Anuradha Paudwal: ಖ್ಯಾತ ಗಾಯಕಿ ಅನುರಾಧ ಪೌಡ್ವಾಲ್ ಬಿಜೆಪಿಗೆ ಸೇರ್ಪಡೆ

ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಬಿಜೆಪಿ ಸೇರಿದ್ದಾರೆ.  ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕಿಯೂ ಆಗಿರುವ ಅನುರಾಧಾ ಪೌಡ್ವಾಲ್,ಭಕ್ತಿಗೀತೆ, ಭಜನಾ ಗಾಯನ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಸೇರಿರುವ ಅನುರಾಧಾ ಅವರು ಸ್ಟಾರ್ ಪ್ರಚಾರಕರಾಗುವ ಸಾಧ್ಯತೆ ಇದೆ.

Anuradha Paudwal: ಖ್ಯಾತ ಗಾಯಕಿ ಅನುರಾಧ ಪೌಡ್ವಾಲ್ ಬಿಜೆಪಿಗೆ ಸೇರ್ಪಡೆ
ಅನುರಾಧಾ ಪೌಡ್ವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 16, 2024 | 1:58 PM

ದೆಹಲಿ ಮಾರ್ಚ್ 16: ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ (Anuradha Paudwal) ಇಂದು (ಶನಿವಾರ) ಬಿಜೆಪಿಗೆ (BJP) ಸೇರ್ಪಡೆಯಾಗಿದ್ದಾರೆ. ಲೋಕಸಭೆ ಚುನಾವಣೆ (Lok Sabha Election) ದಿನಾಂಕ ಘೋಷಣೆಯಾಗುವ ಮುನ್ನವೇ ಅನುರಾಧಾ ಪೌಡ್ವಾಲ್ ಬಿಜೆಪಿ ಸೇರಿರುವುದರಿಂದ ಪಕ್ಷವು ಚುನಾವಣೆಯ ದೊಡ್ಡ ಜವಾಬ್ದಾರಿಯನ್ನು ನೀಡಬಹುದು ಎಂದು ತಜ್ಞರು ಹೇಳುತ್ತಾರೆ. ಬಿಜೆಪಿ ಪಕ್ಷದ ಸ್ಟಾರ್ ಚುನಾವಣಾ ಪ್ರಚಾರಕ್ಕೂ ಅನುರಾಧಾ ಬರಬಹುದು ಎಂದು ನಿರೀಕ್ಷಿಸಲಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ಮುಖ್ಯ ವಕ್ತಾರ ಅನಿಲ್ ಬಲುನಿ ಸೇರಿದಂತೆ ಅದರ ಹಿರಿಯ ನಾಯಕರ ಸಮ್ಮುಖದಲ್ಲಿ ಗಾಯಕಿ ಬಿಜೆಪಿ ಸೇರಿದ್ದಾರೆ.

ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕಿಯೂ ಆಗಿರುವ ಅನುರಾಧಾ ಪೌಡ್ವಾಲ್ ,ಭಕ್ತಿಗೀತೆ, ಭಜನಾ ಗಾಯನ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅಕ್ಟೋಬರ್ 27, 1954 ರಂದು ಮುಂಬೈನಲ್ಲಿ ಜನಿಸಿದ ಅನುರಾಧಾ, 1973 ರಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಯಪ್ರದಾ ಅಭಿನಯದ ‘ಅಭಿಮಾನ್’ ಚಿತ್ರದ ಮೂಲಕ ತಮ್ಮ ಗಾಯನ ವೃತ್ತಿಜೀವನವನ್ನು ಪ್ರಾರಂಭಿಸಿದರು. ‘ಆಶಿಕಿ’, ‘ದಿಲ್ ಹೈ ಕೀ ಮಾನ್ತಾ  ನಹಿ’ ಮತ್ತು ‘ಬೇಟಾ’ ಚಿತ್ರಗಳಲ್ಲಿನ ಗಾಯನಕ್ಕಾಗಿ ಅನುರಾಧಾ ಪೌಡ್ವಾಲ್ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ದಕ್ಕಿತ್ತು. 80-90ರ  ದಶಕದಲ್ಲಿ ಅನುರಾಧಾ ಪೌಡ್ವಾಲ್ ಹಾಡಿದ ಬಹುತೇಕ ಹಾಡುಗಳು ಹಿಟ್ ಆಗಿದ್ದವು.

ಅನುರಾಧಾ ಪೌಡ್ವಾಲ್ ಬಿಜೆಪಿಗೆ

ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅನುರಾಧಾ ಪೌಡ್ವಾಲ್ ಗುಜರಾತಿ, ಹಿಂದಿ, ಕನ್ನಡ, ಮರಾಠಿ, ಸಂಸ್ಕೃತ, ಬಂಗಾಳಿ, ತಮಿಳು, ತೆಲುಗು, ಒರಿಯಾ, ಅಸ್ಸಾಮಿ, ಪಂಜಾಬಿ, ಭೋಜ್‌ಪುರಿ, ನೇಪಾಳಿ ಮತ್ತು ಸೇರಿದಂತೆ ಭಾಷೆಗಳಲ್ಲಿ 9,000 ಕ್ಕೂ ಹೆಚ್ಚು ಹಾಡುಗಳನ್ನು ಮತ್ತು 1,500 ಕ್ಕೂ ಹೆಚ್ಚು ಭಜನೆಗಳನ್ನು ರಚಿಸಿದ್ದಾರೆ.

“ಸನಾತನ ಧರ್ಮದೊಂದಿಗೆ ಗಾಢವಾದ ಸಂಪರ್ಕ” ಹೊಂದಿರುವ ಸರ್ಕಾರವನ್ನು ಸೇರಲು ನನಗೆ ಸಂತೋಷವಾಗಿದೆ ಎಂದು ಪೌಡ್ವಾಲ್ ಹೇಳಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದು, ಮೋದಿ ನೇತೃತ್ವದ ಪಕ್ಷಕ್ಕೆ ಸೇರಲು ನನಗೆ ಸಂತೋಷವಾಗಿದೆ ಎಂದು ಹೇಳಿದರು. ಸನಾತನ (ಧರ್ಮ) ದೊಂದಿಗೆ ಗಾಢವಾದ ಸಂಬಂಧ ಹೊಂದಿರುವ ಸರ್ಕಾರಕ್ಕೆ ನಾನು ಸೇರ್ಪಡೆಯಾಗುತ್ತಿರುವುದು ನನಗೆ ಖುಷಿ ತಂದಿದೆ.ಇಂದು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಇದು ಕಾನೂನು ಬಾಹಿರ ಕ್ರಮ’: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಬಂಧಿಸಿದ ನಂತರ ಕೆ ಕವಿತಾ ಪ್ರತಿಕ್ರಿಯೆ

ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿದ್ದಾರೆ ಅನುರಾಧಾ ಪೌಡ್ವಾಲ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Sat, 16 March 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ