ರೈತರ ಉಗ್ರ ಹೋರಾಟ ನಡುವೆ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಂಡ ಪ್ರಧಾನಿ ಮೋದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 29, 2020 | 1:57 PM

ಸಂಸತ್ತು ಇತ್ತೀಚೆಗಷ್ಟೇ ಕೃಷಿ ಸುಧಾರಣಾ ಮಸೂದೆಗಳನ್ನು ಪಾಸ್ ಮಾಡಿದೆ. ಈ ಕಾಯ್ದೆಗಳು ರೈತರನ್ನು ಸಂಕೋಲೆಯಿಂದ ಮುಕ್ತ ಮಾಡುವ ಜತೆ, ಹೊಸ ಅವಕಾಶ, ಹಕ್ಕುಗಳನ್ನು ಅವರಿಗೆ ನೀಡುತ್ತವೆ. ಈಗಾಗಲೇ ಆ ಅನುಭವ ರೈತರಿಗೆ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ರೈತರ ಉಗ್ರ ಹೋರಾಟ ನಡುವೆ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಂಡ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (FILE PHOTO)
Follow us on

ದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್​, ಹರ್ಯಾಣ ಸೇರಿ ಕೆಲವು ರಾಜ್ಯಗಳ ರೈತರ ಪ್ರತಿಭಟನೆ ಮುಂದುವರಿದಿದೆ. ದೆಹಲಿಯ ಗಡಿ ಪ್ರದೇಶದಲ್ಲಿ ಹೋರಾಟ ಮುಂದುವರಿಸಿದ್ದಾರೆ. ಹೀಗಿರುವಾಗ ಮೋದಿಯವರು ಇಂದು ಮನ್​ ಕೀ ಬಾತ್​ನಲ್ಲಿ ಕೃಷಿ ಕಾಯ್ದೆಯ ಬಗ್ಗೆ ಉಲ್ಲೇಖಿಸಿದ್ದಾರೆ. ನಮ್ಮ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ಸಂಸತ್ತು ಇತ್ತೀಚೆಗಷ್ಟೇ ಕೃಷಿ ಸುಧಾರಣಾ ಮಸೂದೆಗಳನ್ನು ಪಾಸ್ ಮಾಡಿದೆ. ಈ ಕಾಯ್ದೆಗಳು ರೈತರನ್ನು ಸಂಕೋಲೆಯಿಂದ ಮುಕ್ತ ಮಾಡುವ ಜತೆ, ಹೊಸ ಅವಕಾಶ, ಹಕ್ಕುಗಳನ್ನು ಅವರಿಗೆ ನೀಡುತ್ತವೆ. ಈಗಾಗಲೇ ಆ ಅನುಭವ ರೈತರಿಗೆ ಆಗಿದೆ. ಈ ಕಾನೂನಿನ ಅನ್ವಯ ಆಯಾ ಪ್ರದೇಶಗಳಲ್ಲಿರುವ ಸಬ್​ ಡಿವಿಜನ್​ ಮ್ಯಾಜಿಸ್ಟ್ರೇಟ್​ಗಳು ರೈತರ ದೂರು, ಸಮಸ್ಯೆಗಳನ್ನು ಒಂದು ತಿಂಗಳೊಳಗೇ ಪರಿಹರಿಸಬೇಕಾಗಿದೆ. ಇದರಿಂದ ತುಂಬ ಅನುಕೂಲ ಆಗಲಿದೆ. ರೈತನಿಂದ ಖರೀದಿಸಿದ ಬೆಳೆಯ ಬಾಕಿಯನ್ನು ಖರೀದಿದಾರರು ತುಂಬ ದಿನ ಉಳಿಸಿಕೊಳ್ಳುವಂತಿಲ್ಲ. ಮೂರು ದಿನಗಳ ಒಳಗೆ ಎಲ್ಲ ಹಣವನ್ನೂ ಕೊಟ್ಟು ಬಿಡಬೇಕು. ಇಲ್ಲದಿದ್ದರೆ ರೈತರು ದೂರು ನೀಡಬಹುದು ಎಂಬುದನ್ನು ಹೊಸ ಕಾನೂನು ತಿಳಿಸುತ್ತದೆ ಎಂದು ನರೇಂದ್ರ ಮೋದಿ ಹೇಳಿದರು.

ಗಡಿ ಭಾಗಗಳಲ್ಲಿ ನಡೆಯುತ್ತಿರುವ ರೈತರು ನಡೆಸುತ್ತಿರುವ ಉಗ್ರ ಪ್ರತಿಭಟನೆ ನಡುವೆಯೂ ಪ್ರಧಾನಿ ಮೋದಿಯವರು ಈ ಕಾಯ್ದೆಯನ್ನು ಮತ್ತಷ್ಟು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: 100 ವರ್ಷಗಳ ಹಿಂದೆ ಕಳುವಾಗಿದ್ದ ಅನ್ನಪೂರ್ಣಾ ವಿಗ್ರಹ ಮರಳಿ ಭಾರತಕ್ಕೆ: ಮನ್​ ಕಿ ಬಾತ್​ನಲ್ಲಿ ಮೋದಿ ಖುಷಿ