೋವಿಡ್ ಸೋಂಕಿತ ಪ್ರಕರಣಗಳು ಕಡಿಮೆಯಾಗಿದ್ದರೂ ನಾವು ಸಿದ್ಧತೆಗಳನ್ನು ಬಿಗಿಯಾಗಿ ಇಟ್ಟುಕೊಳ್ಳಬೇಕು” ಎಂದು ಅವರು ಹೇಳಿದರು.
Published On - 1:00 pm, Fri, 21 May 21