Narendra Modi US visit: ದೆಹಲಿಯಿಂದ ನೇರವಾಗಿ ವಾಷಿಂಗ್ಟನ್ ತಲುಪಿದ ಪ್ರಧಾನಿ ಮೋದಿ! ವಿಶೇಷ ಏನು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Sep 23, 2021 | 11:18 AM

Boeing 777-300 ER aircraft: ಹೀಗೆ ಇಂಧನ ತುಂಬಿಸಿಕೊಳ್ಳಲು ಫ್ರಾಂಕ್‌ಫರ್ಟ್‌ನಲ್ಲಿ ಇಳಿಯದೆ ನೇರವಾಗಿ ವಾಷಿಂಗ್ಟನ್ ಡಿಸಿ ತಲುವುದಕ್ಕೆ ಹೇಗಾಯಿತು ಅಂದರೆ ಇದಕ್ಕೆ ಪ್ರಧಾನಿ ಮೋದಿಯ ಹೊಸ ವಿಮಾನದ ವಿಶೇಷತೆ ಕಾರಣವಾಗಿದೆ. ಇದು ಹೊಸ ಏರ್ ಇಂಡಿಯಾ ಒನ್ ಬೋಯಿಂಗ್ ವಿಮಾನದಿಂದಾಗಿ ಸಾಧ್ಯವಾಗಿದೆ.

Narendra Modi US visit: ದೆಹಲಿಯಿಂದ ನೇರವಾಗಿ ವಾಷಿಂಗ್ಟನ್ ತಲುಪಿದ ಪ್ರಧಾನಿ ಮೋದಿ! ವಿಶೇಷ ಏನು ಗೊತ್ತಾ?
ಸುದೀರ್ಘ ಪ್ರಯಾಣ: ದೆಹಲಿಯಿಂದ ನೇರವಾಗಿ ವಾಷಿಂಗ್ಟನ್ ತಲುಪಿದ ಮೋದಿ! ವಿಶೇಷ ಏನು ಗೊತ್ತಾ?
Follow us on

ದೆಹಲಿ: ಮೂರು ದಿನಗಳ ಅಮೆರಿಕಾ ಪ್ರವಾಸಕ್ಕಾಗಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ವಾಷಿಂಗ್ಟನ್​ನಲ್ಲಿ ಬಂದಿಳಿದಿದ್ದಾರೆ. ಗಮನಾರ್ಹವೆಂದರೆ ಪ್ರಧಾನಿ ಮೋದಿ ದೆಹಲಿಯಿಂದ ನೇರವಾಗಿ ವಾಷಿಂಗ್ಟನ್ ಡಿಸಿ ತಲುಪಿದ್ದಾರೆ. ಸಾಮಾನ್ಯವಾಗಿ ದೆಹಲಿಯಿಂದ ವಾಷಿಂಗ್ಟನ್‌ಗೆ 12ರಿಂದ 15 ಗಂಟೆಯ ಪ್ರಯಾಣ ಮಾಡಬೇಕಾಗುತ್ತದೆ. ಹೀಗಾಗಿ ಈ ಮೊದಲು ಫ್ರಾಂಕ್‌ಫರ್ಟ್‌ನಲ್ಲಿ ಲ್ಯಾಂಡಿಂಗ್ ಆಗ್ತಿತ್ತು. ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಇಂಧನ ತುಂಬಿಸಿಕೊಳ್ಳಲಾಗುತ್ತಿತ್ತು. ಆದ್ರೆ ಈಗ ವಿಮಾನ ಫ್ರಾಂಕ್‌ಫರ್ಟ್‌ನಲ್ಲಿ ಲ್ಯಾಂಡಿಂಗ್ ಆಗಿಲ್ಲ. ನೇರವಾಗಿ ದೆಹಲಿಯಿಂದ ವಾಷಿಂಗ್ಟನ್ ಡಿಸಿಗೆ ಪ್ರಯಾಣ ಮಾಡಲಾಗಿದೆ. ಹಾಗಾದರೆ ಏನಿದರ ವಿಶೇಷ ಎಂದು ನೋಡುವುದಾದರೆ

ಹೀಗೆ ಇಂಧನ ತುಂಬಿಸಿಕೊಳ್ಳಲು ಫ್ರಾಂಕ್‌ಫರ್ಟ್‌ನಲ್ಲಿ ಇಳಿಯದೆ ನೇರವಾಗಿ ವಾಷಿಂಗ್ಟನ್ ಡಿಸಿ ತಲುವುದಕ್ಕೆ ಹೇಗಾಯಿತು ಅಂದರೆ ಇದಕ್ಕೆ ಪ್ರಧಾನಿ ಮೋದಿಯ ಹೊಸ ವಿಮಾನದ ವಿಶೇಷತೆ ಕಾರಣವಾಗಿದೆ. ಇದು ಹೊಸ ಏರ್ ಇಂಡಿಯಾ ಒನ್ ಬೋಯಿಂಗ್ ವಿಮಾನದಿಂದಾಗಿ ಸಾಧ್ಯವಾಗಿದೆ. ಇದು ದೀರ್ಘಾವಧಿಯ ಹಾರಾಟದ ಸಾಮರ್ಥ್ಯ ಹೊಂದಿದೆ. ಮಾರ್ಗ ಮಧ್ಯೆ ಇಂಧನ ಮರುಭರ್ತಿಯ ಅಗತ್ಯ ಇರುವುದಿಲ್ಲ.

ಪ್ರಧಾನಿ ಮೋದಿಗಾಗಿ ಕಳೆದ ವರ್ಷ ಬೋಯಿಂಗ್ ವಿಮಾನ ಖರೀದಿ ಮಾಡಲಾಗಿತ್ತು. 4,500 ಕೋಟಿ ರೂಪಾಯಿ ವೆಚ್ಚದಲ್ಲಿ ಬೋಯಿಂಗ್ ವಿಮಾನ ಖರೀದಿ ಮಾಡಲಾಗಿತ್ತು. ಅಂದಹಾಗೆ, ಈ ವಿಮಾನದಲ್ಲಿ 2ನೇ ಬಾರಿಗೆ ಪ್ರಧಾನಿ ಮೋದಿ ವಿದೇಶ ಪ್ರಯಾಣ ಮಾಡಿದ್ದಾರೆ. ಪ್ರಸಕ್ತ ವರ್ಷ ಮಾರ್ಚ್‌ನಲ್ಲಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಇದೀಗ ಅಮೆರಿಕಕ್ಕೆ ತೆರಳಿದ್ದಾರೆ.

ಇದರೊಂದಿಗೆ ಭಾರತ ಈಗ ಅಡ್ವಾನ್ಸ್ಡ್​​ ಏರ್ ಕ್ರಾಫ್ಟ್ ಹೊಂದಿದಂತಾಗಿದೆ. ಈ ಹಿಂದೆ ಪ್ರಧಾನ ಮಂತ್ರಿಯಾಗಿದ್ದಾಗ ಮನಮೋಹನ್ ಸಿಂಗ್ ಕಾಲದಲ್ಲೂ ಆಮೆರಿಕಕ್ಕೆ ಹೋಗಲು ಜರ್ಮನಿಯ ಫ್ರಾಂಕ್ ಫರ್ಟ್ ನಲ್ಲಿ ವಿಮಾನ ಲ್ಯಾಂಡಿಂಗ್ ಆಗುತ್ತಿತ್ತು.

ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಪ್ರಧಾನಿ ಮೋದಿ ಸಾಲು ಸಾಲು ಸಭೆ |Tv9Kannada

Also Read:
ಕೊರೊನಾ ಗ್ಯಾಪ್ ಬಳಿಕ ವಾಷಿಂಗ್ಟನ್ಟ್​ಗೆ ಬಂದಿಳಿದ ಪ್ರಧಾನಿ ಮೋದಿ: ಯಾವುದೇ ಗ್ಯಾಪ್ ಇಲ್ಲದೆ ಜನರೊಂದಿಗೆ ಮುಕ್ತವಾಗಿ ಬೆರೆತರು

ಇದನ್ನೂ ಓದಿ: 
ಶ್ವೇತ ಭವನದಲ್ಲಿ ಬೆಚ್ಚನೆಯ ಅಪ್ಪುಗೆಗಳು, ಹೊಸ ವೈಬ್ಸ್ ಶುರು​! ಇದಕ್ಕೆ ಕಾರಣವೇನು? ಕೊರೊನಾ ಕಾಟ ಮುಗಿಯಿತಾ?

(Prime Minister Narendra Modi first US trip on Air India One boeing special aircraft)

Published On - 8:36 am, Thu, 23 September 21