ನಾಗರ್‌ಕರ್ನೂಲ್ (ತೆಲಂಗಾಣ): ಕಾಂಗ್ರೆಸ್ (Congress) ಮತ್ತು ಭಾರತ್ ರಾಷ್ಟ್ರ ಸಮಿತಿಯ (Bharat Rasthra Samithi) ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಎರಡೂ ಪಕ್ಷಗಳು ಒಟ್ಟಾಗಿ ತೆಲಂಗಾಣದ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪುಡಿಮಾಡಿವೆ ಎಂದು ಹೇಳಿದ್ದಾರೆ. ನಾಗರ್‌ಕರ್ನೂಲ್‌ನಲ್ಲಿ (Nagarkurnool) ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಇಂದು ತೆಲಂಗಾಣ ಜನರು ಮೂರನೇ ಬಾರಿಗೆ ಮೋದಿಯನ್ನು ಅಧಿಕಾರಕ್ಕೇರಿಸಲು ನಿರ್ಧರಿಸಿರುವುದನ್ನು ನಾನು ನೋಡಿದ್ದೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆ 2024 ದಿನಾಂಕವನ್ನು ದೆಹಲಿಯಲ್ಲಿ ಸ್ವಲ್ಪ ಸಮಯದ ನಂತರ ಪ್ರಕಟಿಸಲಾಗುವುದು. ಆದರೆ, ಚುನಾವಣಾ ದಿನಾಂಕಗಳು ಅಧಿಕೃತವಾಗಿ ಘೋಷಣೆಯಾಗುವ ಮೊದಲೇ ದೇಶದ ಜನರು ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ. ದೇಶವು ‘ಅಬ್ ಕೀ ಬಾರ್ 400 ಪಾರ್’ ಎಂದು ಘೋಷಿಸಿದೆ. ನಾಗರ್‌ಕರ್ನೂಲ್‌ನಲ್ಲಿರುವ ಜನಸಮೂಹವು ಅದಕ್ಕೆ ಸಾಕ್ಷಿಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
“ಸುದ್ದಿ ಚಾನೆಲ್‌ಗಳು ನಡೆಸಿದ ಸಮೀಕ್ಷೆಯ ಪ್ರಕಾರ, ಬಿಜೆಪಿ ಅಬ್ ಕೀ ಬಾರ್, 400 ಪಾರ್’ ಆಗಲಿದೆ ಎಂಬುದು ಸ್ಪಷ್ಟವಾಗಿದೆ!” ಎಂದಿದ್ದಾರೆ ಮೋದಿ.
There is immense support for the BJP’s development agenda across Telangana. The vibrancy at the rally in Nagarkurnool is exceptional.https://t.co/SLM0VXnmD6
— Narendra Modi (@narendramodi) March 16, 2024
“ಕಾಂಗ್ರೆಸ್ ಮತ್ತು ಬಿಆರ್‌ಎಸ್ ತೆಲಂಗಾಣದ ಎಲ್ಲಾ ಕನಸುಗಳನ್ನು ಭಗ್ನಗೊಳಿಸಿದೆ. ಮೊದಲು ಅದು ಬಿಆರ್‌ಎಸ್‌ನ ‘ಮಹಾ ಲೂಟಿ’ ಆಗಿತ್ತು. ಈಗ ಅದು ಕಾಂಗ್ರೆಸ್‌ನ ‘ಬುರಿ ನಜರ್’ (ಕೆಟ್ಟ ದೃಷ್ಟಿ). ಕಾಂಗ್ರೆಸ್‌ಗೆ ತೆಲಂಗಾಣವನ್ನು ನಾಶಮಾಡಲು ಐದು ವರ್ಷ ಸಾಕು ಎಂದಿದ್ದಾರೆ ಪ್ರಧಾನಿ.
ನಾವು ತೆಲಂಗಾಣವನ್ನು ‘ದಕ್ಷಿಣದ ಹೆಬ್ಬಾಗಿಲು’ ಎಂದು ಕರೆಯುತ್ತೇವೆ. ಕಳೆದ 10 ವರ್ಷಗಳಲ್ಲಿ ತೆಲಂಗಾಣದ ಅಭಿವೃದ್ಧಿಯು ನಮಗೆ ಆದ್ಯತೆಯಾಗಿದೆ. ತೆಲಂಗಾಣ ಕಾಂಗ್ರೆಸ್ ಮತ್ತು ಬಿಆರ್‌ಎಸ್‌ನ ನೀತಿಗಳ ನಡುವೆ ವಿಭಜನೆಯಾಯಿತು. ಈ ಎರಡೂ ಪಕ್ಷಗಳು ಒಟ್ಟಾಗಿ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪುಡಿಮಾಡಿವೆ. ತೆಲಂಗಾಣದಲ್ಲಿ ಮೊದಲು ಬಿಆರ್‌ಎಸ್‌ನ ಮಹಾ ಲೂಟಿ ಇತ್ತು, ಈಗ ಕಾಂಗ್ರೆಸ್‌ನ ಬುರಿ ನಜರ್ ಆಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Anuradha Paudwal: ಖ್ಯಾತ ಗಾಯಕಿ ಅನುರಾಧ ಪೌಡ್ವಾಲ್ ಬಿಜೆಪಿಗೆ ಸೇರ್ಪಡೆ
‘ಗರೀಬಿ ಹಠಾವೋ’ ಘೋಷಣೆಯನ್ನು ಕಾಂಗ್ರೆಸ್ ನೀಡಿದ್ದು, ಬಡವರ ಜೀವನದಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ಪ್ರಧಾನಿ ಮೋದಿ ತೆಲಂಗಾಣ ಜನರನ್ನು ಕೇಳಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ರಣತಂತ್ರಗಳನ್ನು ರೂಪಿಸುತ್ತಿದೆ. ಪಕ್ಷದ ಪ್ರಮುಖ ನಾಯಕರು ಈಗಾಗಲೇ ತೆಲಂಗಾಣದತ್ತ ಗಮನ ಹರಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳ ಪೈಕಿ ಒಂಬತ್ತು ಕ್ಷೇತ್ರಗಳಿಗೆ ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ