Amarinder Singh ರಾಹುಲ್ ಮತ್ತು ಪ್ರಿಯಾಂಕಾ ನನ್ನ ಮಕ್ಕಳಂತೆ; ನವಜೋತ್ ಸಿಂಗ್ ಸಿಧುವನ್ನು ಪಂಜಾಬ್ ಸಿಎಂ ಆಗಲು ಬಿಡಲ್ಲ: ಅಮರಿಂದರ್ ಸಿಂಗ್

Navjot Singh Sidhu: ಪ್ರಿಯಾಂಕಾ ಮತ್ತು ರಾಹುಲ್ ನನ್ನ ಮಕ್ಕಳಂತೆ. ಇದು ಹೀಗೆ ಮುಗಿಯಬಾರದಿತ್ತು. ನನಗೆ ನೋವಾಗಿದೆ" ಎಂದು ರಾಜೀವ್ ಗಾಂಧಿಯ ಸ್ನೇಹಿತರಾಗಿದ್ದ ಸಿಂಗ್, ಅವರು ತಮ್ಮ ಸಲಹೆಗಾರರಿಂದ ಸ್ಪಷ್ಟವಾಗಿ ದಾರಿ ತಪ್ಪಿದ್ದಾರೆ ಎಂದು ಹೇಳಿದರು.

Amarinder Singh ರಾಹುಲ್ ಮತ್ತು ಪ್ರಿಯಾಂಕಾ ನನ್ನ ಮಕ್ಕಳಂತೆ; ನವಜೋತ್ ಸಿಂಗ್ ಸಿಧುವನ್ನು ಪಂಜಾಬ್ ಸಿಎಂ ಆಗಲು ಬಿಡಲ್ಲ: ಅಮರಿಂದರ್ ಸಿಂಗ್
ಅಮರಿಂದರ್ ಸಿಂಗ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 22, 2021 | 8:23 PM

ಚಂಡೀಗಢ: ನವಜೋತ್ ಸಿಂಗ್ ಸಿಧುವನ್ನು(Navjot Singh Sidhu) ಪಂಜಾಬ್ ಮುಖ್ಯಮಂತ್ರಿಯಾಗಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ (Amarinder Singh )ಬುಧವಾರ ಹೇಳಿದ್ದಾರೆ. ಚರಣ್​​ಜಿತ್ ಸಿಂಗ್ ಛನ್ನಿ(Charanjit Singh Channi) ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದು ಮುಂಬರುವ ಚುನಾವಣೆಯಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಯಾಗುವ ಅವಕಾಶವನ್ನು ಹೆಚ್ಚಿಸಿದ್ದಾರೆ. ಸಿಧು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದೇನೆ. ಹೀಗಾಗಿ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕ್ಯಾಪ್ಟನ್ ಅವರ ಮುಂದಿನ ರಾಜಕೀಯ ಯೋಜನೆಗಳ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದಾರೆ. ಅಮರಿಂದರ್ ಸಿಂಗ್ ಅವರು ಪಕ್ಷದ ಆಂತರಿಕ ಕಲಹದ ನಡುವೆ ಶನಿವಾರ ರಾಜೀನಾಮೆ ನೀಡುತ್ತಿದ್ದಂತೆ, ಪಕ್ಷದ ಇತ್ತೀಚಿನ ಬೆಳವಣಿಗೆಯಿಂದಾಗಿ ಅವರು ಎಷ್ಟು ಅವಮಾನ ಅನುಭವಿಸಿದರು ಎಂಬುದನ್ನು ಬಹಿರಂಗಪಡಿಸಿದ್ದರು. ಪಕ್ಷದ ಹೈಕಮಾಂಡ್ ತನ್ನ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಆರಂಭಿಸಿದ್ದಕ್ಕೆ ಅವರು ಖೇದ ವ್ಯಕ್ತ ಪಡಿಸಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಭಾನುವಾರ ಕರೆಯಲಾಗಿದ್ದು, ಅಮರಿಂದರ್ ಸಿಂಗ್ ಅವರ ಅರಿವಿಲ್ಲದೆ ಅವರನ್ನು ಬದಲಿಸುವ ಬಗ್ಗೆ ಅಲ್ಲಿ ನಿರ್ಧರಿಸಲಾಗಿತ್ತು. ಸಭೆಗೆ ಮುನ್ನ ಅಮರಿಂದರ್ ಸಿಂಗ್ ರಾಜ್ಯಪಾಲರ ಭವನಕ್ಕೆ ಹೋಗಿ ರಾಜೀನಾಮೆ ನೀಡಿದರು. ಶನಿವಾರ ಬೆಳಿಗ್ಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದೇನೆ ಎಂದು ಅವರು ಹೇಳಿದರು.

ಬುಧವಾರ ಚರಣ್​​ಜಿತ್ ಸಿಂಗ್ ಛನ್ನಿ ಚುನಾವಣೆಯ ಹೊಸ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎರಡು ದಿನಗಳ ನಂತರ ಮಾತನಾಡಿದ ಅಮರಿಂದರ್ ಸಿಂಗ್ ನಾನು ಮೂರು ವಾರಗಳ ಹಿಂದೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ ಆ ಸಮಯದಲ್ಲಿ ನನ್ನನ್ನು ಮುಂದುವರಿಯುವಂತೆ ಕೇಳಲಾಯಿತು. “ಅವರು (ಸೋನಿಯಾ) ನನಗೆ ಕರೆ ಮಾಡಿ ನನ್ನನ್ನು ಕೆಳಗಿಳಿಯುವಂತೆ ಕೇಳಿದ್ದರೆ, ನಾನು ಮಾಡುತ್ತಿದ್ದೆ. ಒಬ್ಬ ಸೈನಿಕನಾಗಿ, ನನ್ನ ಕೆಲಸವನ್ನು ಹೇಗೆ ಮಾಡಬೇಕೆಂದು ನನಗೆ ತಿಳಿದಿದೆ ಎಂದು ಸಿಂಗ್ ಹೇಳಿದರು.

ಪ್ರಿಯಾಂಕಾ ಮತ್ತು ರಾಹುಲ್ ನನ್ನ ಮಕ್ಕಳಂತೆ. ಇದು ಹೀಗೆ ಮುಗಿಯಬಾರದಿತ್ತು. ನನಗೆ ನೋವಾಗಿದೆ” ಎಂದು ರಾಜೀವ್ ಗಾಂಧಿಯ ಸ್ನೇಹಿತರಾಗಿದ್ದ ಸಿಂಗ್, ಅವರು ತಮ್ಮ ಸಲಹೆಗಾರರಿಂದ ಸ್ಪಷ್ಟವಾಗಿ ದಾರಿ ತಪ್ಪಿದ್ದಾರೆ ಎಂದು ಹೇಳಿದರು. ಪಂಜಾಬಿನಲ್ಲಿನ ನಾಟಕೀಯ ಬೆಳವಣಿಗೆ ಮತ್ತು ಅಮರಿಂದರ್ ಸಿಂಗ್ ಅವರ ಸುದೀರ್ಘ ಮುಖ್ಯಮಂತ್ರಿ ಸ್ಥಾನವನ್ನು ಹಠಾತ್ ಆಗಿ ಕೊನೆಗೊಳಿಸಿದ ರೀತಿ ಅನಿರೀಕ್ಷಿತವಾಗಿತ್ತು. ಅಮರಿಂದರ್ ಸಿಂಗ್ ಅವರ ಗಾಂಧಿ ಕುಟುಂಬದೊಂದಿಗೆ ನಿಕಟ ಸಂಬಂಧವಿತ್ತು.  ಜನರು ತಮ್ಮ ಸರ್ಕಾರದಿಂದ ಸಂತೋಷವಾಗಿದ್ದಾಗ, ಚುನಾವಣೆ ಹತ್ತಿರವಿದ್ದಾಗ ಅವರನ್ನೇಕೆ ಬದಲಿಸಲಾಯಿತು ಎಂದು ಅರ್ಥವಾಗುತ್ತಿಲ್ಲ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಅಮರಿಂದರ್ ವಿರೋಧದ ನಡುವೆಯೂ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಏರಿದಾಗ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಧು ನಡುವೆ ಸಂಘರ್ಷ ನಡೆಯುತ್ತಿತ್ತು. ಅಮರಿಂದರ್ ಸಿಂಗ್ ಅವರು ಸಿಧು ಅವರ ಸಲಹೆಗಾರರು ಸಾಮಾನ್ಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದನ್ನು ನಿರ್ಬಂಧಿಸಿದರು. ಘರ್ಷಣೆ ನಡೆಯುತ್ತಿದ್ದಂತೆ ಅಮರಿಂದರ್ ಸುಮಾರು 60 ಶಾಸಕರ ಬೆಂಬಲವನ್ನು ಕಳೆದುಕೊಂಡರು. ಇದು ಅಂತಿಮವಾಗಿ ಪಂಜಾಬ್‌ನಲ್ಲಿ ರಾತ್ರೋರಾತ್ರಿ ನಾಯಕತ್ವ ಬದಲಾವಣೆಗೆ ಕಾರಣವಾಯಿತು.

ಕರ್ತಾಪುರ್ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಅವರನ್ನು ಸಿಧು ಅಪ್ಪಿಕೊಂಡಿದ್ದನ್ನು ಉಲ್ಲೇಖಿಸಿದ ಅಮರಿಂದರ್ ಸಿಂಗ್, ಸಿಧು ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರೆ ವಿರೋಧಿಸುವುದಾಗಿ ಹೇಳಿದ್ದರು. ಸಿಧುವನ್ನು “ದೇಶ ವಿರೋಧಿ, ಅಪಾಯಕಾರಿ, ಅಸ್ಥಿರ, ಅಸಮರ್ಥ” ಎಂದು ಕರೆದ ಅಮರಿಂದರ್ ಸಿಂಗ್, ಗಡಿ ರಾಜ್ಯದ ಸಿಎಂ ಆಗಿ ಸಿಧು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಲಿದ್ದಾರೆ ಎಂದು ಹೇಳಿದರು.

ಕ್ಯಾಪ್ಟನ್ ರಾಜೀನಾಮೆ ನೀಡಿದ ಒಂದು ದಿನದ ನಂತರ ಭಾನುವಾರ ಚರಣ್​​ಜಿತ್ ಸಿಂಗ್ ಛನ್ನಿಯನ್ನು ಮುಖ್ಯಮಂತ್ರಿಯಾಗಿ ಘೋಷಿಸಲಾಯಿತು. ಆದರೆ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಪಂಜಾಬ್ ಸಿಧು ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತದೆ ಎಂದು ಹೇಳಿದ್ದು ಈ ಹೇಳಿಕೆಯು ಕಾಂಗ್ರೆಸ್ ನಾಯಕರನ್ನು ಗೊಂದಲಕ್ಕೀಡು ಮಾಡಿತು.

ಇದನ್ನೂ ಓದಿ:‘ಸಿಧು ನೇತೃತ್ವದಲ್ಲಿ ಪಂಜಾಬ್ ಚುನಾವಣೆ’ ಹರೀಶ್ ರಾವತ್ ಟ್ವೀಟ್ ಪ್ರಶ್ನಿಸಿದ ಕಾಂಗ್ರೆಸ್ ಹಿರಿಯ ನಾಯಕ ಸುನಿಲ್ ಜಾಖಡ್

ಇದನ್ನೂ ಓದಿ: Punjab Politics: ಪಂಜಾಬ್​​ ಸಿಎಂ ಅಮರಿಂದರ್​ ಸಿಂಗ್​ ರಾಜೀನಾಮೆ?-ಬಿಜೆಪಿ ಹಾದಿಯನ್ನೇ ತುಳಿಯಿತಾ ಕಾಂಗ್ರೆಸ್​ !

(Will never allow Navjot Singh Sidhu to become the CM of Punjab says Amarinder Singh)

Published On - 8:21 pm, Wed, 22 September 21

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ